ಪ್ರಯಾಗ ರಾಜ್ : ಬಹುಕಾಲ ಚಿತ್ರರಂಗವನ್ನು ಆಳಿದ ಖ್ಯಾತ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಈಗ ಅಧ್ಯಾತ್ಮದ ಹಾದಿಯಲ್ಲಿ ನಡೆದಿದ್ದಾರೆ. ಅವರು ಈಗ ಸಾಧ್ವಿಯಾಗಿದ್ದಾರೆ. ಸನ್ಯಾಸವನ್ನು ಪಡೆದು ಆಡಂಬರದ ಜೀವನದಿಂದ ದೂರವಾಗಿದ್ದಾರೆ.ತ್ರಿವೇಣಿ ಸಂಗಮದ ಮಹಾ ಕುಂಭಮೇಳದಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದಾರೆ. ಆಚಾರ್ಯ ಪುರೋಹಿತರ ಸಮ್ಮುಖದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸನ್ಯಾಸ ದೀಕ್ಷೆ ನಡೆದಿದೆ.
ಒಂದು ಕಾಲದಲ್ಲಿ ಟಾಪ್ಲೆಸ್ ಫೋಟೋಗಳು ಮತ್ತು 2000 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಕೇಸ್ ಮೂಲಕ ಸಂಚಲನ ಮೂಡಿಸಿದ್ದ ಈ ನಟಿ ಈಗ ಸನ್ಯಾಸಿನಿ.ಕಿನ್ನರ ಅಖಾಡದಲ್ಲಿ ಮಹಾಮಂಡಲೇಶ್ವರಿಯಾಗಿದ್ದಾರೆ. ಕಿನ್ನರ ಅಖಾಡ ಆಚಾರ್ಯ ಮಹಾಮಂಡಲೇಶ್ವರಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರ ನೇತೃತ್ವದಲ್ಲಿ ಅವರ ಪಟ್ಟಾಭಿಷೇಕ ನಡೆದಿದೆ .ಹರಹರ ಮಹಾದೇವ್ ಜಯಘೋಷದೊಂದಿಗೆ ಅಖಾಡದಲ್ಲಿ ಧಾರ್ಮಿಕ ಧ್ವಜದ ಅಡಿಯಲ್ಲಿ ಪಟ್ಟಾಭಿಷೇಕ ನೇರವೇರಿದೆ.
ಮಮತಾ ಕುಲಕರ್ಣಿ ಅವರು ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ರುದ್ರಾಕ್ಷಿ ಹಾರ, ಹಣೆಗೆ ವಿಭೂತಿ,ಭುಜಕ್ಕೆ ಖಾವಿ ಚೀಲ ನೇತು ಹಾಕಿರುವ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸನ್ಯಾಸ ಸ್ವೀಕರಿಸಿದ ಬಳಿಕ ಮಾತನಾಡಿದ ಮಮತಾ ಕುಲಕರ್ಣಿ, ಈ ಮಹಾ ಕುಂಭಮೇಳಕ್ಕೆ ಬಂದಿರುವುದು ಸAತಸ ತಂದಿದೆ. ಸನ್ಯಾಸ ಸ್ವೀಕರಿಸುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ತನ್ನ ಹೆಸರು ಮಮತಾನಂದ ಗಿರಿ ಸಾಧ್ವಿ ಎಂದು ಬಹಿರAಗಪಡಿಸಿದ್ದಾರೆ. ಇದೇ ತಿಂಗಳ ೨೯ ರಂದು ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆಯಂದು ರಾಜ ಸ್ನಾನ ಮಾಡಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಲಿದ್ದೇನೆ ಎಂದು ಮಮತಾ ಕುಲಕರ್ಣಿ ತಿಳಿಸಿದ್ದಾರೆ. ಇದೀಗ ಮಮತಾ ಕುಲಕರ್ಣಿಗೆ ಹೊಸ ಹೆಸರು ನೀಡಲಾಗಿದೆ. ಅವರ ಹೆಸರನ್ನು ಶ್ರೀಯಾಮಾಯಿ ಮಮತಾ ನಂದ ಗಿರಿ ಎಂದು ಘೋಷಿಸಲಾಗಿದೆ.