Wednesday, October 22, 2025
Flats for sale
Homeದೇಶಪ್ರಯಾಗ್‌ರಾಜ್ : ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ : ರಾಹುಲ್ ಗಾಂಧಿಗೆ ಹೈಕೋರ್ಟ್ ಚಾಟಿ..!

ಪ್ರಯಾಗ್‌ರಾಜ್ : ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ : ರಾಹುಲ್ ಗಾಂಧಿಗೆ ಹೈಕೋರ್ಟ್ ಚಾಟಿ..!

ಪ್ರಯಾಗ್‌ರಾಜ್ : ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯ ವು ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಸ್ವಾತಂತ್ಯವನ್ನು ಒಳಗೊಂಡಿಲ್ಲ ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬುಧವಾರ ಚಾಟಿ ಬೀಸಿದೆ.

2022 ರ ದೇಶಾದ್ಯಂತ ನಡೆ ಸಿದ ತಮ್ಮ ಭಾರತ್ ಜೋಡೊ ಕಾರ್ಯಕ್ರಮದ ಸಂದರ್ಭದಲ್ಲಿ ಭಾರತೀಯ ಸೇನೆ ವಿರುದ್ಧ ನೀಡಿದ ಹೇಳಿಕೆಗೆ ಲಕ್ನೋ ಕೋರ್ಟ್ ಹೊರಡಿಸಿದ್ದ ಸಮನ್ಸ್ ವಿರುದ್ಧ ರಾಹುಲ್ ಗಾಂಧಿ ಅರ್ಜಿಯನ್ನು ಏಕಸದಸ್ಯ ಪೀಠದ ನ್ಯಾ. ಸುಭಾಷ್ ವಿದ್ಯಾರ್ಥಿ ತಿರಸ್ಕರಿಸಿದರು. ಈ ವೇಳೆ ನಿಸ್ಸಂದೇಹವಾಗಿ ಆರ್ಟಿಕಲ್ 19(1)(ಎ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯವನ್ನು ಒಳಗೊAಡಿದೆ. ಆದರೆ ಈ ಹಕ್ಕು ಕೆಲ ನಿರ್ಬಂಧಗಳಿಗೆ ಒಳಪಟ್ಟಿದೆ. ಸೇನೆಯ ವಿರುದ್ಧ ಮಾನಹಾನಿ ಹೇಳಿಕೆ ನೀಡುವ ಸ್ವಾತಂತ್ಯವನ್ನು ಒಳಗೊಂಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ

ರಾಹುಲ್ ಗಾಂಧಿಯ ಹೇಳಿಕೆ ಏನು ..?

೨೦೨೨ರ ತಮ್ಮ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಮಾತನಾಡುತ್ತ, ಚೀನಾದ ಸೈನಿಕರು ಭಾರತದ ಯೋಧರನ್ನು ಅರುಣಾಚಲ ಪ್ರದೇಶದಲ್ಲಿ ಹೊಡೆದಿದ್ದಾರೆ ಎಂದು ಹೇಳಿದ್ದರು. ಆ ಮೂಲಕ ಎಲ್‌ಎಸಿಯಲ್ಲಿ ನಡೆದ ದುರ್ಘಟನೆಗೆ ಕೇಂದ್ರ ಸರ್ಕಾರವನ್ನು ದೂರಿದ್ದರು ಮತ್ತು ಭಾರತೀಯ ಸೇನೆಯೇ ಹೊಡೆತ ತಿಂದಿದೆ ಎಂದು ಹೇಳಿದ್ದರು. ಇದರ ವಿರುದ್ಧ ವಕೀಲ ವಿವೇಕ್ ತಿವಾರಿ ಎಂಬವರು ಪ್ರಕರಣ ದಾಖಲು ಮಾಡಿದ್ದರು.

ಡಿಸೆಂಬರ್ 9, 2022 ರಂದು ಭಾರತ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆಯ ಕುರಿತು ರಾಹುಲ್ ನೀಡಿದ ಹೇಳಿಕೆಗಳು ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿಯಾಗಿಗಿವೆ ಎಂದು ತಿವಾರಿ ಆರೋಪಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular