Thursday, March 12, 2026
Flats for sale
Homeದೇಶಪ್ರಯಾಗರಾಜ್ : ಮಹಾಕುಂಭಮೇಳದಲ್ಲಿ ಮಿಂದು ಗಂಗಾದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ..!

ಪ್ರಯಾಗರಾಜ್ : ಮಹಾಕುಂಭಮೇಳದಲ್ಲಿ ಮಿಂದು ಗಂಗಾದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ..!

ಪ್ರಯಾಗರಾಜ್ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಿಂದು ಗAಗಾದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಕೇಸರಿ ಬಣ್ಣದ ಜಾಕೆಟ್, ನೀಲಿ ಟ್ರ್ಯಾಕ್ ಪ್ಯಾಂಟ್ ಮತ್ತು ಕುತ್ತಿಗೆಗೆ ರುದ್ರಾಕ್ಷಿ ಸರ ಧರಿಸಿದ ಮೋದಿ, ಭಕ್ತಿಭಾವದಿಂದ ಬುಧವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಪ್ರಯಾಗರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೋಣಿಯಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮಕ್ಕೆ ತೆರಳಿದರು. ಮೋದಿ ಒಬ್ಬರೇ ನೀರಿಗೆ ಇಳಿದು, ಪುಣ್ಯ ಸ್ನಾನ ಮಾಡಿ ಮಂತ್ರಗಳನ್ನು ಪಠಿಸಿದರು.

ಬುಧವಾರ ಮಧ್ಯಾಹ್ನದ ವೇಳೆಗೆ ನಡೆದ ಮಹಾ ಕುಂಭ ಮೇಳದಲ್ಲಿ ಸುಮಾರು 55 ಲಕ್ಷ ಜನ ಸ್ನಾನ ಮಾಡಿದ್ದಾರೆ. ಮೋದಿಯವರ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆದಿದ್ದು, ಯಾತ್ರಾರ್ಥಿಗಳಿಗೆ ಎಂದಿನAತೆ ವಿವಿಧ ಘಾಟ್‌ಗಳಲ್ಲಿ ಸ್ನಾನ ಮಾಡಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular