ಪ್ಯಾಟಗೋನಿಯಾ : ಹಂಪ್‌ಬ್ಯಾಕ್ ತಿಮಿಂಗಿಲವೊಂದು ನೌಕಾಯಾನ ಮಾಡುತ್ತಿದ್ದ ಯುವಕನನ್ನು ದೋಣಿ ಸಮೇತ ನುಂಗಿ ನಂತರ ಕಕ್ಕುವ ಭಯಾನಕ ಮತ್ತು ರೋಮಾಂಚಕಾರಿ ವಿಡಿಯೋ ಹೊರಬಿದ್ದಿದೆ. ಈ ಘಟನೆ ಚಿಲಿಯ ಪ್ಯಾಟಗೋನಿಯಾದಲ್ಲಿ ನಡೆದಿದೆ.
ಯುವಕನ ತಂದೆ ಈ ಇಡೀ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಆಡ್ರಿಯನ್ ಸಿಮಾಕಾಸ್ ತನ್ನ ತಂದೆಯೊಂದಿಗೆ ಸಾಗರದಲ್ಲಿ ನೌಕಾಯಾನ ಮಾಡುತ್ತಿದ್ದ. ಅವನ ತಂದೆ ಅವನ ವಿಡಿಯೋ ಮಾಡುತ್ತಿದ್ದರು. ಸಮುದ್ರದ ನೀರಿನಿಂದ ಒಂದು ದೈತ್ಯ ಹಂಪ್‌ಬ್ಯಾಕ್ ತಿಮಿಂಗಿಲ ಹೊರ ಬಂದು ಮತ್ತು ಆಡ್ರಿಯನ್ ಇರುವ ದೋಣಿ ಸಮೇತ ನುಂಗುತ್ತದೆ. ಆದರೆ ಮುಂದಿನ ಕೆಲವು ಕ್ಷಣಗಳಲ್ಲಿ ತಿಮಿಂಗಿಲ ಕಕ್ಕುವ ಮೂಲಕ ನುಂಗಿದ ದೋಣಿಯನ್ನು ಹೊರಹಾಕುತ್ತದೆ . ಆಡ್ರಿಯನ್ ತನ್ನ ದೋಣಿಯೊಂದಿಗೆ ತಿಮಿಂಗಿಲದ ಬಾಯಿAದ ಹೊರಬಂದು ಬಚಾವ್ ಆಗುತ್ತಾನೆ. ಆಡ್ರಿಯನ್ ತಂದೆ ಡೇಲ್ ಕೆಲವೇ ಮೀಟರ್ ದೂರದಲ್ಲಿದ್ದು ಅವರು ತಕ್ಷಣ ಆಡ್ರಿಯನ್‌ನನ್ನು ತನ್ನ ಕಡೆಗೆ ಎಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ತಿಮಿಂಗಿಲವು ಸಮುದ್ರದಲ್ಲಿ ಮಾಯವಾಗುತ್ತದೆ .
ಆ ಭಯಾನಕ ಕ್ಷಣದಲ್ಲಿ ತಂದೆ ಮಗನಿಗೆ ಎದೆಗುಂದದೆ ಶಾಂತ ಚಿತ್ತದಿಂದ ಇರುವಂತೆ ಮಗನಿಗೆ ಧೈರ್ಯ ತುಂಬಿದ್ದಾರೆ. ಹೀಗೆ ಸಾವಿನ ದವಡೆಯಿಂದ ಹೊರ ಬಂದಿರುವ ಆಡ್ರಿಯನ್ ನಾನು ಸಾಯುವ ಹಂತದಲ್ಲಿದ್ದೆ. ನಾನು ಸತ್ತಿದ್ದೇನೆ ಎಂದು ಭಾವಿಸಿದೆ ಮತ್ತು ಆ ಕ್ಷಣ ತುಂಬಾ ಭಯಾನಕವಾಗಿತ್ತು ಎಂದು ಆಡ್ರಿಯನ್ ಹೇಳಿದ್ದಾನೆ. ಏಕೆಂದರೆ ಈಗ ನಾನು ಏನೂ ಮಾಡಲು ಸಾಧ್ಯವಿರಲಿಲ್ಲ ಎಂದಿದ್ದಾನೆ.ಸಾವಿನ ದವಡೆಯಿAದ ಪಾರಾಗಿ ಬಂದ ಆಡ್ರಿಯನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.