Friday, November 22, 2024
Flats for sale
Homeಜಿಲ್ಲೆಪುತ್ತೂರು : ಸಾಲ ನೀಡಿ ಪಾವತಿಸದೇ ಇಲ್ಲದಾಗ ಮನೆ ಬಳಿಗೆ ಹೋದ SBI ಬ್ಯಾಂಕ್ ಸಿಬ್ಬಂದಿಗಳನ್ನು...

ಪುತ್ತೂರು : ಸಾಲ ನೀಡಿ ಪಾವತಿಸದೇ ಇಲ್ಲದಾಗ ಮನೆ ಬಳಿಗೆ ಹೋದ SBI ಬ್ಯಾಂಕ್ ಸಿಬ್ಬಂದಿಗಳನ್ನು ಕೂಡಿಹಾಕಿ ಪಿಸ್ತೂಲ್ ತೋರಿಸಿ ಬೆದರಿಸಿದ ಷೋರೂಮ್ ಮಾಲೀಕರು : ಪ್ರಕರಣ ದಾಖಲು ..!

ಪುತ್ತೂರು : ಸಾಲ ನೀಡಿ ಪಾವತಿಸದೇ ಇಲ್ಲದಾಗ ಬ್ಯಾಂಕ್ ನಿಯಮದ ಪ್ರಕಾರ ಮನೆಗೆ ಬಂದು ಜಪ್ತಿ ಮಾಡಲು ಬಂದ ಸಿಬ್ಬಂದಿಗಳನ್ನು ಕೂಡಿಹಾಕಿ ಪಿಸ್ತೂಲ್ ತೋರಿಸಿ ಬೆದರಿಸಿದ ಘಟನೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿ ನಡೆದಿದೆ.

ಪುತ್ತೂರಿನ ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್‌ ಎಂಬವರು ಪುತ್ತೂರು ಕೋರ್ಟ್ ರಸ್ತೆಯ SBI ಶಾಖೆಯಿಂದ ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ.ಈ ಬಗ್ಗೆ ಹೆಚ್ಚೆತ್ತ ಅಧಿಕಾರಿಗಳು ಮನೆಗೆ ಬಂದು ಸಾಲ ಮರುಪಾವತಿಗಾಗಿ ಎಚ್ಚರಿಕೆ ನೀಡುತ್ತಾರೆ ಆದರೆ ಮನೆ ಹೋದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳನ್ನು ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್‌ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್‌ ರವರು ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಬಳಿಕ ಕೃಷ್ಣ ಕಿಶೋರ್‌ ರವರು ಕೂಡಾ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದಿನಾಂಕ 26.09.2024 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ,ಕ್ರ 109/2024, ಕಲಂ:-132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ 27 ARMS Act ರಂತೆ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular