ಪುತ್ತೂರು : ವಿನಾಕಾರಣ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವೀಡಿಯೋ ಮಾಡಿದ್ದ ವ್ಯಕ್ತಿಯೊಬ್ಬರು ಆ.22ರಂದು ವಿಷ ಸೇವಿಸಿ ಆ.27ರಂದು ಭಾನುವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕಟ್ಟತ್ತಾರು ನಿಡ್ಯಾಣ ನಿವಾಸಿ ಅಬ್ದುಲ್ ನಾಸಿರ್ ಎಂದು ಗುರುತಿಸಲಾಗಿದೆ.ವಿಷ ಸೇವಿಸುವ ಮುನ್ನ ಅಬ್ದುಲ್ ವಿಡಿಯೋ ಮಾಡಿ ‘ಬೆಳ್ಳಾರೆ ಸಮೀಪದ ಮನೆಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ,ಅಲ್ಲಿ ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಲಾಗಿದೆ,ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಲೈವ್ ವಿಡಿಯೋ ಮಾಡಿದ್ದನು . ಅಬ್ದುಲ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದು, ವೈರಲ್ ಆಗಿದೆ. ಬಳಿಕ ಪುತ್ತೂರು ರೈಲು ನಿಲ್ದಾಣದ ಬಳಿ ಅಬ್ದುಲ್ ವಿಷ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.


