ಪುತ್ತೂರು : ತೆರೆದ ಸ್ಥಳದಲ್ಲಿ ಕಲ್ಲುಕೋರೆಯ ಕಾರ್ಮಿಕರು ಜಿಲೆಟಿನ್ ಕಡ್ಡಿಗಳನ್ನ ಹೂತಿಟ್ಟು ಸ್ಪೊಟಿಸಿದ ಘಟನೆ ವಿಟ್ಲ ಮುಡ್ನೂರು, ವಿಟ್ಲ ಪಟ್ಟಣ ಪಂಚಾಯತ್, ಕುಳ ಗ್ರಾಮ, ಕೇಪು ಗ್ರಾಮ, ಪುಣಚ ಗ್ರಾಮದಲ್ಲಿ ನಡೆದಿದೆ.
ಸ್ಫೋಟದ ರಭಸಕ್ಕೆ 12 ಮನೆಗಳಿಗೆ ಭಾರೀ ಹಾನಿಯಾಗಿದ್ದು ಮನೆಯ ಗೋಡೆಗಳಲ್ಲಿ ಭಾರೀ ಬಿರುಕುಬಿದ್ದಿದೆ. ಸ್ಫೋಟದ ಸದ್ದಿಗೆ ಮನೆಯ ಸಿಮೆಂಟ್ ಶೀಟ್ ಗಳು ಪೀಸ್ ಪೀಸ್ ಆಗಿದ್ದು ಸ್ಫೋಟಗೊಂಡ ರಭಸಕ್ಕೆ 5 ಗ್ರಾಮಗಳು ನಲುಗಿದ ಘಟನೆ ವರದಿಯಾಗಿದೆ.
ಮಧ್ಯಹ್ನ 1.30 ಕ್ಕೆ ಐದು ಗ್ರಾಮಗಳಲ್ಲಿ ಭೂಕಂಪನದ ಅನುಭವ ಸಂಭವಿಸಿದ್ದು
ಆತಂಕದಿಂದ ಗ್ರಾಮಸ್ಥರುಮನೆಯಿಂದ ಹೊರ ಓಡಿಬಂದಿದ್ದಾರೆ.
ಸುಮಾರು 100 ಜಿಲೆಟಿನ್ ಕಡ್ಡಿಗಳನ್ನು ಬಿಸಿಲಿನಲ್ಲಿ ಎನ್ ಎಸ್ ಕೋರೆಯ ಕಾರ್ಮಿಕರು ಒಣಗಿಸಿಟ್ಟಿದ್ದರೆಂದು ತಿಳಿದಿದೆ. ಎನ್ ಎಸ್ ಕೋರೆ ಮಾಲೀಕ ಅಬ್ದುಲ್ ಕುಂಙಿಗೆ ಸೇರಿದ ಕೋರೆಯಲ್ಲಿ ಈ ಅವಘಡ ಸಂಭವಿಸಿದ್ದು ಕಾರ್ಮಿಕರು ಮಧ್ಯಾಹ್ನ ಊಟಕ್ಕೆ ಹೋಗಿದ್ದ ಸಂದರ್ಭ ಘಟನೆ ನಡೆದಿದೆ.
ಕ್ಷಣ ಮಾತ್ರದಲ್ಲಿ ಭಾರೀ ಅವಘಡ ತಪ್ಪಿದ್ದು ಮಲರಾಯ ಮೂವರ್ ದೈವಂಗಲ್ ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನ ಹೂತಿಟ್ಟಿರುವ ಆರೋಪ ಕೇಳಿಬಂದಿದೆ.