ಪುತ್ತೂರು : ರಸ್ತೆ ದಾಟುತ್ತಿದ್ದ ಕಾಡು ಹಂದಿಗಳಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಮಾಣಿ-ಮೈಸೂರು ಹೆದ್ದಾರಿಯ ಬೈಪಾಸ್ ನಲ್ಲಿ ನಡೆದಿತ್ತು.ನಾಲ್ಕು ಹಂದಿಗಳಿಗೆ ಗಾಯವಾಗಿದ್ದು ಗಾಯಗೊಂಡ ಹಂದಿಗಳನ್ನು ಸಾರ್ವಜನಿಕರು ಕೈಕಾಲು ಕಟ್ಟಿ ತಮ್ಮ ವಾಹನಗಳಲ್ಲಿ ತುಂಬಿಸಿ ಸಾಗಿಸಲು ತಯಾರಿಯಲ್ಲಿದ್ದರು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ .ಒಂದು ಹಂದಿ ಮೃತಪಟ್ಟಿದ್ದು ಮೃತಪಟ್ಟ ಹಂದಿಯ ಪೋಸ್ಟ್ ಮಾರ್ಟಂ ನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ್ದಾರೆ.
ಸೋಮವಾರ ಸಂಜೆ ಲಾರಿಯಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಕಾಡು ಹಂದಿಯು ಮೃತಪಟ್ಟಿತ್ತು,ವಿಚಾರ ತಿಳಿಯುತಿದ್ದಂತೆ ವಾಹನಗಳಲ್ಲಿ ಹೊತ್ತೊಯ್ದ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗಾಯಗೊಂಡ ಹಂದಿಯನ್ನ ಹಸ್ತಾಂತರಿಸಿದ್ದರು.ಗಂಭೀರ ಗಾಯಗೊಂಡಿದ್ದ ಹಂದಿ ರಾತ್ರಿ ವೇಳೆಗೆ ಸಾವನ್ನಪ್ಪಿದೆ,ಇನ್ನುಳಿದ ಏಳು ಹಂದಿಗಳು ಸಣ್ಣ ಪುಟ್ಟಗಾಯಗೊಂಡಿದ್ದು ಚಿಕೆತ್ಸೆ ಪಡೆಯುತ್ತಿದೆ ಎಂದು ಪುತ್ತೂರು ವಲಯ ಅರಣ್ಯ ಅಧಿಕಾರಿ ಕಿರಣ್ ಬಿ.ಎಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೃತ ಹಂದಿಯ ಕಳೇಬರವನ್ನ ಅರಣ್ಯ ಇಲಾಖೆಯವರಿಂದ ಅಂತ್ಯಸಂಸ್ಕಾರ ಮಾಡಿದ್ದಾರೆಂದು ಅಧಿಕಾರಿಗಳು ವಿಡಿಯೋ ಹಾಗೂ ಫೋಟೋ ಮೂಲಕ ತಿಳಿಸಿದ್ದಾರೆ.


