ಪುತ್ತೂರು : ನಗರ ಸಭೆಯ ಇಬ್ಬರು ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಗಳಿಗೆ ಡಿ.27ರಂದು ಉಪಚುನಾವಣೆ ನಡೆದಿದ್ದು, ಶನಿವಾರ ಮತ ಎಣಿಕೆ ನಡೆದಿದೆ. ವಾರ್ಡ್ 1ರಲ್ಲಿ ಕಾಂಗ್ರೆಸ್ ಹಾಗೂ ವಾರ್ಡ 11ರಲ್ಲಿ ಬಿಪಿಜೆ ಜಯ ಗಳಿಸುವ ಮೂಲಕ ಎರಡೂ ಸ್ಥಾನದಲ್ಲಿ ತನ್ನದೇ ಗೆಲವು ಎನ್ನುತ್ತಿದ್ದ ಪುತ್ತಿಲ ಪರಿವಾರ ಮುಖಭಂಗ ಅನುಭವಿಸಿದೆ.
ವಾರ್ಡ್ 1ರಲ್ಲಿ ಒಟ್ಟು 958 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ನ ದಿನೇಶ್ ಶೇವಿರೆ 427 ಮತ, ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತ, ಬಿಜೆಪಿಯ ಸುನೀತಾ 219 ಮತ ಗಳಿಸಿದ್ದಾರೆ. ನೋಟಕ್ಕೆ 4 ಮತ ಚಲಾವಣೆಯಾಗಿದೆ. ಈ ಮೂಲಕ ಕಾಂಗ್ರೆಸ್ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.
ವಾರ್ಡ್ 11 ರಲ್ಲಿ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್ ರೈ 431 ಮತ, ಕಾಂಗ್ರೆಸ್ ನ ದಾಮೋದರ ಭಂಡಾರ್ಕರ್ 400ಮತ, ಪುತ್ತಿಲ ಪರಿವಾರದ ಚಿಂತನ್ 216 ಮತ ಪಡೆದು ಕೊಂಡಿದ್ದಾರೆ. ನೋಟಕ್ಕೆ 6ಮತ ಚಲಾವಣೆಯಾಗಿದೆ. ಈ ಮೂಲಕ ಬಿಜೆಪಿ ರಮೇಶ್ ರೈ 31 ಮತಗಳ ಅಂತದಲ್ಲಿ ಜಯಗಳಿಸಿದ್ದಾರೆ.
ಪುತ್ತೂರಿನ ಬಿಜೆಪಿ ಪುತ್ತಿಲ ಪರಿವಾರದ ಬಿಕ್ಕಟ್ಟು ಶಮನ ಪಡಿಸುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಕೆಲವು ಮಾತುಕತೆಯಲ್ಲಿ ಒಪ್ಪಿದ ವಿಚಾರವನ್ನು ಆ ಬಳಿಕ ತಿರಸ್ಕರಿಸಿ, ಬಂಡಾಯ ಮುಂದುವರಿಸಿದ್ದು ಜನರ ಅಸಮಾಧಾನಕ್ಕೆ ಕಾರವಾಗಿತ್ತು. ಪುತ್ತೂರು ನಗರ ಸಭೆ ಉಪ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ಸ್ ಆಟಕ್ಕೆ ಪುತ್ತಿಲ ಪರಿವಾರ ಮೂಲೆಗುಂಪು ಮಾಡುವ ಕಾರ್ಯವನ್ನು ಮತದಾರ ಮಾಡಿದ್ದಾನೆ.


