Sunday, January 25, 2026
Flats for sale
Homeಜಿಲ್ಲೆಪುತ್ತೂರು : ನ್ಯಾಯಾಲಯದಲ್ಲಿ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ.

ಪುತ್ತೂರು : ನ್ಯಾಯಾಲಯದಲ್ಲಿ ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನ.

ಪುತ್ತೂರು : ಜಡ್ಜ್ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ವ್ಯಕ್ತಿ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

ಪುತ್ತೂರಿ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ.

ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕೌಟುಂಬಿಕ ಕಳಹ ಉಂಟಾಗಿದ್ದು ಎರಡು ದಿನಗಳ ಹಿಂದೆ ರವಿ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದನು. ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಇಂದು ಕೇಸ್ ದಾಖಲಾಗುವ ಸಾಧ್ಯತೆ ಇತ್ತು.ಹಾಗಾಗಿ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು.

ಸಂಪ್ಯ ಠಾಣೆಗೆ ಹಾಜರಾಗಲು ಇಂದು ರವಿಯನ್ನ ಪೊಲೀಸರು ತಿಳಿಸಿದ್ದು ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ಜಡ್ಜ್ ಮುಂದೆ ವಿಷ ಸೇವಿಸಿದ್ದಾನೆ.ಈ ಬಗ್ಗೆ ಜಡ್ಜ್ ಅಲ್ಲಿನ ಸಿಬ್ಬಂದಿಗೆ ಮೊದಲೇ ಸೂಚನೆ ನೀಡಿದ್ದು ವಿಷ ಸೇವನೆ ಬಳಿಕ ರವಿ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದಾನೆ. ತಕ್ಷಣ ಎಚ್ಚೆತ್ತ ಅಲ್ಲಿನವರು ವ್ಯಕ್ತಿಯನ್ನ ಪುತ್ತೂರು ಸರ್ಕಾರಿ ಆಸ್ಪತ್ರಗೆ ರವಾನಿಸಿದ್ದಾರೆ.

ರವಿ ಗೇರು ತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನ ಸೇವಿಸಿದ್ದು ಎಂಡೋಸಲ್ಫಾನ್ ಬ್ಯಾನ್ ಆದ ಬಳಿಕ ಮಾರುಕಟ್ಟೆಯಲ್ಲಿ ಸಿಗುವ ‘ಕರಾಟೆ’ ಕೀಟನಾಶಕ ಇದಾಗಿದೆ. ಕರಾಟೆ ಕೀಟನಾಶಕ ಸೇವಿಸಿದ ಬಳಿಕ ರವಿ ಸ್ಥಿತಿ ಗಂಭೀರವಾಗಿದ್ದು ರವಿಯನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.ರವಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ದಂಪತಿಗಳು ಒಣದಾಗಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಒಂದೇ ಆಂಬ್ಯುಲೆನ್ಸ್ ನಲ್ಲಿ‌ ತೆರಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular