Tuesday, February 24, 2026
Flats for sale
Homeಜಿಲ್ಲೆಪುತ್ತೂರು : ನಳಿನ್, ಡಿವಿಎಸ್ ಬ್ಯಾನರಿಗೆ ಚಪ್ಪಲಿ ಹಾರ ಪ್ರಕರಣ,ಕೂಡಿ ಹಾಕಿ ಪೋಲಿಸರಿಂದ ಚಿತ್ರಹಿಂಸೆ, ಮನಬಂದಂತೆ...

ಪುತ್ತೂರು : ನಳಿನ್, ಡಿವಿಎಸ್ ಬ್ಯಾನರಿಗೆ ಚಪ್ಪಲಿ ಹಾರ ಪ್ರಕರಣ,ಕೂಡಿ ಹಾಕಿ ಪೋಲಿಸರಿಂದ ಚಿತ್ರಹಿಂಸೆ, ಮನಬಂದಂತೆ ತಳಿಥ.

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೋಮವಾರ ತಡರಾತ್ರಿ ಫ್ಲೆಕ್ಸ್ ಬ್ಯಾನರ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲು ಸಹಕರಿಸಿದ ಆರೋಪದ ಮೇಲೆ ಆರೋಪಿಗಳು ಬ್ಯಾನರ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದ ಡಿವಿ ಸದಾನಂದಗೌಡ ಅವರನ್ನು ಟೀಕಿಸಿದ್ದಾರೆ ಮತ್ತು ಬ್ಯಾನರ್‌ನಲ್ಲಿ ನಾಯಕರಿಗೆ ಚಪ್ಪಲಿ ಹಾರ ಹಾಕಿದ ದೃಶ್ಯವೂ ಕಂಡು ಬಂದಿತ್ತು.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ನರಿಮೊಗರು ನಿವಾಸಿಗಳಿಗೆ ಪೋಲಿಸರು ಮನಬಂದಂತೆ ತಳಿಸಿದ್ದು ಡಬಲ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಗಾಯಗೊಳಿಸಿದ ಪೋಟೊ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ, ಇದರಿಂದ ಯುವಕರು ರೊಚ್ಚಿಗೆದ್ದಿದ್ದು ಮುಂದಿನದಿನಗಳಲ್ಲಿ ಈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಇಲ್ಲಿ ಅವಿನಾಶ್, ಶಿವರಾಮ, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್ ಮತ್ತು ಗುರುಪ್ರಸಾದ್ ಬಂಧಿತ ಆರೋಪಿಗಳು. ಮೊನ್ನೆ ಸೋಮವಾರ ಸಂಜೆ ನರಿಮೊಗರುವಿನ ಶಿವರಾಮ ಮತ್ತು ಮಾಧವ ಎಂಬುವವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಸಮಾಜದಲ್ಲಿ ಅಶಾಂತಿ ಉಂಟು ಮಾಡಿದ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ, ಪೊಲೀಸರು ಅವರಿಂದ ಲಿಖಿತ ವಾಗ್ದಾನ ಪಡೆದು ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿದರು ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು ಹಿಂದೂ ಕಾರ್ಯಕರ್ತರೆಂದು ಹೇಳಲಾಗುತ್ತಿದ್ದು, ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೋಮವಾರ ತಡರಾತ್ರಿ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ಪೊಲೀಸರು ಬಂಧಿಸಿರುವ ಬಗ್ಗೆ ವಿಚಾರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular