ಪುತ್ತೂರು : ಇತ್ತೀಚೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ರೀಲ್ಸ್ ಮಾಡಲು ತಲ್ವಾರ್ ಕೈಲಿ ಹಿಡಿದುಕೊಂಡು ಯಡವಟ್ಟು ಮಾಡಿ ಪೊಲೀಸರ ಅತಿಥಿಗಳಾಗಿದ್ದ ಘಟನೆ ಮರೆಮಾಚುವ ಮೊದಲೇ ಇನ್ನೊಂದು ಘಟನೆ ನಡೆದಿದೆ. ಸಾರ್ವಜನಿಕವಾಗಿ ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಲು ಹೋಗಿ ಅನೇಕ ರೌಡಿಗಳು ಕೂಡಾ ಪೊಲೀಸರ ಅತಿಥಿಗಳಾದ ಘಟನೆ ಈ ಹಿಂದೆ ನಡೆದಿತ್ತು ಇದೀಗ ಇಂತಹ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇಬ್ಬರು ಯುವಕರು ಕೈನಲ್ಲಿ ತಲ್ವಾರ್ ಹಿಡಿದುಕೊಂಡು ‘ಟೈಮ್’ ಅಂತ ಸ್ಟೆಟಸ್ ಹಾಕಿಕೊಂಡಿದ್ದು ಆ ಫೋಟೋ ಈಗ ಚರ್ಚೆಗೆ ಗ್ರಾಸವಾಗಿದೆ. ಯುವಕರು ಪುತ್ತೂರು ತಾಲೂಕಿನವರಾಗಿದ್ದು ಈ ರೀತಿಯ ಸ್ಟೆಟಸ್ ಹಾಕಿ ಟೈಮ್ ಎಂದು ಹಾಕಿರುವ ವಿಚಾರವನ್ನು ಹಲವರು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಲಾಗಿದೆ. ಇವರಿಬ್ಬರೂ ಕೂಡಾ ಸಂಘಟನೆಯೊಂದರ ಕಾರ್ಯಕರ್ತರು ಎಂಬ ಹಿನ್ನೆಲೆಯಲ್ಲಿ ಈ ಫೋಟೊ ಚರ್ಚೆಯಾಗಲು ಕಾರಣವಾಗಿದೆ. ಇಬ್ಬರು ಕಾರ್ಯಕರ್ತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ತಾಲೂಕಿನ ಕುರಿಯದ ಕಟ್ಟದ ಬೈಲಿನ ಸುಜಿತ್, ಆರ್ಯಾಪುವಿನ ಮರಿಕೆಯ ಪುಟ್ಟಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.