ಪುತ್ತೂರು : ಕಾಡಾನೆಯೊಂದು ಕೃಷಿತೋಟಕ್ಕೆ ದಾಳಿ ಮಾಡಿ ಅಡಿಕೆ,ಬಾಳೆ,ತೆಂಗು ಗಿಡಗಳನ್ನು ನಾಶ ಮಾಡಿದ ಘಟನೆ ನಿನ್ನೆ ತಡರಾತ್ರಿ ಪುತ್ತೂರಿನ ಪೆರ್ನಾಜೆ ಎಂಬಲ್ಲಿ ನಡೆದಿದೆ.
ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಸರಿಯಾದ ಕ್ರಮ ತೆಗೆದೊಕೊಳ್ಳದ ಕಾರಣ ಇಂತಹ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ರವರು ತಿಳಿಸಿದ್ದಾರೆ. ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳನ್ನು ಈ ರೀತಿ ನಾಶಮಾಡಿದರೆ ನಮ್ಮ ಪರಿಸ್ಥಿತಿ ಕೇಳೋ ಗತಿ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ . ತಡರಾತ್ರಿ ತೋಟಕ್ಕೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು ಇದೇ ಮೊದಲ ಬಾರಿಗೆ ಈ ಭಾಗಕ್ಕೆ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಕೃಷಿಕರು ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಇಂದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿನೀಡಿದ್ದಾರೆ.