ಪುತ್ತೂರು: ನಗರದ ಕಾವೇರಿಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ೩ ದಿನಗಳ ಕಾಲ ನಡೆದ ೨೫ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಶ್ರೀಗಣೇಶನ ಶೋಭಾಯಾತ್ರೆಯು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಲ್ಲಿ ಉದಯ ಭಟ್ ಸಂಪ್ಯ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಭಜನೆ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ರಂಗಪೂಜೆ ಮತ್ತಿತರ ಕಾರ್ಯಕ್ರಮಗಳು ನಡೆಯಿತು.ರಾತ್ರಿ ಭಜನಾ ಕಾರ್ಯಕ್ರಮ, ಮರಾಠಿ ಯುವ ವೇದಿಕೆ ಭಜನಾ ಸಂಘ ಕೊಂಬೆಟ್ಟು, ಮತ್ತು ಮಕ್ಕಳಿಂದ ಕುಣಿತ ಭಜನೆ, ಮಹಾಪೂಜೆ ನಡೆಯಿತು.
ಬಳಿಕ ಶೋಭಾಯಾತ್ರೆಯು ಪುತ್ತೂರಿನ ದರ್ಬೆ ಸರ್ಕಲ್, ಕೆಮ್ಮಿ0ಜೆ, ಬೆದ್ರಾಳದಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.ಬಳಿಕ ಅನ್ನಸಂತರ್ಪಣೆ ನಡೆಯಿತು.
ಶೋಭಾಯಾತ್ರೆಯಲ್ಲಿ ಚೆಂಡೆ, ತಲೀಮ್, ವಿಶೇಷ ಬ್ಯಾಂಡ್ ಸೆಟ್ ಹಾಗೂ ಕಾವೇರಿಕಟ್ಟೆ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಡಿ. ಜೆ. ಸೌಂಡ್ಸ್ ವಿಶೇಷ ಆಕರ್ಷಣೆ ಆಗಿತ್ತು.
ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ಡಾ. ಗೋಪಿನಾಥ ಪೈ, ಅಧ್ಯಕ್ಷ ದಿನೇಶ್ ಪಿ, ಉಪಾಧ್ಯಕ್ಷ ದೀಪಕ್ ಶೆಟ್ಟಿ, ಗೌರವ ಸಲಹೆಗಾರ ಜಯಂತ್ ಬಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಸೂರಜ್ ಶೆಟ್ಟಿ, ಸಂಪತ್ ಶೆಟ್ಟಿ, ಸತೀಶ್ ಕುಮಾರ್, ರವೀಂದ್ರ ಹೆಗ್ಡೆ ಮರೀಲು,ಸುಬೋಧು ಚಂದ್ರ ಮರೀಲು , ನವೀನ್ ನಾಯ್ಕ್ ಸೊರಕೆ ಗಣೇಶ ರೈ,ಉಮಾಶಂಕರ್ ಪರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.


