Sunday, March 15, 2026
Flats for sale
Homeಜಿಲ್ಲೆಪುತ್ತೂರು : ಕಲ್ಲೇಗ ಟೈಗರ್ಸ್ ನ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ : ಮೂವರು ಆರೋಪಿಗಳ...

ಪುತ್ತೂರು : ಕಲ್ಲೇಗ ಟೈಗರ್ಸ್ ನ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ : ಮೂವರು ಆರೋಪಿಗಳ ಬಂಧನ.

ಪುತ್ತೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಪುತ್ತೂರಿನಲ್ಲಿ ನಡೆದಿದೆ ,ಸಂಜೆ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಅಕ್ಷಯ್ ಮತ್ತು ಪ್ರತಿಸ್ಪರ್ಧಿ ತಂಡದ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಆದ ನಷ್ಟದ ಬಗ್ಗೆ ಚರ್ಚಿಸಲು ಮೂವರು ಅಕ್ಷಯ್‌ನನ್ನು ಕರೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೇವಲ 2000 ರೂ.ಗಾಗಿ ಈ ಕೊಲೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಕ್ಷಯ್ ಅವರ ಸ್ನೇಹಿತ ವಿಖ್ಯಾತ್ ಅವರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನ ಪ್ರಕಾರ, ನವೆಂಬರ್ 6 ರಂದು ರಾತ್ರಿ ನೆಹರು ನಗರದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಅಕ್ಷಯ್ ಮತ್ತು ಆರೋಪಿ ಮನೀಶ್ ಮತ್ತು ಚೇತನ್ ನಡುವೆ ಫೋನ್‌ನಲ್ಲಿ ತೀವ್ರ ವಾಗ್ವಾದಗಳು ನಡೆದಿದೆ ಎಂದು ತಿಳಿದುಬಂದಿದೆ.

ಪ್ರಕರಣ ಮುಂದುವರೆದಂತೆ ಕೆಲ ಹೊತ್ತಿನ ಬಳಿಕ ವಿಖ್ಯಾತ್ ತನ್ನ ಸ್ನೇಹಿತ ಅಕ್ಷಯ್ ಜತೆ ಪುತ್ತೂರು ನೆಹರುನಗರದ ಎಟಿಎಂ ಬಳಿ ನಿಂತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ, ಕೇಶವ ಅಕ್ಷಯ್ ಜತೆ ನಡೆದ ದೂರವಾಣಿ ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸಿ ಮಾರಕಾಸ್ತ್ರಗಳನ್ನು ಎಸೆದಿದ್ದಾರೆ. ಎರಡು ಕತ್ತಿಗಳಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ . ವಿಖ್ಯಾತ್ ಓಡಿ ಅವರಿಂದ ತಪ್ಪಿಸಿಕೊಂಡರು. ಆದರೆ ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿ ಅಕ್ಷಯ್‌ನನ್ನು ಕೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .

ಆರೋಪಿಗಳಲ್ಲಿ ಮೂವರು ಶರಣಾಗಿದ್ದು ,ಇನ್ನೊಬನಿಗೆ ಶೋಧ ಕಾರ್ಯ ನಡೆಯುತ್ತಿದೆ,ಈ ಬಗ್ಗೆ ಪುತ್ತೂರು ಪಟ್ಟಣ ಠಾಣೆಯಲ್ಲಿ ಐಪಿಸಿ ಕಲಂ 341, 504, 506, 307, 302 ಸಹಿತ ಕಲಂ 34 ರಂತೆ ನೋಂದಣಿ ಸಂಖ್ಯೆ 106/2023 ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular