ಪುತ್ತೂರು : ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗಿದೆ ಇದಕ್ಕೆ ಕೊರೊನ ಲಸಿಕೆಯ ಪ್ರಭಾವ ಎಂಬುದು ಕೆಲವರ ಅಭಿಪ್ರಾಯ,ಆದರೆ ಇಂದು ಪುತ್ತೂರಿನ ದೇವಸ್ಯ ನಿವಾಸಿ ಸುಜಿತ್ ಎಂಬವರು ಈಜಲು ನೀರಿಗಿಳಿದವೇಳೆ ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದೆ.
ಸುಜಿತ್ ರವರು ಬೆಂದ್ರ್ ತೀರ್ಥದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿರುವ ನದಿಯೊಂದಕ್ಕೆ ಈಜಾಡಲು ತೆರಳಿದ್ದರು, ಈಜಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪಿದ್ದಾರೆ.
ಸುಜಿತ್ ಪುತ್ತೂರು ಬೊಳುವಾರಿನಲ್ಲಿ ಗ್ಯಾರೇಜ್ ವೊಂದರಲ್ಲಿ ಕೆಲಸಮಾಡುತ್ತಿದ್ದು,ದೀಪಾವಳಿಯ ಪ್ರಯುಕ್ತ ಸಂಬಂದಿಕರ ಮನೆಗೆ ಹೋಗಿದರೆಂದು ತಿಳಿದಿದೆ.


