ಪುತ್ತೂರು : ನ 17 ರಂದು ನಡೆದಿರುವ ಅಪಹರಣ ಪ್ರಕರಣ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆದರೆ ಅಪಹರಣ ಪ್ರಕರಣ ಇದೀಗ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
ಅಪಹರಣಕ್ಕೊಳಗಾದ ಯುವಕ ಬಾಗಲಕೋಟೆ ನಿವಾಸಿ ಹನುಮಂತ (22) ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪೋಲೀಸ್ ವಶಕ್ಕೆ ಪಡೆದಿದ್ದಾರೆ.
ಹನುಮಂತ ಪುತ್ತೂರಿನ ಕುಂಬ್ರ ಎಂಬಲ್ಲಿ ಜೆಸಿಬಿ ಅಪರೇಟರ್ ಆಗಿ ಕೆಲಸಮಾಡುತಿದ್ದು,ಅಪಹರಣಕ್ಕೊಳಗಾದ ಹನುಮಂತನಿಗೆ ಶಿವಪ್ಪ ಎನ್ನುವಾತನ ಪತ್ನಿಯಾಗಿರುವ ಬಾಗಲಕೋಟೆಯ ಮಹಿಳೆಯೊಂದಿಗೆ ಸಂಬಂಧವಿದ್ದು ತನಿಖೆ ವೇಳೆ ಈ ವಿಚಾರಕ್ಕಾಗಿ ಯುವಕನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಂಪ್ಯ ಪೋಲೀಸರು ಮಂಜುನಾಥ್,ಶಿವಪ್ಪ,ದುರ್ಗಪ್ಪ ಎಂಬುವವರನ್ನು ಬಂಧಿಸಿದ್ದಾರೆ.ಯುವಕ ಅಪಹರಣಕ್ಕೊಳಗಾಗಿದ್ದ ಬಳಿಕ ಮೃತದೇಹವನ್ನು ಆಗುಂಬೆ ಘಾಟ್ ನಲ್ಲಿ ಎಸೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಎಲ್ಲಾ ಆರೋಪಿಗಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಆದ್ರೆ ಟವರ್ ಲೊಕೇಶನ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರು ಆರೋಪಿಗಳನ್ನು ಸಂಪ್ಯ ಪೋಲೀಸರು ವಶಕ್ಕೆ ಪಡಡಿದ್ದು ,ಸ್ಥಳ ಮಹಜರು ಮಾಡಲು ಆಗುಂಬೆ ಘಾಟ್ ಗೆ ತೆರಳಿದ್ದಾರೆ ಎಂಬ ಮಾಹಿತಿ ದೊರೆತಿದೆ.


