ಪುಣೆ : ಆತಿಥೇಯ ಭಾರತ ಹಾಗೂ ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವಣ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯ ಇಲ್ಲಿನ ಮಹಾರಾಷ್ಟç ಕ್ರಿಕೆಟ್ ಅಸೋಶಿಯೇಶನ್ ಕ್ರೀಡಾಂಗಣದಲ್ಲಿ ಗುರುವಾರ 24 ರಿಂದ 28 ರ ವರೆಗೆ ನಡೆಯಲಿದೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಭರ್ಜರಿ ಜಯ ದಾಖಲಿಸಿರುವ ನ್ಯೂಜಿಲೆಂಡ್ ತಂಡ ಸರಣಿಯಲ್ಲಿ 1-0 ರ ಮುನ್ನಡೆ ಸಾಧಿಸಿದ್ದು, ಎರಡನೇ ಪಂದ್ಯದಲ್ಲಿ ಕೂಡ ಜಯ ಸಾಧಿಸಿ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಉತ್ಸುಕದಲ್ಲಿದೆ.
ಇದೇ ವೇಳೆ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅತ್ಯAತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಸೋಲಿನ ಕಹಿ ಅನುಭವಿಸಿರುವ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸಿ ಸರಣಿಯನ್ನು ಸಮಸ್ಥಿತಿಗೆ ತಂದು ಸರಣಿ ಜೀವಂತವಾಗಿರಿಸಲು ಹೋರಾಟ ನಡೆಸಲು ಸಜ್ಜಾಗಿದೆ.
ಮೊದಲ ಟೆಸ್ಟ್ ಪಂದ್ಯ ಆಡಿದ ಭಾರತ ತಂಡದಲ್ಲಿ ಒಂದೆರಡು ಬದಲಾವಣೆಯಾಗುವ ಸಾಧ್ಯತೆಗಳಿವೆ. ಗಾಯದ ಸಮಸ್ಯೆ ಎದುರಿಸುತ್ತಿದ್ದ ಶುಭಮನ್ ಗಿಲ್ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳುವ ಸಾಧ್ಯತೆಗಳಿವೆ.
ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ಸಿ ಜೈಸ್ವಾಲ್ ಆರಂಭಿಕ ಆಟಗಾರರಾಗಿ ಅಂಕಣಕ್ಕೆ ಇಳಿಯಲಿದ್ದು, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ರಿಷಬ್ ಪಂತ್ ತಂಡಕ್ಕೆ ಬಲ ನೀಡಲು ಸಜ್ಜಾಗಿದ್ದಾರೆ.
ಒಂದು ವೇಳೆ ಗಾಯದ ಸಮಸ್ಯೆಯಿಂದ ಶುಭಮನ್ ಗಿಲ್ ಸಂಪೂರ್ಣವಾಗಿ ಗುಣಮುಖರಾಗಿದ್ದಲ್ಲಿ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಖಚಿತ. ಆಗ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ಅನುಭವಿ ಆಟಗಾರ ಕೆ.ಎಲ್.ರಾಹುಲ್ ಹಾಗೂ ಹೊಸಬ ಸರ್ಫರಾಜ್ ಖಾನ್ ಅವರ ಪೈಕಿ ಒಬ್ಬರು ಹೊರಗುಳಿಯುವುದು ಅನಿವಾರ್ಯವಾಗಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಜೀವನ ನಾಲ್ಕನೇ ಪಂದ್ಯವನ್ನು ಆಡಿದ ಸರ್ಫರಾಜ್ ಖಾನ್ ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿ 150 ರನ್ ಮಾಡಿ ಗಮನ ಸೆಳೆದಿದ್ದಾರೆ.
ಇದೇ ವೇಳೆಗೆ ಅನುಭವಿ ಆಟಗಾರ ಕೆ.ಎಲ್.ರಾಹುಲ್, ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 12 ರನ್ ಮಾತ್ರ ಗಳಿಸಿದ್ದಾರೆ.ಮೊದಲ ಟೆಸ್ಟ್ ಸಾಧನೆಯನ್ನು ನೋಡಿದಲ್ಲಿ ಸರ್ಫರಾಜ್ ರನ್ನು ಉಳಿಸಿಕೊಂಡು, ರಾಹುಲ್ ಅವರನ್ನು ಕೈಬಿಡುವ ಸಾಧ್ಯತೆಗಳಿವೆ. ಆದರೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ರಾಹುಲ್ ಅವರ ಮೇಲೆ ವಿಶ್ವಾಸವಿದ್ದು ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಒಂದು ವೇಳೆ ಶುಭಮನ್ ಗಿಲ್ ಅಡಲು ಸಂಪೂರ್ಣವಾಗಿ ಅರ್ಹರಾಗದೇ ಹೋದಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡ ಸುಂದರ್ ಇಲ್ಲವೇ ಅಕ್ಷರ್‌ಗೆ ಅವಕಾಶ ಭಾರತದ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡುವ ಚಿಂತನೆ ನಡೆದಿದೆ. ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆಗಳಿರುವುದರಿಂದ ಓರ್ವ ವೇಗದ ಬೌಲರ್ ಬದಲು ಓರ್ವ ಸ್ಪಿನ್ ಬೌಲರ್‌ನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿದೆ.
ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಪ್ರಕಟಿಸಲಾಗಿರುವ ತಂಡದಲ್ಲಿ ಸ್ಥಾನ ಪಡೆದಿರುವ ಆಲ್‌ರೌಂಡರ್ ವಾಷಿAಗ್ಟನ್ ಸುಂದರ್ ಇಲ್ಲವೇ ಅಕ್ಷರ್ ಪಟೇಲ್ ಅವರಿಗೆ ಆಡುವ ಹನ್ನೊಂದು ಆಟಗಾರರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಡಿಎಸ್‌ಪಿ ಸಿರಾಜ್ ಹೊರಕ್ಕೆ ?
ವಾಷಿಂಗ್ಟನ್ ಸುಂದರ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅವರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಇತ್ತಿಚೇಗೆ ತೆಲಂಗಾಣಾದಲ್ಲಿ ಡಿಎಸ್‌ಪಿಯಾಗಿ ನೇಮಕಗೊಂಡಿರುವ ಮೊಹಮ್ಮದ್ ಸಿರಾಜ್ ಅವರಿಗೆ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ಉತ್ತಮ ಸಾಥ್ ನೀಡುವಲ್ಲಿ ವಿಫಲರಾಗಿದ್ದಾರೆ. ತವರು ನೆಲದಲ್ಲಿ ಕಳೆದ ಏಳು ಟೆಸ್ಟ್ ಪಂದ್ಯಗಳ ಹದಿನಾಲ್ಕು ಇನ್ನಿಂಗ್ಸ್ಗಳಲ್ಲಿ ಸಿರಾಜ್ ಪಡೆದಿದ್ದು ಕೇವಲ ಹನ್ನೆರಡು ವಿಕೆಟ್‌ಗಳು ಮಾತ್ರ.
ಬದಾವಣೆ ಸಾಧ್ಯತೆ ಕಡಿಮೆ
ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿ ಅರ್ಹ ಜಯ ಸಾಧಿಸಿ ಸರಣಿಯಲ್ಲಿ 1-0 ರ ಮುನ್ನಡೆ ಸಾಧಿಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡದಲ್ಲಿ ಬದಲಾವಣೆ ಸಾಧ್ಯತೆಗಳು ಕಡಿಮೆ.
ಪಿಚ್ ವರದಿ
ಕೆಂಪು ಮಣ್ಣಿನಿಂದ ಕೂಡಿರುವ ಪುಣೆ ಪಿಚ್ ವೇಗದ ಬೌಲರ್‌ಗಳಿಗಿಂತ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವುದರಿಂದ ಉಭಯ ತಂಡಗಳು ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಸಾಧ್ಯತೆಗಳಿವೆ.
ಭಾರತ ತಂಡ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರೊಂದಿಗೆ ವಾಷಿಂಗ್ಟನ್ ಸುಂದರ್ ಇಲ್ಲವೇ ಅಕ್ಷರ್ ಪಟೇಲ್ ಅವರಿಗೆ ಆಡುವ ಅವಕಾಶ ಲಭಿಸಲಿದೆ.