ಪಾವಗಡ : ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣ ತುಮಕೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಏರ್ಪಡಿಸಲಾಗಿತ್ತು ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ದೂರು ಅರ್ಜಿಗಳನ್ನು ಸಲ್ಲಿಸಲಾಯಿತು ಮುಖ್ಯವಾಗಿ ರಾಮಾಂಜಿನಪ್ಪ ಎಂಬುವರಿಂದ ನೀಡಿದ ದೂರಿಗೆ ಲೋಕ ಯುಕ್ತ ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತವೇ ಎಂಬುದಾಗಿ ತಿಳಿಸಿದ್ದಾರೆ.
ಮುಖ್ಯವಾಗಿ ಹಲವು ವರ್ಷಗಳಿಂದ ವಿವಿಧ ಇಲಾಖೆಯಲ್ಲಿ ಬಿಡುಬಿಟ್ಟ ಅಧಿಕಾರಿಗಳ ಪಟ್ಟಿಯಲ್ಲಿ ಯೋಕಯುಕ್ತ ಅಧಿಕಾರಿಗಳ ಪಕ್ಕದಲ್ಲೇ ಕುಳಿತಿದ್ದ ತಹಶಿಲ್ದಾರ್ ಹೆಸರು ಇದ್ದಿದ್ದು ವಿಶೇಷವಾಗಿತ್ತು.ಶಿಕ್ಷಣ ಇಲಾಖೆ.ಬೆಸ್ಕಾಂ. ಪಿ ಡಬ್ಲ್ಯೂಡಿ. ಪಿಡಿಒಗಳು.ತಹಶಿಲ್ದಾರ್ ಕಚೇರಿ.ಸರ್ಕಾರಿ ಆಸ್ಪತ್ರೆ.ಪೋಲಿಸ್ ಇಲಾಖೆ.ಕೆ.ಇ.ಬಿ.ಇನ್ನೂ ಇತರೆ ಅನೇಕ ಇಲಾಖೆಯಲ್ಲಿ ಹಲವು ವರ್ಷಗಳಿಂದ ತಾಲೂಕಿನ ಬೀಡುಬಿಟ್ಟ ಅಧಿಕಾರಿಗಳ ಬಗ್ಗೆ ದೂರು ಸಲ್ಲಿಸಿದರು.
ಪುರಸಭೆಯ ಕಚೇರಿಯ ದೂರುಗಳು ಹೆಚ್ಚಾಗಿ ಬರುತ್ತಿವೆ ಇದರ ಬಗ್ಗೆ ಸರಿ ಪಡಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಷ್ಷುದ್ದಿನ್ ರವರಿಗೆ ಅಧಿಕಾರಿಗಳು ಸೂಚಿಸಿದರು.
ಡಿವೈಎಸ್ ಪಿ ಮಂಜುನಾಥ್ ಮಾತನಾಡಿ ಈ ಹಿಂದೆ ಬಂದಂತಹ ದೂರುಗಳಲ್ಲಿ ಬಹಾಳಷ್ಟು ಇರ್ಥಾರ್ತ ಗೊಳಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕರಿಗೆ ಯಾವೊಬ್ಬ ಅಧಿಕಾರಿಯಿಂದ ಹಣ್ಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ನಮ್ಮ ಇಲಾಖೆಗೆ ಗಮನಕ್ಕೆ ತನ್ನಿ ಎಂದರು.ಸರ್ಕಾರಿ ಆಸ್ಪತ್ರೆಯಲ್ಲಿ ಪದೇ ಪದೇ ದೂರುಗಳು ಬರಾದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಲೋಕಯುಕ್ತ ಡಿ.ವೈ.ಎಸ್.ಪಿ.ಮಂಜುನಾಥ್ ಆರೋಗ್ಯ ಅಧಿಕಾರಿ ಡಾ.ಕಿರಣ್ ರವರಿಗೆ ಎಚ್ಚರಿಸಿದರು.ಇತರೆ ದೂರುದಾರರಿಂದ ಪುರಸಭೆಗೆ ಐದು ಅರ್ಜಿಗಳು.ತಾಲೂಕು ಕಚೇರಿ ಐದು ದೂರುಗಳು ಸಲ್ಲಿಸಲಾಯಿತ್ತು.
ಇದೇ ವೇಳೆ ಲೋಕಯುಕ್ತ ಸಿಪಿಐ ಸಲೀಂ .ತಾಲೂಕು ಪಂಚಾಯಿತಿ ಇಓ.ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


