ಪಾವಗಡ: ವರಮಹಾಲಕ್ಷ್ಮೀ ವ್ರತಾಚರಣೆಗೆ ಬೆಲೆ ಏರಿಕೆಯ ಬಿಸಿ ಕಾಡಿದೆ. ವರಮಹಾಲಕ್ಷ್ಮೀ ಪೂಜೆಗೆ ಅಗತ್ಯವಾಗಿ ಬೇಕಾದ ಹೂವು ಹಣ್ಣು ಕಾಯಿ ಸಹಿತ ಫಲತಾಂಬೂಲದ ಬೆಲೆ ದಿಢೀರನೆ ಗಗನಗಾಮಿಯಾಗಿದೆ. ಬೆಲೆ ಏರಿಕೆಯ ನಡುವೆಯೂ ಮಾರುಕಟ್ಟೆಗೆ ದಾಂಗುಡಿಯಿಟ್ಟಿರುವ ಜನತೆ ಪೂಜೆಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದಾರೆ.
ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ರಸ್ತೆ ಬದಿಯಲ್ಲಿ ಹೂವಿನ ಮಾರುಕಟ್ಟೆಯ ಬಳಿ ಗುರುವಾದ ಮುಂಜಾನೆಯೇ ಹೂವನ್ನು ಕೊಳ್ಳಲು ಮತ್ತು ಮಾರಲು ಬಂದಿದ್ದ ಜನರಿಂದ ಹರಸಾಹಸ ಪಡುತ್ತಿದ್ದರು.
ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬಿಳುವ ಬರದ ನಾಡು ಎಂಬ ಹೆಸರುವಾಸಿಯಾದ ತಾಲೂಕು ಪಾವಗಡ ಈ ಹಿಂದೆ ತಾಲೂಕಿನ ಶೇಂಗಾ ಬೆಳೆಗೆ ಹೆಸರು ವಾಸಿಯಾದ ತಾಲ್ಲೂಕು ಅದರೆ ಇತ್ತಿಚೆಗೆ ಮಳೆ ಇಲ್ಲದ ಕಾರಣ ರೈತರು ಶೇಕಡ 80% ಹೂವಿನ ಬೆಳೆಗೆ ರೈತರು ಮಾರಿ ಹೋಗಿದ್ದಾರೆ.
ತಾಲೂಕಿನ ಮೂಲೆ ಮೂಲೆಗಳಿಂದ ರೈತರು ತಮ್ಮ ತಮ್ಮ ಜಮೀನಿನಲ್ಲಿ ಬೆಳೆ ದಂತಹ ಹೂವಿನ ಹೂವಿನ ಮಾರುಕಟ್ಟೆಯಾಗಿರುವ ಪಾವಗಡದ ಹೊಸ ಬಸ್ ನಿಲ್ದಾಣದ ರಸ್ತೆ ಬದಿಯೇ ಹೂವಿನ ಮಾರುಕಟ್ಟೆ.
ಹಬ್ಬ ಹರಿದಿನಗಳಲ್ಲಿ ಹೂವನ್ನು ಖರೀದಿಸಲು ರಾಜ್ಯದ ವಿವಿಧ ವರ್ಗಕ್ಕೆ ಜಿಲ್ಲೆಗಳಿಂದ ಮಾತ್ರವಲ್ಲದೆ ತೆಲಂಗಾಣ,ಆಂದ್ರ, ತಮಿಳುನಾಡು, ತಿರುಪತಿ. ಧರ್ಮಸ್ಥಳ ಕಡೆಗಳಿಗೆ ಈ ಭಾಗದ ರೈತರು ಬೆಳೆದ ಹೂವು ರಪ್ತು ಅಗುತ್ತದೆ ಎಂಬುದಾಗಿ ಸ್ಥಳೀಯ ರೈತರು ಹೇಳುತ್ತಾರೆ.
ಪಾವಗಡ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಪುಷ್ಪಕೃಷಿ ಪ್ರವರ್ಧಮಾನಕ್ಕೆ ಬಂದಿರುವ ಕಾರಣ ಹೆಚ್ಚಿನ ರೈತರು ಬಗೆಬಗೆಯ ಹೂವನ್ನು ಬೆಳೆಯಲು ಮುಂದಾಗಿದ್ದಾರೆ. ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಇಲ್ಲಿ ರೈತಾಪಿ ವರ್ಗಕ್ಕೆ ಖಚಿತ ತೆಯಿದೆ. ಕಾರಣ ಇಲ್ಲಿ ರೋಜಾ, ಶಾಮಂತಿ, ಮೆರಾಬುಲ್, ಬಟನ್ಸ್ ಗ್ಲಾಡಿಯೋಲಸ್, ಕನಕಾಂಬರ, – ಚೆಂಡುಹೂ, ಮಾರಿಗೋಲ್ಡ್, ವೆಲ್ವೆಟ್ ಇತ್ಯಾಧಿಗಳನ್ನು – ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ.ಕೆಲವೇ ಮಾಸ ಗಳಲ್ಲಿ ನಷ್ಟವನ್ನು ಅನುಭವಿಸಿದರೆ ಉಳಿದ ಎಲ್ಲಾ ಮಾಸಗಳಲ್ಲಿ ಕೈತುಂಬ ಹಣ ಕಂಡಿದ್ದಾರೆ.