ಪಾವಗಡ : ಬರದ ನಾಡಿನಲ್ಲಿ ಕುಡಿಯಲಿಕ್ಕೇ ಫ್ಲೋರೈಡ್ ನೀರು ಕುಡಿದ ಈ ಭಾಗದ ಜನರು ಜೀವಿಸುತ್ತಿದ್ದಾರೆ. ಇಲ್ಲಿ ಸರಿಯಾದ ನೀರಿಲ್ಲ. ನೀರಿಗಾಗಿ ಹಪಹಪಿಸುವ ಜನ ಈ ಬಾರಿಯ ಭೀಕರ ಬರಕ್ಕೆ ತುತ್ತಾಗಿ ನಲುಗಿ ಹೋಗಿದ್ದಾರೆ.
ಇಂತಹ ಪ್ರತಿಕೂಲ ಸನ್ನಿವೇಶದಲ್ಲೂ ಆತ್ಮವಿಶ್ವಾಸ ಕುಂದಿಸಿಕೊಳ್ಳದೇ ಬಂಗಾರದಂತಹ ಬಡವರ ಬಾದಾಮಿ ಎಂದೆ ಹೆಸರುವಾಸಿಯಾದ ಶೇಂಗಾ ಬೆಳೆ ಬೆಳೆದು ಅನೇಕ ರೈತರ ಬಾಳಿಗೆ ಮಾದರಿಯಾದಂತಹವರು ವಳ್ಳೂರು ಹನಮಂತರೆಡ್ಡಿ ಎಂಬ ರೈತ, ಇವರು ಮೂಲತಹ ತಾಲೂಕಿನ ವಳ್ಳೂರು ಗ್ರಾಮದ ವಾಸಿ, ಇದ್ದ ಅಲ್ಪಸ್ವಲ್ಪ ಜಮೀನು ಸೋಲಾರ್ ಘಟಕಕ್ಕೆ ನೀಡಿ ನಂತರ ಅದರಲ್ಲಿ ಬಂದಂತಹ ಹಣ ತಾಲೂಕಿನ ಕಡಮಲಕುಂಟೆ ಗ್ರಾಮದ ಬಳಿ ಸರ್ವೆ ನಂಬರ್ ತಾಲೂಕಿನಲ್ಲಿ ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ರೈತ ಬೆಳೆಯಲೂ ಸಹ ಹಿಂಜರಿಯುತ್ತಿದ್ದಾನೆ. ಧೈರ್ಯದಿಂದ ಮುನ್ನುಗ್ಗಿ ಶೇಂಗಾ ಬೆಳೆ ಬೆಳೆದು ರೈತ ಹನಮಂತರೆಡ್ಡಿ ಸೈ ಎನಿಸಿಕೊಂಡಿದ್ದಾರೆ.
ನಾಲ್ಕು ಎಕರೆ ಯಲ್ಲಿ ನಾಲ್ಕು ಕ್ವಿಂಟಲ ಶೇಂಗಾ ಬೀಜ ಹಾಕಿದ್ದಾರೆ.ಇಂದು ಒಂದು ಕ್ವಿಟಂಲ್ ಗೆ ಸುಮಾರು 50 ರಿಂದ60ಚೀಲಾ ಶೇಂಗಾ ಬಂದಿದೆ ಎಂಬುದಾಗಿ ಮಾದ್ಯಮಕ್ಕೆ ಮಾಹಿತಿ ನೀಡಿದ ರೈತ ಹನಮಂತರೆಡ್ಡಿ.
ಇವರ ಜಮೀನಿಗೆ ಭೇಟಿ ನೀಡಿದಾಗ ಒಂದು ಶೇಂಗಾ ಗಿಡದಲ್ಲಿ ರಾಶಿ ರಾಶಿ ಅಂದರೆ ಶೇಂಗಾ ಗಿಡದಲ್ಲಿ ಸುಮಾರು 200 ರಿಂದ 420 ರಷ್ಟು ಕಾಯಿ ಬೆಳೆದಿದೆ ಒಂದು ಕ್ಷಣ ಅಚ್ಚರಿ ಮೂಡಿತು.
ಗ್ರಾಮದ ಬಳಿ ಇರುವ ಜಮೀನು ಈ ಹಿಂದೆ ಬಿಡು ಬಿಡಲಾಗಿತ್ತು ರೈತ ಹನುಮಂತ ರೆಡ್ಡಿ ಆ ಜಮೀನಿನಲ್ಲಿ ಲೀಸ್ ಪಡೆದು 4ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಉತ್ತಮ ಈಡುವಳಿ ಬಂದಿದೆ ಎಂದರು.
ಈಗಾಗಲೇ ಬಹಾಳಷ್ಟು ರೈತರು ಹಲವು ಬೆಳೆಗಳನ್ನು ಬೆಳೆದು ಕೈ ಸುಟ್ಟಿಕೊಂಡ ಸನ್ನಿವೇಶ ಹತ್ತಿರ ದಿಂದ ನೋಡಿದ್ದೆವೆ. ಟೊಮೇಟೊ, ತೊಗರಿ, ಕರ್ಬುಜ, ಕಲ್ಲಂಗಡಿ ಹಾಕಿ ನಷ್ಟ ಅನುಭವಿಸಿರುವ ಘಟನೆಗಳು ನಾವು ಗಮನಿಸಿದ್ದೆವೆ.