ಪಾವಗಡ : ಶೈಕ್ಷಣಿಕ ಗುಣಮಟ್ಟ ಹೆಚ್ಚಿುಸುವ ಹಿನ್ನಲೆಯಲ್ಲಿ ಆದರ್ಶ ಶಾಲೆಗೆ ಸ್ವಂತ ಕಟ್ಟಡವಿದ್ದರೂ ಪಟ್ಟಣದಲ್ಲಿ ನಿರ್ವಹಣೆ ಮಾಡುತ್ತಿರುವ ಪರಿಣಾಮ ಮೂಲಭೂತ ಸೌಲಭ್ಯದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.ಇದರ ಪರಿಣಾಮ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಯನ್ನು ಕೊಠಡಿಗಳ ಕೊರತೆಯ ನೆಪದ ಮೇರೆಗೆ,ಆನೈರ್ಮಲ್ಯದಿಂದ ಕೂಡಿದ ಹಾಗೂ ಅಡುಗೆಯ ಕಸಕಟ್ಟಿ ಸಂಗ್ರಹ ಮಾಡಿದ್ದ ಮತ್ತು ಸೊಳ್ಳೆ ಇತರೆ ಕ್ರೀಮಿಕೀಟಗಳ ಹಾವಳಿ ವ್ಯಾಪಿಸಿದ್ದ ಗುರುಭವನ ಹಿಂಭಾಗದ ಬಯಲು ಪ್ರದೇಶದಲ್ಲಿ 6ಮತ್ತು 7ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದು ಬಡ ವಿದ್ಯಾರ್ಥಿಗಳಿಗೆ ಇಂತಹ ದುಸ್ಥಿತಿ ಒಂದೋದಗಿರುವುದು ದುರ್ದೈವದ ಸಂಗತಿ ಎಂದು ಆರೋಪಿಸಿದರು.
ಇದೇ ಶಾಲೆಯ ಮುಖ್ಯ ಶಿಕ್ಷಕ,ಆದರ್ಶ ಶಾಲೆ ನಿರ್ವಹಣೆ ಜತೆಗೆ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,(ಬಿಆರ್‌ಸಿ) ಎರಡು ಹುದ್ದೆ ಒಬ್ಬರೇ ನಿರ್ವಹಿಸುವ ಕಾರಣ,ಆದರ್ಶ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಸಂಬಂಧ ಮಕ್ಕಳ ಪರೀಕ್ಷೆಯ ಆದೋಗತಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆದರ್ಶ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕಡಮಲಕುಂಟೆ ರಾಮಾಂಜಿನಪ್ಪರಿಗೆ ದೂರು ಸಲ್ಲಿಸಿದರೂ ವಿದ್ಯಾರ್ಥಿಗಳ ಬಗ್ಗೆ ಆಸಕ್ತಿವಹಿಸಲಿಲ್ಲ.ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸುವ ಗೋಜಿಗೆ ಹೋಗಲಿಲ್ಲ.ಇವರಿಗೆ ವಿದ್ಯಾರ್ಥಿಗಳ ಬಗ್ಗೆ ಎಷ್ಟರ ಮಟ್ಟಿಗೆ ಕಾಳಿಜಿ ಇದೆ ಎಂದು ಪ್ರಶ್ನಿಸಿದರು.ಕೊಠಡಿಯ ಕೊರತೆ ಹಿನ್ನಲೆಯಲ್ಲಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಜೂನಿಯರ್ ಕಾಲೇಜ್ ಕೊಠಡಿಗಳನ್ನು ಕಲ್ಪಿಸುವಂತೆ ಮನವಿ ಮಾಡಿದರೂ ಕಾಲೇಜಿನ ಪ್ರಾಂಶುಪಾಲ ಆಸಕ್ತಿವಹಿಸಲಿಲ್ಲ.ಇದರಿಂದ ಎಲ್ಲೂ ಕೊಠಡಿಗಳ ಲಭ್ಯವಿಲ್ಲದ ಕಾರಣ,ಗುರುಭವನ ಹಿಂಭಾಗದ ಮರಗಳ ನೆರಳಿನಲ್ಲಿ 6ಮತ್ತು 7ನೇ ತರಗತಿಯ 200ಮಂದಿ ವಿದ್ಯಾರ್ಥಿಗಳ ಪರೀಕ್ಷೆ ಬರೆಸಲಾಗುತ್ತಿದೆ.ಶೀಘ್ರ ವ್ಯವಸ್ಥೆ ಸರಿಪಡಿಸುವುದಾಗಿ ಬಿಆರ್‌ಸಿ ಹಾಗೂ ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವಿ.ವೆಂಕಟೇಶ್ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಹೆಚ್ಚು ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಂತಹ ಅಧುನಿಕ ವ್ಯವಸ್ಥೆಯಲ್ಲಿಯೂ ಕೊಠಡಿಗಳಿಲ್ಲ ಎಂದು ಹೊರವಲಯದ ಪ್ರದೇಶದಲ್ಲಿ ಪರೀಕ್ಷೆ ಬರೆಸುತ್ತಿದ್ದು ಇನ್ನೂ ಶಿಕ್ಷಣ ವ್ಯವಸ್ಥೆ ಸುಧಾರಣೆ ಕಂಡಿಲ್ಲ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ದಲಿತ,ಹಾಗೂ ರೈತ ಮುಖಂಡ ಗುಂಡ್ಲಹಳ್ಳಿ ರಾಮಾಂಜಿನೇಯ ಆರೋಪಿಸಿದರು.