ಪಟನಾ : ಬಿಹಾರದ ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಕ್ಷೇತ್ರಗಳ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊAಡಿದೆ. ಎನ್‌ಡಿಎ, ಇಂಡಿಯಾ ಬ್ಲಾಕ್ ಮತ್ತು ಜನ್ ಸುರಾಜ್ ಪಕ್ಷಗಳ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಸಂಜೆ 6ಗಂಟೆ ಹೊತ್ತಿಗೆ ಶೇ.64.46ರಷ್ಟು ಮತದಾನವಾಗಿದ್ದ ವರದಿಯಾಗಿತ್ತು. ಬೆಗುಸರಯ್‌ನಲ್ಲಿ ಅತಿ ಹೆಚ್ಚು 67.32ರಷ್ಟು ಮತದಾನವಾಗಿದ್ದು, ಶೇಖ್‌ಪುರದಲ್ಲಿ ಅತ್ಯಂತ ಕಡಿಮೆ 52.36% ಜನ ಮತ ಚಲಾಯಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮುಂತಾದವರು ತಮ್ಮ ಮತ ಚಲಾಯಿಸಿದರು.
ಇಂಡಿಯಾ ಬ್ಲಾಕ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಉಪಮುಖ್ಯಮಂತ್ರಿಗಳಾದ ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯಕುಮಾರ್ ಸಿನ್ಹಾ ಅವರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾನಕ್ಕೆ ಸಂಜೆ 6 ಗಂಟೆಯವರೆಗೆ ಅವಕಾಶ ಇದ್ದರೂ, ಭದ್ರತಾ ಕಾರಣಗಳಿಂದ ತಾರಾಪುರ, ಸಿಮ್ರಿ ಭಕ್ತಿಯಾರ್‌ಪುರ, ಮಾಹಿಶಿ, ಮುಂಗೇರ್, ಜಮಾಲ್‌ಪುರ ಮತ್ತು ಸೂರ್ಯಗಢಗಳ ಹಲವು ಕ್ಷೇತ್ರಗಳಲ್ಲಿ ಸಂಜೆ ೫ ಗಂಟೆಗೇ ಮತದಾನವನ್ನು ಪೂರ್ಣಗೊಳಿಸಲಾಯಿತು. ಲಖಿಸರಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೇಲೆ ಆರ್‌ಜೆಡಿ ಬೆಂಬಲಿಗರಿAದ ಕಲ್ಲೆಸೆತ ಉಂಟಾಗಿದೆ ಎAದು ಪ್ರಕರಣ ದಾಖಲಾಗಿದೆ.
ಬಿಹಾರದಲ್ಲಿ ನಡೆಸಿದ ಎಸ್‌ಐಆರ್ ಪರಿಣಾಮದಿಂದ ರಾತ್ರಿ 8 ವರೆಗೆ ಬಂದ ಮಾಹಿತಿಯಂತೆ ಶೇ.64.46%ನಷ್ಟು ಮತದಾನ ನಡೆದಿದೆ. 2020ರ ಚುನಾವಣೆಯಲ್ಲಿ ಈ 121 ಕ್ಷೇತ್ರಗಳಲ್ಲಿ 55.81 %ನಷ್ಟು ಮತದಾನವಾಗಿತ್ತು. ಮತಪಟ್ಟಿ ಪರಿಷ್ಕರಣೆಯೇ ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಎರಡು ದಶಕಗಳಲ್ಲೇ ಅತ್ಯಧಿಕ ಮತದಾನ ನಡೆದಿದೆ.
ಆರ್‌ಜೆಡಿ ಬೆಂಬಲಿಗರಿAದ ಉಪ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಸಿನ್ಹಾ ಅವರ ಮೇಲೆ ಕಲ್ಲು ಮತ್ತು ಸಗಣಿಯನ್ನು ತೂರಿರುವ ಘಟನೆ ನಡೆದಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕೃತ್ಯ ಎಸಗಿದವರ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುವುದು ಎಂದು ನಂತರ ವಿಜಯ್
ಕುಮಾರ್ ಎಚ್ಚರಿಸಿದ್ದಾರೆ.


