ಬೆಂಗಳೂರು : ನಾವು ಇಷ್ಟಪಡುವ ಬಣ್ಣ ನಮ್ಮ ವ್ಯಕ್ತಿತ್ವವನ್ನೂ ಸೂಚಿಸುತ್ತದೆ. ನಮ್ಮ ಮೂಡ್, ಸಂತೋಷ, ನೋವು ನಲಿವು, ಆಸಕ್ತಿ, ಅಭಿರುಚಿ ಎಲ್ಲವನ್ನೂ ಹೇಳುತ್ತವೆ. ಇದೇ ರೀತಿ ಕಾರಿನ ಬಣ್ಣ ಕೂಡ ವ್ಯಕ್ತಿಯ ಮೂಡ್, ಸಂತೋಷ ಸೇರಿದಂತೆ ವ್ಯಕ್ತಿತ್ವ ಹೇಳುತ್ತಂತೆ. ಸರಿ ವಿವಿಧ ಬಣ್ಣದ ಕಾರುಗಳನ್ನು ನೋಡಿ ಬಣ್ಣದ ಜ್ಯೋತಿಷಿಗಳು ಯಾವ ರೀತಿಯ ಭವಿಷ್ಯ ಹೇಳಿದ್ದಾರೆ ಎಂದು ನೋಡೋಣ. ಹಲವು ಸಂಶೋಧನೆಗಳು, ವಿಶ್ಲೇಷಣೆಗಳೂ ಕೂಡ ಕಾರಿನ ಬಣ್ಣ ನೋಡಿ ವ್ಯಕ್ತಿಯ ವ್ಯಕ್ತಿತ್ವ ಅಳೆಯಬಹುದು ಎನ್ನುತ್ತವೆ.
ನೀವು ಕಡು ಕಿತ್ತಲೆ-ಕೆಂಪು ಬಣ್ಣದ ಕಾರ್ ಹೊಂದಿದ್ದರೆ, ನೀವು ಸೆಕ್ಸಿ, ಒಂದಿಷ್ಟು ಆತುರಗಾರ, ಶಕ್ತಿಶಾಲಿ ಮತ್ತು ಡೈನಾಮಿಕ್ ವ್ಯಕ್ತಿತ್ವವುಳ್ಳವರು. ಡ್ರೆಸ್ ಮಾಡೋ ಮುನ್ನ ಹೊರಗೆ ಬಂದು ಈ ಕಾರನ್ನು ನೋಡದಿದ್ದರೆ ನಿಮಗೆ ನೆಮ್ಮದಿಯಿಲ್ಲ. ನೀವು ಸ್ವಲ್ಪ ಬ್ಯುಸಿ, ಹಿರಿಯರು ಅಥವಾ ಜೀವನದಲ್ಲಿ ಸುಸ್ತಾದವರೂ ಆಗಿರುತ್ತೀರಿ. ಹಾಗಂತ ಬಣ್ಣದ ವಿಶ್ಲೇಷಕರು ಹೇಳುತ್ತಾರೆ.
ಸಿಲ್ವರ್ ಬಣ್ಣದ ಕಾರು ಹೊಂದಿದ್ದರೆ ನೀವು ಕೂಲ್ ಮತ್ತು ಸೊಗಸಾದ ವ್ಯಕ್ತಿತ್ವ ಹೊಂದಿದ್ದೀರಿ ಎಂದರ್ಥ. ಆದರೆ ಸಮಸ್ಯೆಯೆಂದರೆ ಸಾಕಷ್ಟು ವರ್ಷಗಳಿಂದ ಹೆಚ್ಚು ಜನಪ್ರಿಯವಾಗಿರುವುದೇ ಸಿಲ್ವರ್ ಬಣ್ಣದ ಕಾರುಗಳು. ನಿಮ್ಮ ಪಕ್ಕದ ಮನೆಯವರಲ್ಲೂ ಸಿಲ್ವರ್ ಬಣ್ಣದ ಕಾರು ಇರುವ ಸಾಧ್ಯತೆಯಿರುತ್ತದೆ. ಸಿಲ್ವರ್ ಅಂದರೆ ನಿಮ್ಮ ಸುಮಧುರ ವ್ಯಕ್ತಿತ್ವದ ಧ್ಯೋತಕವಂತೆ!
ಬಿಳಿ ಬಣ್ಣದ ಕಾರು ಹೊಂದಿದ್ದರೆ ನಿಮ್ಮದ್ದು ಮೆಚ್ಚಿಸಲಸಾಧ್ಯವಾದ ವ್ಯಕ್ತಿತ್ವ. ನಿಮಗೆ ಮನಸ್ಸಿನಲ್ಲಿ ಕಡು ಕೆಂಪು-ಕಿತ್ತಲೆ ಬಣ್ಣದ ಕಾರಿನ ಅಗತ್ಯ ಕಂಡು ಬಂದರೂ ನೀವು ಬಿಳಿ ಕಾರಿಗೆ ತೃಪ್ತಿಪಟ್ಟುಕೊಳ್ಳುತ್ತೀರಿ. ಉತ್ತಮ ಯೋಚನಾ ಕ್ರಮ ನಿಮ್ಮದ್ದು. ಬಿಳಿ ಬಣ್ಣವೆಂದರೆ ಶಾಂತಿಯ ಬಣ್ಣವೂ ಹೌದು. ಅಪಘಾತದ ಅಪಾಯ ಇತರ ಬಣ್ಣದ ಕಾರುಗಳಿಗಿಂತ ಕಡಿಮೆ ಎಂದು ಅಧ್ಯಯನಗಳೂ ಹೇಳುತ್ತವೆ. ತೆಳು ನೀಲಿ ಬಣ್ಣದ ವಾಹನ ಹೊಂದಿರುವ ನಿಮ್ಮದ್ದು ನಯವಿನಯ ಮತ್ತು ತಣ್ಣನೆಯ ವ್ಯಕ್ತಿತ್ವ. ನೀವು ಶೋರೂಂಗೆ ಹೋಗಿ ಮಿಂಚುವ ಅರಸಿನ ಬಣ್ಣದ ಕಾರು ಖರೀದಿಸಿದರೆ ನೀವು ಎಷ್ಟು ಜಾಲಿ ಮತ್ತು ಯುವ ಉತ್ಸಾಹಿ ಹೃದಯ ಹೊಂದಿದ್ದೀರಿ ಎಂದು ಅರಿವಾಗುತ್ತದೆ. ಕಡಲಿನ ನೀಲಿ ಬಣ್ಣದ ಕಾರು ನೀವು ಬಯಸಿದರೆ ನೀವು ವಿನಯವಂತರು ಎಂದು ತಿಳಿಯುತ್ತದೆ. ಹೆಚ್ಚಿನವರು ಬಯಸುವ ವ್ಯಕ್ತಿತ್ವವೇ ಇದು. ತಣ್ಣಗೆ ಹೋಗಿ ತೆಳು ನೀಲಿ ಬಣ್ಣದ ಕಾರು ಖರೀದಿಸಿರಿ.
ಕಡು ಹಸಿರು ಬಣ್ಣದ ಕಾರು ಹೊಂದಿದ್ದರೆ ನೀವೊಬ್ಬರು ಸಾಂಪ್ರದಾಯಿಕ, ನಿಷ್ಠ ಮತ್ತು ಬದುಕಿನಲ್ಲಿ ಸಮತೋಲನ ಕಾಪಾಡಿಕೊಂಡ ವ್ಯಕ್ತಿತ್ವದವರೆಂದು ಅರಿವಾಗುತ್ತದೆ. ಇದರ ನಿಜವಾದ ಅರ್ಥವೆಂದರೆ ನೀವು ಒಂಚೂರು ಮಿತವ್ಯಯದ ವ್ಯಕ್ತಿ. ಹಾಗಂತ ಕಂಜೂಸ್ ಅಂತ ಅಂದುಕೊಳ್ಳಬೇಕಾಗಿಲ್ಲ.
ನೀವು ನೆರಳೆ ಬಣ್ಣದ ಕಾರು ಹೊಂದಿದ್ದರೆ, ನೀವು ಕ್ರಿಯೆಟಿವ್ ವ್ಯಕ್ತಿತ್ವ, ಎಲ್ಲರೊಟ್ಟಿಗೆ ಬೆರೆಯುವವರು ಮತ್ತು ಆಕರ್ಷಕ ವ್ಯಕ್ತಿತ್ವವೆಂದು ತಿಳಿದುಬರುತ್ತದೆ. ಈತನಿಗೆ ತುಂಬಾ ತಿಳಿದಿದೆ ಅಥವಾ ಜ್ಞಾನ ಹೊಂದಿದ ವ್ಯಕ್ತಿ ಅಂತ ನಿಮ್ಮ ಬಗ್ಗೆ ಇತರರು ತಿಳಿಯುವ ಸಾಧ್ಯತೆಯೂ ಈ ಬಣ್ಣದ ಕಾರಿನಲ್ಲಿದೆಯಂತೆ! ಕಪ್ಪು ಬಣ್ಣದ ಕಾರು ಹೊಂದಿದ್ದರೆ ನೀವು ಅಧಿಕಾರ ಹೊಂದಿರುವವರು, ಕುಯುಕ್ತಿಗಾರ ಮತ್ತು ಸೊಗಸುಗಾರ ಎಂದು ತಿಳಿದು ಬರುತ್ತದೆ. ಮತ್ತು ಇದರೊಂದಿಗೆ ನಿಮಗೆ ಕ್ಲಾಸಿಕ್ ಕಾರುಗಳು ಇಷ್ಟವಾದರೆ ನೀವೊಂದಿಷ್ಟು ಗೌಪ್ಯ ವ್ಯಕ್ತಿತ್ವದವರು ಅಥವಾ ಎರಡು ಬಗೆಯ ವ್ಯಕ್ತಿತ್ವವುಳ್ಳವರೂ ಎಂದೂ ತಿಳಿಯುತ್ತದಂತೆ. ಹಾಗಾಗಿ ಇಂತಹ ಕಾರುಗಳು ರೌಡಿ, ಗ್ಯಾಂಗ್ ಸ್ಟಾರ್ ಗಳಲ್ಲಿ ಇರುವುದು ಜಾಸ್ತಿ. ತುಸು ಕಪ್ಪಿನ ಕಾರು ಹೊಂದಿದ್ದರೆ ನೀವು ಸಮಯಪ್ರಜ್ಞೆ ಇಲ್ಲದವರು, ಸಾಮಾನ್ಯ ವ್ಯಕ್ತಿತ್ವದವರು ಎಂದು ತಿಳಿಯುತ್ತದೆ. ನೀವು ಏನೋ ಮುಚ್ಚಿಡುವ ವ್ಯಕ್ತಿತ್ವದವರೆಂದೂ ಇದರಿಂದ ತಿಳಿಯುತ್ತದೆ. ಕಾರನ್ನು ನಿಯಮಿತವಾಗಿ ತೊಳೆಯದವಾಗಿರಬಹುದು ಅಥವಾ ಕೆಟ್ಟದಾಗಿ ವಾಹನ ಚಾಲನೆ ಮಾಡುವವರೂ ನೀವಾಗಿರಬಹುದು.
ಕಡು ನೀಲಿ ಬಣ್ಣದ ಕಾರಿದ್ದರೆ ನೀವು ವಿಶ್ವಸನೀಯ, ಭರವಸೆ ಹೊಂದಿರುವ ಮತ್ತು ಸಮರ್ಥ ವ್ಯಕ್ತಿತ್ವ ಹೊಂದಿರುವವರು ಎಂದು ತಿಳಿಯುತ್ತದೆ. ನೀವು ಜಾಸ್ತಿ ಸಮಯ ಡ್ರೈವ್ ಮಾಡುತ್ತೀರಿ ಏಕೆಂದರೆ ನಿಮಗೆ ತೊಡರುಗಾಲು, ಅಡ್ಡಿ ಆತಂಕಗಳು ಕೆಲವೊಮ್ಮೆ ಜಾಸ್ತಿ ಎಂದು ಬಣ್ಣದ ಭವಿಷ್ಯಕಾರರು ಹೇಳುತ್ತಾರೆ. ಬೂದಿ ಬಣ್ಣದ ಕಾರು ನಿಮ್ಮದಾಗಿದ್ದರೆ ನೀವು ಮಿತಸ್ಥ, ಕಾರ್ಪೊರೇಟ್, ಪ್ರಾಕ್ಟಿಕಲ್ ಆಗಿ ಯೋಚಿಸುವರು ಮತ್ತು ಬೋರಿಂಗ್ ವ್ಯಕ್ತಿತ್ವದವರು ಎಂದು ತಿಳಿಯುತ್ತದೆ. ಬೂದಿ ಬಣ್ಣ ಪ್ರಭೆಯ ಬಣ್ಣವೂ ಹೌದು. ನಿಮ್ಮ ವರ್ಚಸ್ಸು ಮತ್ತು ಚರಿಷ್ಮಾ ಸೂಚಕವೂ ಹೌದು. ಕಿತ್ತಲೆ ಬಣ್ಣದ ಕಾರು ನೀವು ಹೊಂದಿದ್ದರೆ ನಿಮಗೆ ಫನ್ ಅಂದ್ರೆ ಇಷ್ಟ, ಸೊಗಸಾದ ಮಾತುಗಾರ, ಚಪಲಗಾರ ಮತ್ತು ಒಲವಿನ ವ್ಯಕ್ತಿತ್ವದವರೆಂದು ತಿಳಿದುಬರುತ್ತದೆ. ಹಳದಿ-ಹಸಿರು ಮಿಶ್ರಿತ ಕಾರು ಕೂಡ ಒಲವು, ಸ್ವಚ್ಛಂದ ವ್ಯಕ್ತಿತ್ವದ ಸೂಚಕ. ಚಿನ್ನದ ಬಣ್ಣದ ಕಾರು ಹೊಂದಿದ್ದರೆ ನಿಮಗೆ ಆರಾಮದಾಯಕತೆ ಇಷ್ಟವೆಂದು ತಿಳಿದುಬರುತ್ತದೆ. ನೀವು ಇಂಟಲಿಜೆಂಟ್ ವ್ಯಕ್ತಿತ್ವ ಎಂದೂ ತಿಳಿಯುತ್ತದೆ.