Wednesday, October 22, 2025
Flats for sale
Homeಕ್ರೀಡೆನವದೆಹಲಿ : ICC ಟಿ20 ತಂಡ ಪ್ರಕಟ,ಸೂರ್ಯಕುಮಾರ್ ಯಾದವ್ ನಾಯಕ.

ನವದೆಹಲಿ : ICC ಟಿ20 ತಂಡ ಪ್ರಕಟ,ಸೂರ್ಯಕುಮಾರ್ ಯಾದವ್ ನಾಯಕ.

ನವದೆಹಲಿ : ಐಸಿಸಿ ಪುರುಷರ ಟಿ20 ತಂಡವನ್ನು ಪ್ರಕಟಿಸಲಾಗಿದ್ದು ಭಾರತ ತಂಡದ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ಭಾರತದ ಆಟಗಾರರಾದ ರವಿ ಬಿಷ್ಣೋಯ್, ಯಶಸ್ವಿ ಜೈಸ್ವಾಲ್ ಮತ್ತು ಅರ್ಷದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಟಿ20 ಮಾದರಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಸೂರ್ಯಕುಮಾರ್ 18 ಪಂದ್ಯಗಳನ್ನು ಆಡಿದ್ದು ಎರಡು ಅದ್ಭುತ ಶತಕಗಳೊಂದಿಗೆ 733 ರನ್ ಪೇರಿಸಿದ್ದಾರೆ.

ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 15 ಪಂದ್ಯಗಳಲ್ಲಿ 430 ರನ್ ಗಳಿಸಿದ್ದಾರೆ. ಇದರಲ್ಲಿ ಶತಕವೂ ಸೇರಿದೆ. ರವಿ ಬಿಷ್ಣೋಯ್ ಅವರು ಈ ಹಿಂದೆ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದಿದ್ದರು. ಅರ್ಷದೀಪ್ ಸಿಂಗ್ 21 ಪಂದ್ಯಗಳಿಂದ 26 ವಿಕೆಟ್ ಪಡೆದಿದ್ದಾರೆ.

ICC ಟಿ20 ವರ್ಷದ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪುರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಾಸ್, ಅಲ್ಪೇಶ್ ರಾಮ್ಜಾನಿ, ಮಾರ್ಕ್ ಅದೈರ್, ರವಿ ಬಿಷ್ಣೋಯ್, ರಿಚರ್ಡ್ ನಾಗರಾವ, ಅರ್ಷದೀಪ್ ಸಿಂಗ್.

RELATED ARTICLES

LEAVE A REPLY

Please enter your comment!
Please enter your name here

Most Popular