Saturday, April 19, 2025
Flats for sale
Homeಸಿನಿಮಾನವದೆಹಲಿ : 60 ನೇ ವರ್ಷದಲ್ಲಿ ಹೊಸ ಗೆಳತಿಯೊಂದಿಗೆ ಚೀನಾದಲ್ಲಿ ಕಾಣಿಸಿಕೊಂಡ ರಸಿಕ ಅಮೀರ್ ಖಾನ್..!

ನವದೆಹಲಿ : 60 ನೇ ವರ್ಷದಲ್ಲಿ ಹೊಸ ಗೆಳತಿಯೊಂದಿಗೆ ಚೀನಾದಲ್ಲಿ ಕಾಣಿಸಿಕೊಂಡ ರಸಿಕ ಅಮೀರ್ ಖಾನ್..!

ನವದೆಹಲಿ : ಕೋಟಿ ಗಟ್ಟಲೆ ಹಣವಿದ್ದರೆ ಒಂದಲ್ಲಾ ಎಷ್ಟು ಬೇಕಾದರೂ ಮದುವೆ ಆಗಿ ಬಿಡಬಹುದು ಎಂಬುದಕ್ಕೆ ರಸಿಕ ನಟ ಅಮಿರ್ ಖಾನ್ ನಿದರ್ಶನ. ಅಮೀರ್ ಖಾನ್ ಇತ್ತೀಚೆಗೆ ತಮ್ಮ ಹೊಸ ಗೆಳತಿ ಗೌರಿ ಸ್ಪ್ರಾಟ್ ಜೊತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಚೀನಾದ ಮಕಾವು ಅಂತರರಾಷ್ಟ್ರೀಯ ಹಾಸ್ಯ ಚಲನಚಿತ್ರೋತ್ಸವದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ಇಬ್ಬರೂ ಕೈ ಕೈ ಹಿಡಿದು ಕಾಣಿಸಿಕೊಂಡರು. ಈ ಸಮಯದಲ್ಲಿ, ಆಮಿರ್ ತನ್ನ ಗೆಳತಿಯ ಕೈಯನ್ನು ಹಿಡಿದಿರುವುದು ಕಂಡುಬಂದಿದೆ. ಅವರಿಬ್ಬರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.ಈ ಭೇಟಿಯ ನಂತರ, ಇಬ್ಬರ ನಡುವಿನ ಸಂಭಂದದ ಬಗ್ಗೆ ಚರ್ಚೆಗಳು ಮತ್ತೊಮ್ಮೆ ಭುಗಿಲೆದ್ದಿವೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಆಮಿರ್ ಕಪ್ಪು ಕುರ್ತಾ-ಪೈಜಾಮ ಧರಿಸಿ, ಕಪ್ಪು -ಚಿನ್ನದ ಬಣ್ಣದ ಶಾಲು ಹೊದಿಸಿಕೊಂಡಿದ್ದರು, ಆದರೆ ಗೌರಿ ಈ ಕಾರ್ಯಕ್ರಮಕ್ಕೆ ಹೂವಿನ ಸೀರೆಯಲ್ಲಿ ಕಂಗೋಳಿಸಿದ್ದಾರೆ. ಮಕಾವು ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ತಮ್ಮ ಮಾಸ್ಟರ್ ಡ್ಯೂಮರ್ ಪ್ರಶಸ್ತಿ ಸ್ವೀಕರಿಸಲು ಚೀನಾಕ್ಕೆ ಭೇಟಿ ನೀಡಿದ್ದಾರೆ.

ಈ ಸಮಯದಲ್ಲಿ ನಟರಾದ ಶೆನ್ ಟೆಂಗ್ ಮತ್ತು ಮಾ ಲಿ ಕೂಡ ಗೌರಿ ಮತ್ತು ಆಮಿರ್ ಜೊತೆ ಹಾಜರಿದ್ದರು ತಮ್ಮ ಹುಟ್ಟುಹಬ್ಬದಂದು, ಆಮಿರ್ ಖಾನ್ ಅವರು ಗೌರಿ ಸ್ಪ್ರಾಟ್ ಜೊತೆಗಿನ ಸಂಬAಧವನ್ನು ಬಹಿರAಗಪಡಿಸಿದ್ದಾರೆ. ಆಮಿರ್ ಖಾನ್ ಅವರಿಗೆ ಈಗ 60 ವರ್ಷ ವಯಸ್ಸಾಗಿದೆ. ಇತ್ತೀಚೆಗೆ ಅವರು ತಮ್ಮ 60 ನೇ ಹುಟ್ಟುಹಬ್ಬವನ್ನು
ಆಚರಿಸಿಕೊಂಡಿದ್ದಾರೆ. ಗೌರಿ ಸ್ಪ್ರಾಟ್ ಅವರಿಗೆ ೪೬ ವರ್ಷ. ಅವರಿಬ್ಬರ ವಯಸ್ಸಿನ ನಡುವೆ 14 ವರ್ಷಗಳ ವ್ಯತ್ಯಾಸವಿದೆ. ಕಳೆದ ಒಂದು ವರ್ಷದಿAದ ಆಮಿರ್ ಗೌರಿ ಜೊತೆ ಲಿವ್-ಇನ್ ಸಂಬAಧದಲ್ಲಿದ್ದಾರೆ ಎAಬ ವರದಿಗಳಿವೆ.

ಗೌರಿ ಸ್ಪಾಟ್ ಒಬ್ಬ ಪ್ರಸಿದ್ಧ ಲೇಖಕಿ ಮತ್ತು ಅಂತರರಾಷ್ಟ್ರೀಯ ಯವಾಗಿ ಪ್ರಸಿದ್ಧ ವ್ಯಕ್ತಿ. ಅಮೀರ್ ಖಾನ್ ಪ್ರಸ್ತುತ ಸಿನಿಮಾಗಳಿಂದ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ವೈಯಕ್ತಿಕ ಜೀವನದತ್ತ ಗಮನ ಹರಿಸುತ್ತಿದ್ದಾರೆ. ಅವರ ಸಾಮಾಜಿಕ ಕಾರ್ಯಗಳು, ಕೌಟುಂಬಿಕ ಕಾರ್ಯಕ್ರಮಗಳು ಮತ್ತು ಖಾಸಗಿ ಭೇಟಿಗಳಿಂದಾಗಿ ಅವರು ಕಾಲಕಾಲಕ್ಕೆ ಸುದ್ದಿಯಲ್ಲಿರುತ್ತಾರೆ. ಅವರ ಚೀನಾ ಭೇಟಿ ವೈಯಕ್ತಿಕ ಎಂದು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವರು ಹೊಸ ಚಿತ್ರಕ್ಕಾಗಿ ತಯಾರಿ ಆರಂಭಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬೀಳುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular