ನವದೆಹಲಿ : ಬುಧವಾರ ಮಧ್ಯರಾತ್ರಿ ಭಯೋತ್ಪಾದಕ ಭದ್ರಕೋಟೆಗಳ ಮೇಲೆ ನಡೆದ ದಾಳಿ ಹಿನ್ನೆಲೆ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ `ಸುದರ್ಶನ ಚಕ್ರ’ದ ಅಗಾಧ ಶಕ್ತಿಯನ್ನು ತೋರಿಸಿದೆ. ಜತೆಗೆ ಲಾಹೋರ್ ಏರ್ ಡಿಫೆನ್ಸ್ ರಾಡಾರ್ ಕೇಂದ್ರದ ಮೇಲೂ ಡ್ರೋನ್ ದಾಳಿ ಮಾಡಿದೆ.
ಇನ್ನು ಪಾಕಿಸ್ತಾನ ಕೂಡ ಗುರುವಾರ ರಾತ್ರಿ 9 ಗಂಟೆಯಷ್ಟೊತ್ತಿಗೆ ರಾಜಸ್ಥಾನದ ಜೈಸ್ಮೆಲೇರ್ ವಾಯುನೆಲೆ ಹಾಗೂ ಶ್ರೀನಗರ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ೩ ಯುದ್ಧ ವಿಮಾನಗಳನ್ನು ಹಾರಿ ಬಿಟ್ಟಿದೆ. ಆದರೆ ೨ ಜೆಎಫ್-೧೪ ಹಾಗೂ ಒಂದು ಎಫ್-16 ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶ ಪ್ರವೇಶಿಸುವುದಕ್ಕೂ ಮುಂಚೆಯೇ ಸೇನೆ ಹೊಡೆದುರುಳಿಸಿದೆ.
ಅದೇ ರೀತಿ, ಬುಧವಾರ ರಾತ್ರಿ ಉತ್ತರ ಹಾಗೂ ದಕ್ಷಿಣ ಕಾಶ್ಮೀರದಲ್ಲಿರುವ ಭಾರತದ ಸೇನಾ ನೆಲೆಗಳು ಮತ್ತು ದೇಶದ ಅವಂತಿಪುರಾ, ಶ್ರೀನಗರ, ಜಮ್ಮು, ಪಠಾಣ್ ಕೋಟ್, ಅಮೃತಸರ್, ಲುಧಿಯಾನಾ ಸೇರಿದಂತೆ 15 ನಗರಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಲು ಮುಂದಾಗಿದ್ದ ಪಾಕಿಸ್ತಾನ ಸೇನೆಯ ಉಗ್ರ ಕೃತ್ಯವನ್ನು ಭಾರತೀಯ ಸೇನೆ ಯಶಸ್ವಿಯಾಗಿ, ಯಾರಿಗೂ ಯಾವುದೇ ಹಾನಿಗಳಾಗದಂತೆ ವಿಫಲಗೊಳಿಸಿದೆ.
ಪಾಕಿಸ್ತಾನದ ಡ್ರೋನ್ ಮತ್ತು ಮಿಸೈಲ್‌ಗಳು ಭಾರತದ ವಾಯು ಪ್ರದೇಶವನ್ನು ಪ್ರವೇಶಿಸುವುದಕ್ಕೂ ಮುಂಚೆಯೇ ಅವರ ನೆಲದಲ್ಲೇ ಅವುಗಳನ್ನು ಹೊಡೆದುರುಳಿಸಿದ್ದು ಎಸ್-೪೦೦ ಸುದರ್ಶನ ಚಕ್ರ ಕ್ಷಿಪಣಿ ವ್ಯವಸ್ಥೆ. ಪಾಕ್‌ನ 8 ಕ್ಷಿಪಣಿಗಳು ಸುದರ್ಶನ ಚಕ್ರದ ಹೊಡೆತಕ್ಕೆ ಸಿಕ್ಕಿ ನೆಲಕ್ಕಚ್ಚಿವೆ. ಇದರ ಜತೆಗೆ ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಕೂಡ ಪಾಕ್ ದಾಳಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಲಾಹೋರ್ ಮೇಲೆ ಭಾರಿ ಕಿಪಣಿ ದಾಳಿ ಬುಧವಾರ ಮಧ್ಯರಾತ್ರಿ (2.4.25) ಭಾರತದ ಸೇನಾ ನೆಲೆಗಳು ಹಾಗೂ 15 ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಭಾರತ ಭಾರೀ ಹೊಡೆತವನ್ನೇ ಕೊಟ್ಟಿದೆ. ಪಾಕ್‌ನ ೨ನೇ ಅತಿದೊಡ್ಡ ನಗರ ಲಾಹೋರ್‌ನಲ್ಲಿರುವ ವಾಯುನೆಲೆಯ ರಾಡಾರ್ ಕೇಂದ್ರದ ಮೇಲೆ ಭಾರತೀಯ ಸೇನೆ ಗುರುವಾರ ಬೆಳ್ಳಂಬೆಳಗ್ಗೆ ಡ್ರೋನ್ ದಾಳಿ ಮಾಡಿದೆ. ದಾಳಿಯಲ್ಲಿ ಇಡೀ ಕೇಂದ್ರ ಧ್ವಂಸವಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಚರಣೆಯಲ್ಲಿ ಸತ್ತ ಭಯೋತ್ಪಾದಕರ ಸಂಖ್ಯೆ 80 ಅಲ್ಲ 100 ಎಂದು ರಾಜನಾಥ್ ಸಿಂಗ್ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಮಾಹಿತಿ ನೀಡಿದರು. ಆಪರೇಷನ್ ಸಿಂದೂರ್ ಜಾರಿಯಲ್ಲಿದೆ. ಪಾಕ್ ದಾಳಿ ನಡೆಸಿದರೆ, ಭಾರತ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಉಗ್ರರು ಹಾಗೂ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಲು ಭಾರತದ ಸೈನಿಕರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬಳಸಿದ ಅತ್ಯಾಧುನಿಕ ಡ್ರೋನ್‌ಗಳನ್ನು ತಯಾರಾಗಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಬೆAಗಳೂರಿನ ಕಂಪನಿ ನಿರ್ಮಿಸಿದ ಸ್ಕೆöÊ ಸ್ಟೆöÊಕರ್ ಸೂಸೈಡ್ ಡೋನ್‌ಗಳನ್ನು ಬಳಕೆ ಮಾಡಿರುವುದನ್ನು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಇಸ್ರೇಲ್‌ನ ಎಲ್ಟಿಟ್ ಸಿಸ್ಟಮ್‌ಗಳ ಸಹಯೋಗದೊಂದಿಗೆ ಬೆAಗಳೂರು ಮೂಲದ ಆಲ್ಫಾಡಿಸೈನ್ (ಎಡಿಟಿಎಲ್) ಅಭಿವೃದ್ಧಿಪಡಿಸಿದ ಸೈ ಸ್ಟ್ರೈಕರ್ ಆತ್ಮಹತ್ಯಾ ಡ್ರೋನ್‌ಗಳು ಜಮ್ಮು ಮತ್ತು ಕಾಶ್ಮೀರದ ಮುಂದಿನ ಪ್ರದೇಶಗಳಲ್ಲಿ ಅಪರೇಷನ್ ಸಿಂಧೂರ್ ಸಮಯದಲ್ಲಿ ತಮ್ಮ ಕಾರ್ಯಾಚರಣೆಗೆ ಬಳಸಿ ಉಗ್ರರ ನೆಲೆಗಳನ್ನು ನಿರ್ನಾಮ ಮಾಡಿವೆ.
ಶತ್ರು ಗುರಿಗಳನ್ನು ಪತ್ತೆ ಹಚ್ಚಲು ಮತ್ತು ಹೊಡೆಯಲು ವಿನ್ಯಾಸಗೊಳಿಸಲಾಗಿದೆ. ಯುದ್ಧ ಸಾಮಗ್ರಿಗಳು 5 ಕೆಜಿ ಸಿಡಿತಲೆಗಳನ್ನು ಸಾಗಿಸಲು ಮತ್ತು 100 ಕಿ ಮೀ ವ್ಯಾಪ್ತಿಯಲ್ಲಿ ನೇರ-ಬೆಂಕಿಯ ವೈಮಾನಿಕ ನಿಖರ ದಾಳಿಯನ್ನು ಮಾಡಲು ಸಮರ್ಥವಾಗಿವೆ. ಅಂತಹ 100 ಸೈ ಸೈಕರ್‌ಗಳಿಗೆ 2021 ರ ಖರೀದಿ ಒಪ್ಪಂದದ ಅಡಿಯಲ್ಲಿ ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಸೇರಿಸಲಾಗಿತ್ತು.
ಯುಎಎಸ್‌ನಂತೆ (ಮಾನವರಹಿತ ವಿಮಾನ ವ್ಯವಸ್ಥೆ) ಹಾರುತ್ತದೆ ಮತ್ತು ಕ್ಷಿಪಣಿಯಂತೆ ಇದು ಹೊಡೆದು ಹಾಕುತ್ತದೆ. ದೂರದಲ್ಲೇ ಸ್ಕೆöÊ ಸ್ಪೀಕರ್ ನಿಯಂತ್ರಣ ಮಾಡಬಹುದಾಗಿರುವ ಕಾರಣ ಭಾರತ ಸುಲಭವಾಗಿ ಗಡಿಯನ್ನು ದಾಟಿ ಉಗ್ರರ ನೆಲೆಗಳ ಮೇಲೆ ಅಪ್ಪಳಿಸಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ನೆಲೆಗಳು ಧ್ವಂಸಗೊAಡಿವೆ. ವಿಮಾನದ ಮಾದರಿಯಲ್ಲಿರುವ ಈ ಡೋನ್ ೧೦೦ ಕಿ ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವುದರ ಜೊತೆಗೆ 5 ಕೆಜಿ ಅಥವಾ 10 ಕೆಜಿ ಗ್ರೆನೇಡ್‌ನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಎತ್ತರದಲ್ಲಿ ಹಾರುವ ಮೂಲಕ ನಿಖರ ಗುರಿಯನ್ನು ತಲಪುವುದು ಇದರ ವಿಶೇಷತೆ.