ನವದೆಹಲಿ : ರೈಲ್ವೆ ಇಲಾಖೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣಿಕರ ದರವನ್ನು ಹೆಚ್ಚಿಸಿದೆ. ಆದರೂ ಸ್ಥಳೀಯ ರೈಲುಗಳು ಮತ್ತು ಅಲ್ಪ ದೂರ ಪಿಟ್ ಪ್ರಯಾಣ ದರ ಗಳಲ್ಲಿ ಬದಲಾವಣೆಗಳಿಲ್ಲ. ಈ ದರ ಏರಿಕೆಯಿಂದ ಹಾಲಿ ಹಣಕಾಸು ವರ್ಷದಲ್ಲಿ 600 ಕೋಟಿ ರೂ ಹೆಚ್ಚುವರಿ ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಹಿಂದೆ ಕಳೆದ ಜುಲೈನಲ್ಲಿ ಹಾಗೂ 2020 ರ ಜನವರಿ 1 ರಂದು ರೈಲ್ವೆ ಟಿಕೆಟ್ ದರಗಳನ್ನು ಇದೇ ತೆರನಾಗಿ ಏರಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು
ಎಷ್ಟು ಏರಿಕೆ?
215 ಕಿ.ಮೀ.ಗಿಂತ ದೂರದ ಸಾಮಾನ್ಯ ವರ್ಗದ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 1 ಪೈಸೆಯಂತೆ ಏರಿಕೆಯಾಗಲಿದೆ. ಮೇಲ್, ಎಕ್ಸ್ಪ್ರೆಸ್ ರೈಲುಗಳ ಎಸಿ ಅಲ್ಲದ ಬೋಗಿಗಳು ಮತ್ತು ಎಲ್ಲಾ ಎಸಿ ತರಗತಿಗಳಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆಯಂತೆ ಹೆಚ್ಚಳವಾಗಲಿದೆ. 5೦೦ ಕಿ.ಮೀ. ನಾನ್-ಎಸಿ ಪ್ರಯಾಣಕ್ಕೆ ಕೇವಲ1೦ ರೂ. ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಕಳೆದ ದಶಕದಲ್ಲಿ ರೈಲ್ವೆ ಜಾಲ ಮತ್ತು ಕಾರ್ಯಾಚರಣೆಗಳನ್ನು ಭಾರೀ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಹೆಚ್ಚಿಸಲಾಗಿದೆ. ರೈಲ್ವೆ ಕಾರ್ಯಾಚರಣೆಗಳಿಗೆ ಬೇಡಿಕೆ ಹೆಚ್ಚಾಗಿದ್ದು ಸುರಕ್ಷತಾ ಕ್ರಮ ಗಳನ್ನು ಬಲಪಡಿಸಲು ಸಿಬ್ಬಂದಿ ಸಂಖ್ಯೆ ಯನ್ನೂ ಹೆಚ್ಚಿಸಲಾಗಿದೆ. ಇದು ವೆಚ್ಚ ಗಳ ಹೆಚ್ಚಿಸಲು ಕಾರಣವಾಗಿದೆ. ನೌಕರರ ವೆಚ್ಚವು 1.15 ಲಕ್ಷ ಕೋಟಿ ರೂ.ಗೆ ಏರಿದ್ದು ಪಿಂಚಣಿಗಾಗಿಯೇ 6೦,೦೦೦ ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಹೀಗಾಗಿ 2024-25ನೇ ಸಾಲಿನ ಒಟ್ಟು ಕಾರ್ಯಾಚರಣೆ ವೆಚ್ಚ 2.63ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ರೇಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ವಿನಾಯಿತಿ?
ಸ್ಥಳೀಯ ರೈಲುಗಳ (ಉಪನಗರ ಸೇವೆಗಳು) ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಹೆಚ್ಚಳ ಇಲ್ಲ. ಸಾಮಾನ್ಯ ದರ್ಜೆಯಲ್ಲಿ 215 ಕಿ.ಮೀ.ವರೆಗಿನ ಪ್ರಯಾಣಕ್ಕೆ ಹಳೆಯ ದರವನ್ನೇ ಪಾವತಿಸಬೇಕಾಗುತ್ತದೆ. ಸರಕು ಸಾಗಣೆ ಹೆಚ್ಚಳದತ್ತ ಗಮನ ಹೆಚ್ಚುತ್ತಿರುವ ವೆಚ್ಚವನ್ನು ಸರಿದೂಗಿಸಲು ರೇಲ್ವೇ ಇಲಾಖೆ ಈಗ ಪ್ರಯಾಣಿಕರ ದರಗಳಲ್ಲಿ ಸೀಮಿತ ಹೊಂದಾಣಿಕೆ ಜೊತೆಗೆ ಸರಕು ಲೋಡಿಂಗ್ ಹೆಚ್ಚಿಸುವತ್ತಲೂ ಗಮನ ಹರಿಸುತ್ತಿದೆ. ಈ ತಂತ್ರವು ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸಿದೆ ಎಂದು ರೇಲ್ವೆ ಇಲಾಖಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


