ನವದೆಹಲಿ : ಆಘಾತಕಾರಿ ಘಟನೆಯೊಂದರಲ್ಲಿ ದೆಹಲಿಯ ಗಾಜಿಯಾಬಾದ್‌ನಲ್ಲಿ ಮಂಗಳವಾರ ೧೫ ವರ್ಷದ ಬಾಲಕನ ಮೇಲೆ ಆಕ್ರಮಣಕಾರಿ ಪಿಟ್ ಬುಲ್ ನಾಯಿ ಮಾರಣಾಂತಿಕ ದಾಳಿ ನಡೆಸಿದೆ. ದಾಳಿಯ ವಿಡಿಯೋವೊಂದು ಗಾಜಿಯಾಬಾದ್‌ನಿಂದ ಹೊರಬಿದ್ದಿದೆ.
ಈ ಸಿಸಿಟಿವಿ ವೀಡಿಯೋ ಗಾಜಿಯಾಬಾದ್‌ನ ವೈಶಾಲಿ ಪ್ರದೇಶದಲ್ಲಿ ಸೆರೆಯಾಗಿದೆ, ಅಲ್ಲಿ ಪಿಟ್‌ಬುಲ್ ನಾಯಿ ೧೫ ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ದಾಳಿಗೆ ಒಳಗಾದ ಬಾಲಕನನ್ನು ಅಲ್ತಾಫ್ ಎಂದು ಗುರುತಿಸಲಾಗಿದೆ. ಬಾಲಕ ತನ್ನ ಮನೆಯಿಂದ ಹೊರಬಂದ ತಕ್ಷಣ, ಪಿಟ್ ಬುಲ್ ಅವನ ಮೇಲೆ ಎರಗಿ ದಾಳಿ ಮಾಡಿದೆ.
ಗಾಜಿಯಾಬಾದ್‌ನಲ್ಲಿ ಅನುಮತಿಯಿಲ್ಲದೆ ಪಿಟ್‌ಬುಲ್ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ವರದಿಗಳ ಪ್ರಕಾರ, ಬಾಲಕನನ್ನು ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಆತನ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ಸಿಸಿಟಿವಿ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಸಿಸಿಟಿವಿ ವೀಡಿಯೋ ದಲ್ಲಿ ನಾಯಿ ಬಾಲಕನ ಮೇಲೆ ದಾಳಿ ಮಾಡುತ್ತಿದೆ.ಬಾಲಕ ಸಂಪೂರ್ಣವಾಗಿ ನೆಲದ ಮೇಲೆ ಬಿದ್ದಿದ್ದಾನೆ, ಪಿಟ್ ಬುಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಆದರೆ ಅದು ಸಾಧ್ಯವಾಗಲಿಲ್ಲ.
ಆ ನಂತರ ಹೇಗೋ ಧೈರ್ಯದಿಂದ ಎದ್ದು ಬಂದರೂ ನಾಯಿ ಮತ್ತೆ ಅವನ ಹಿಂದೆ ಓಡಲು ಆರಂಭಿಸಿ ಅವನ
ಕಾಲನ್ನು ಹಿಡಿದಿದೆ .ಆಗ ಬಾಲಕ ತನ್ನ ಕಾಲನ್ನು ಬಿಡಿಸಿಕೊಳ್ಳಲು ಹೆಣಗಾಡಿ ದ್ದಾನೆ .ಆಗ ಬಾಲ್ಕನಿಯಿಂದ ಯಾರೋ ಬಕೆಟ್‌ನಿಂದ ನೀರು ಸುರಿದು ನಾಯಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ, ಆದರೆ ನಾಯಿ ದಾಳಿ ಮುಂದುವರಿಸಿದೆ. ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದವರು ಅಲ್ತಾಫ್‌ನನ್ನು ನಾಯಿಯಿಂದ ಕಾಪಾಡಿ ಜನರ ಸಹಾಯದಿಂದ ನಾಯಿಯನ್ನು ಸ್ಥಳದಿಂದ ಓಡಿಸಲಾಗಿದೆ, ನಂತರ ಮಗುವಿನ ಜೀವವನ್ನು ಉಳಿಸಲಾಯಿತು.
ಮಹಾನಗರ ಪಾಲಿಕೆ ತಂಡ ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಹಿಡಿದಿದೆ. ಈ ಪಿಟ್‌ಬುಲ್ ನಾಯಿಯನ್ನು ಸಾಕಲು ಅದರ ಮಾಲೀಕರು ಅನುಮತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದಿಲ್ಲ. ಗಾಜಿಯಾಬಾದ್‌ನಲ್ಲಿ ಪಿಟ್‌ಬುಲ್ ನಾಯಿಯನ್ನು ಸಾಕಲು, ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಅನುಮತಿ ತೆಗೆದುಕೊಳ್ಳಬೇಕು . ಹಾಗೆ ಮಾಡದಿರುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.