ನವದೆಹಲಿ : ಇರಾನ್ ದಾಳಿಗೆ ತುತ್ತಾದ ಇಸ್ರೇಲ್ ಆಸ್ಪತ್ರೆಯಿಂದ ರೋಗಿಗಳನ್ನು ತುರ್ತು ಕಾರ್ಯಾಚರಣೆ ತಂಡಗಳು ಸ್ಥಳಾಂತರಿಸುವಲ್ಲಿ ನಿರತವಾಗಿರುವ ನಡುವೆಯೇ ಇಸ್ರೇಲಿ ಯುದ್ಧ ವಿಮಾನಗಳು ಇರಾನ್ ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಹೊಸ ದಾಳಿಯನ್ನು ಆರಂಭಿಸಿವೆ.
ರಕ್ಷಣಾ ಸಚಿವ ಇಸ್ರೇಲ್ ಕ್ಯಾರ್ಟ್ಜ್ ದಾಳಿಗೆ ಇರಾನಿನ ಸರ್ವೋಚ್ಛ ನಾಯಕ ಅಯತುಲ್ಲಾ ಅಲಿ ಕಮಿನಿ ಅವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಿದ್ದು, ಈ ಸಂಬAಧ ಇಸ್ರೇಲ್ ಸೇನಾ ಪಡೆಗಳಿಗೆ ಇರಾನ್ ಮೇಲಿನ ದಾಳಿಯ ಕುರಿತಂತೆ ಸ್ಪಷ್ಟ ಆದೇಶಗಳನ್ನು ನೀಡಲಾಗಿದೆ. ನಮ್ಮ ಉದ್ದೇಶಗಳು ಈಡೇರಬೇಕಾದರೆ ಇರಾನ್ ಸರ್ವೋಚ್ಛ ನಾಯಕನನ್ನು ಅಧಿಕಾರದಲ್ಲಿ ಉಳಿಯಲು ಬಿಡಬಾರದು ಎಂದು ಹೇಳಿದ್ದಾರೆ.
ಇಸ್ರೇಲ್-ಇರಾನ್ ಸಂಘರ್ಷ ಮುAದುವರೆದಿರುವ ಕುರಿತು ಹಾಗೂ ಇಸ್ರೇಲ್‌ನ ಸಾವಿರ ಹಾಸಿಗೆಗಳ ಆಸ್ಪತ್ರೆಯ ಮೇಲೆ ಇರಾನ್ ದಾಳಿ ನಡೆಸಿರುವ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಇಸ್ರೇಲ್ ಪರವಾಗಿ ಅಥವಾ ಸ್ವತಂತ್ರವಾಗಿ ಇರಾನ್‌ನ ಮೇಲೆ ದಾಳಿ ನಡೆಸುವ ಕುರಿತಂತೆ ಮುAದಿನ ಎರಡು ವಾರಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಇರಾನ್‌ನ ಫೋಡೊ ಯುರೇನಿಯಂ ಹಾಗೂ ಅಣುಬಾಂಬ್ ತಯಾರಿಕಾ ಘಟಕದ ಮೇಲೆ ನೇರ ದಾಳಿ ನಡೆಸಲು ಟ್ರಂಪ್ ಯೋಜನೆಗಳನ್ನು ರೂಪಿಸುತ್ತಿದ್ದಾರೆಂದು ಸುದ್ದಿಸಂಸ್ಥೆಗಳು ವರದಿ ಮಾಡಿರುವ ಬೆನ್ನಲ್ಲೆ ಪರ್ವತ ಪ್ರದೇಶದ ಆಳವಾದ ಜಾಗದಲ್ಲಿರುವ ಈ ಅಣುಬಾಂಬ್ ಸ್ಥಾವರವನ್ನು ಬಾಂಬ್‌ಗಳಿAದ ಸ್ಫೋಟಿಸಬಹುದೆಂದು ತಜ್ಞರು ಮಾಹಿತಿ ನೀಡಿದ್ದಾರೆ ಹೀಗಾಗಿ ಇರಾನ್ ಅಣುಸ್ಥಾವರ ಸ್ಫೋಟಿಸುವ ಕುರಿತು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ಇರಾನ್-ಇಸ್ರೇಲ್ ನಡುವೆ ಕಳೆದ ಒಂದುವಾರದಿAದ ಹೆಚ್ಚುತ್ತಿರುವ ಹಿಂಸಾಚಾರ ಕುರಿತಂತೆ ಅಮೆರಿಕ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಇರಾನ್ ಮೇಲಿನ ಯುದ್ಧ ಕುರಿತಂತೆ ಎರಡು ವಾರಗಳಲ್ಲಿ ಅಮೆರಿಕ ತನ್ನ ನಿರ್ಧಾರ ಘೋಷಿಸಲಿದೆ ಎಂದು ತಿಳಿಸಿದ್ದಾರೆ. ಇರಾನ್‌ನ ಯುರೇನಿಯಂ ಕೋಟೆ ಫೋರ್ಡೊ ಮೇಲೆ ದಾಳಿ ನಡೆಸುವುದನ್ನೇ ಟ್ರಂಪ್ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದಾರೆ. ಈ ನಡುವೆ ಇಸ್ರೇಲ್ -ಇರಾನ್ ಕ್ಲಸ್ಟರ್ ಬಾಂಬ್‌ಗಳನ್ನು ದಾಳಿಗಾಗಿ ಬಳಸಿದೆ. ಆದರೆ, ನಾವು ಇರಾನ್‌ನ ಪರಮಾಣು ತಾಣಗಳ ಮೇಲೆ ಮಾತ್ರ ದಾಳಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ.
ಕಳೆದ ರಾತ್ರಿ ಇರಾನ್ ಕ್ಲಸ್ಟರ್ ಯುದ್ಧ ಸಾಮಗ್ರಿಗಳನ್ನು ಹೊಂದಿದ ಕನಿಷ್ಠ ಒಂದು ಕ್ಷಿಪಣಿಯನ್ನು ಇಸ್ರೇಲ್ ಮೇಲೆ ಉಡಾಯಿಸಿದೆ ಎಂದು ಪ್ರಧಾನಿ ಬೆನ್ಜಮಿನ್ ಆರೋಪಿಸಿದ್ದಾರೆ. ಇಸ್ರೇಲಿ ಅಧಿಕಾರ ಪ್ರಕಾರ ನಾಗರಿಕ ಸಾವು-ನೋವು ಹೆಚ್ಚಾಗುತ್ತಿರುವ ಹಿನ್ನೆಲೆ ಕ್ಷಿಪಣಿ ದಾಳಿಯನ್ನು ಕೈಬಿಟ್ಟು ಸಣ್ಣ ಬಾಂಬ್‌ಗಳ ಮೂಲಕ ದಾಳಿ ನಡೆಸುವ ಉದ್ದೇಶ ಹೊಂದಲಾಗಿತ್ತು ಎಂದು ತಿಳಿಸಿರುವ ಅವರು, ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆ ಮುಂದುವರೆಸಲು ಇಸ್ರೇಲ್ ಅಮೆರಿಕದ ಅನುಮತಿಗಾಗಿ ಕಾಯುವುದಿಲ್ಲ ಎಂದು ಘೋಷಿಸಿದ್ದು, ಇರಾನ್‌ನ ಮೇಲೆ ದಾಳಿ ನಡೆಸುವ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಇರಾನ್-ಇಸ್ರೇಲ್ ಆಸ್ಪತ್ರೆ ಮೇಲೆ ತೀವ್ರ ದಾಳಿ ನಡೆಸಿರುವ ಕುರಿತಂತೆ ಮಾತನಾಡಿರುವ ಇಸ್ರೇಲ್ ರಕ್ಷಣಾ ಸಚಿವ ಕ್ಯಾರ್ಟ್ಜ್ ಇರಾನಿನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮಿನಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬAಧ ಇಸ್ರೇಲ್ ಮಿಲಿಟರಿಗೆ ಸೂಚನೆ ನೀಡಲಾಗಿದ್ದು, ಸೇನೆ ತನ್ನ ದಾಳಿ ಗುರಿಗಳನ್ನು ಯಶಸ್ವಿಯಾಗಿಸಲು ಕಮಿನಿ ಅಸ್ಥಿತ್ವದಲ್ಲಿರಬಾರದು ಎಂದು ಕ್ಯಾರ್ಟ್ಜ್ ಹೇಳಿರುವುದು ಎರಡೂ ದೇಶಗಳ ನಡುವಿನ ಸಂಘರ್ಷ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಇಸ್ರೇಲ್ ಆಸ್ಪತ್ರೆ ಮೇಲೆ ಇರಾನ್‌ನ ಪ್ರತೀಕಾರದ ದಾಳಿಗಳಲ್ಲಿ ಒಂದಾಗಿದ್ದು, ಇದು ಇರಾನ್‌ನ ನೈತಿಕ ಗೆಲುವು ಎಂದು ಜೀವಶಾಸ್ತç ಹಾಗೂ ನರವಿಜ್ಞಾನ ಪ್ರಾಧ್ಯಾಪಕ ಓರೆನ್‌ಶುಲ್ಡಿನರ್ ಹೇಳಿದ್ದಾರೆ.
ಪರಮಾಣು ತಾಣ ಧ್ವಂಸ, ಇಸ್ರೇಲ್ ಎಚ್ಚರಿಕೆ ದಕ್ಷಿಣ ಇಸ್ರೇಲ್‌ನ ಪ್ರಮುಖ ಆಸ್ಪತ್ರೆಗೆ ಇರಾನ್ ದಾಳಿ ನಡೆಸಿರುವ ಬೆನ್ನಲ್ಲೆ ಇರಾನ್‌ನಲ್ಲಿರುವ ಎಲ್ಲ ಪರಮಾಣು ತಾಣಗಳನ್ನು ಹೊಡೆದುರುಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆನ್ಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಇAದಿಗೆ ೮ನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆಯಿಂದ ಕ್ಷಿಪಣಿ ಮತ್ತು ಡ್ರೋಣ್ ದಾಳಿಗಳು ಮುಂದುವರೆದಿದೆ. ಇಸ್ರೇಲ್-ಇರಾನ್‌ನ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದರೆ ಇರಾನ್-ಇಸ್ರೇಲ್‌ನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋಣ್ ಮೂಲಕ ದಾಳಿ ನಡೆಸಿದೆ. ಇಸ್ರೇಲ್ ಆಸ್ಪತ್ರೆ ಮೇಲೆ ಇರಾನ್ ಕ್ಷಿಪಣಿ ದಾಳಿಯಿಂದಾಗಿ ಕನಿಷ್ಠ 240 ಜನ
ಗಾಯಗೊಂಡಿದ್ದು, ಮಾರಕ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ರಕ್ಷಣಾ ಸಚಿವ ಇರಾನ್ ಸವೋಚ್ಛ ನಾಯಕನಿಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.