ನವದೆಹಲಿ : ಬುಧವಾರ ಲೋಕಸಭೆಯ ಪ್ರಮುಖ ಭದ್ರತಾ ಲೋಪದ 5 ನೇ ಶಂಕಿತನನ್ನು ಗುರುಗ್ರಾಮ್ನಿಂದ ಬಂಧಿಸಲಾಗಿದ್ದು, 6 ನೇ ಆರೋಪಿ ಇನ್ನೂ ಪರಾರಿಯಾಗಿದ್ದಾನೆ. 5ನೇ ಶಂಕಿತ ವಿಶಾಲ್ ಶರ್ಮಾ ಯೋಜನೆ ರೂಪಿಸಿದ ನಾಲ್ವರಿಗೆ ಆಶ್ರಯ ನೀಡಿದ್ದಾನೆ. ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅಧಿವೇಶನದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯೊಳಗೆ ಧುಮುಕಿ ಹಳದಿ ಅನಿಲ ಎರಚಿದರು. ಸಂಸತ್ತಿನ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂತು.
ಲೋಕಸಭೆಯಲ್ಲಿ ಭದ್ರತಾಲೋಪ ಉಲ್ಲಂಘನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿತರಾದ ನಾಲ್ವರು ಹಾಗು ಆಶ್ರಯ ನೀಡಿದ ಇಬ್ಬರು ಆರೋಪಿಗಳು ಸೇರಿದಂತೆ 6 ಮಂದಿ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ -ಯುಎಪಿಎ ಜೊತೆಗೆ ಭಾರತೀಯ ದಂಡ ಸAಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ.
ಬಂಧಿತ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಬಂಧಿತ ನಾಲ್ವರಲ್ಲಿ ಲೋಕಸಭೆಯ ಸಭಾಂಗಣದಲ್ಲಿ ಹಳದಿ ಹೊಗೆ ಡಬ್ಬಿಗಳನ್ನು ಬಳಸಿದ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಡಬ್ಬಿ ಸಿಡಿಸಿದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಗುರುಗ್ರಾಮ್ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಇತರ ಆರೋಪಿಗಳು.ನಡೆಸುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಕೋಹಾಹಲ ನಡೆದು ಬೆಳಗ್ಗೆ 11.30ಕ್ಕೆ ಕಲಾಪ ಮುಂದೂಡಲಾಯಿತು. ಮತ್ತೆ ಸದನ ಸೇರಿದಾಗ ಗಲಾಟೆ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ ೨ಕ್ಕೆ ಲೋಕಸಭಾ ಆಧ್ಯಕ್ಷ ಓಂ ಬಿರ್ಲಾ ಮುಂದೂಡಿದ ಘಟನೆ ನಡೆಯಿತು’ ನಿನ್ನೆ ಶೂನ್ಯ ವೇಳೆಯಲ್ಲಿ ಇಬ್ಬರು ಆಗುಂತಕರು ಸಂದರ್ಶಕರ ಗ್ಯಾಲರಿಯಿAದ ಲೋಕಸಭೆಯ ಕೊಠಡಿಯನ್ನು ಪ್ರವೇಶಿಸಿದ್ದರಿಂದ ಗಮನಾರ್ಹ ಭದ್ರತಾ ಲೋಪ ಸಂಭವಿಸಿದೆ.
ಘಟನೆಗೆ ಸಂಬAಧಿಸಿದAತೆ ಬAಧನಕ್ಕೊಳಗಾದ ಐವರ ವಿರುದ್ಧ ದೆಹಲಿ ಪೊಲೀಸ್ ವಿಶೇಷ ಕೋಶವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.


