ನವದೆಹಲಿ : ಭಾರತದ ಸರ್ವೋಚ್ಚ ನ್ಯಾಯಾಲಯ ಸೋಮವಾರ ಅನಿರೀಕ್ಷಿತ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದ್ದು, 71 ವರ್ಷದ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ ಘಟನೆ ನಡೆದಿದೆ.
ಈ ವೇಳೆ ಸನಾತನಕ್ಕೆ ಆದ ಅವಮಾನವನ್ನು ಸಹಿಸುವುದಿಲ್ಲ ಎಂದು ಕೂಗಿದ ವಕೀಲರನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದು ಹೊರಗೆ ಕರೆದೊಯ್ದರು. ಸೋಮವಾರ ಬೆಳಗ್ಗಿನ ಅವಧಿಯಲ್ಲಿ ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.
ವಕೀಲರೊಬ್ಬರು ನ್ಯಾಯಪೀಠದ ಸಮೀಪಕ್ಕೆ ಬಂದು ಶೂ ಕಳಚಿ ನ್ಯಾಯಮೂರ್ತಿಗಳತ್ತ ಎಸೆಯಲು ಮುಂದಾದರು. ಆದರೆ, ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಈ ಘಟನೆ ತಪ್ಪಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ವಕೀಲನನ್ನು ತಡೆದು, ಕೋರ್ಟ್ನಿಂದ ಹೊರಕ್ಕೆ ಎಳೆದೊಯ್ದರು.
ಈ ವೇಳೆ ಆತ `ಸನಾತನ ಕಾ ಅಪಮಾನ್ ನಹೀ ಸಹೇಂಗೆ’ ಎಂದು ಹಿAದಿಯಲ್ಲಿ ಕೂಗುತ್ತಿರುವುದು ಕೇಳಿಬಂತೆAದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಿನ್ನಲೆ ಏನು?: ಇತ್ತೀಚೆಗೆ ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತ ಪ್ರಕರಣವೊಂದರಲ್ಲಿ ಸಿಜೆಐ ಬಿ.ಆರ್. ಗವಾಯಿ ನೀಡಿದ್ದ ಹೇಳಿಕೆಯೇ ಈ ಘಟನೆಗೆ ಪ್ರಚೋದನೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಆ ಪ್ರಕರಣವನ್ನು ವಜಾಗೊಳಿಸುವಾಗ, ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ, ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ, ಎಂದು ಅರ್ಜಿದಾರರಿಗೆ ಮೌಖಿಕವಾಗಿ ಹೇಳಿದ್ದರು.ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿವಾದದ ನಂತರ, ಸಿಜೆಐ ಗವಾಯಿ ಅವರು ಸ್ಪಷ್ಟನೆಯನ್ನು ನೀಡಿ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರು.