Saturday, March 14, 2026
Flats for sale
Homeದೇಶನವದೆಹಲಿ : ಸಂಸದರೊಂದಿಗೆ ಸಂಸತ್ತಿನ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಪ್ರಧಾನಿ ಮೋದಿ.

ನವದೆಹಲಿ : ಸಂಸದರೊಂದಿಗೆ ಸಂಸತ್ತಿನ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಪ್ರಧಾನಿ ಮೋದಿ.

ನವದೆಹಲಿ : 2024ರ ಲೋಕಸಭೆ ಚುನಾವಣೆಗೂ ಮುನ್ನ ಸಂಸತ್ತಿನ ಅಂತಿಮ ಅಧಿವೇಶನ ನಡೆಯುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರಿಗೆ ಉಪಾಹಾರ ಕೂಟ ಏರ್ಪಡಿಸಿದ್ದರು. ಸಂಸತ್ ಕ್ಯಾಂಟೀನ್​​ಗೆ ಅನಿರೀಕ್ಷಿತವಾಗಿ ಬಂದ ಪ್ರಧಾನಿಯವರನ್ನು ನೋಡಿ ಸಂಸದರು ಆಶ್ಚರ್ಯಚಕಿತರಾಗಿದ್ದಾರೆ.

“ನಾನು ಇಂದು ನಿಮ್ಮನ್ನು ಶಿಕ್ಷಿಸಲಿದ್ದೇನೆ, ನನ್ನೊಂದಿಗೆ ಬನ್ನಿ” ಎಂದು ಮೋದಿ ಸಂಸದರಲ್ಲಿ ಹುಸಿ ಕೋಪ ತೋರಿಸಿ ತಮಾಷೆಯ ಮಾತುಗಳಾಡಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಸಂಸದರಿಗೆ ಪ್ರಧಾನಿಯನ್ನು ಭೇಟಿಯಾಗಬೇಕೆಂಬ ಕರೆ ಬಂದಿತ್ತು. ಆಮೇಲೆ ಪ್ರಧಾನಿ ಸಂಸದರನ್ನುದ್ದೇಶಿಸಿ, “ಚಲಿಯೇ, ಆಪ್ಕೋ ಏಕ್ ಪನಿಶ್ಮೆಂಟ್ ದೇನಾ ಹೈ (ಬನ್ನಿ ಹೋಗೋಣ. ನಾನು ನಿಮಗೆ ಶಿಕ್ಷೆ ನೀಡಬೇಕು)” ಎಂದು ಹೇಳಿದರು. ಲಿಫ್ಟ್ ಬಾಗಿಲು ತೆರೆದಾಗ ಸಂಸದರು ಆಶ್ಚರ್ಯಚಕಿತರಾದರು. ಅವರನ್ನು ಕ್ಯಾಂಟೀನ್‌ಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.

ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಲೋಕಸಭೆ ರಚನೆಯಾಗಲಿದೆ.ರಾಜ್ಯಸಭೆಯ 68 ಸದಸ್ಯರು ಏಪ್ರಿಲ್ ನಲ್ಲಿ ನಿವೃತ್ತರಾಗಲಿದ್ದಾರೆ. ಅವರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಒಂಬತ್ತು ಕೇಂದ್ರ ಸಚಿವರು ಸೇರಿದ್ದಾರೆ.

ಪ್ರಧಾನಿ ಮೋಧಿಯವರು 45 ನಿಮಿಷಗಳ ಭೋಜನದ ಸಮಯದಲ್ಲಿ, ಸಂಸದರ ಜೊತೆ ಕುಶಲೋಪರಿ ವಿಚಾರಿಸಿದರು ಅವರ ಜೀವನಶೈಲಿ, ದಿನಚರಿ ಹಾಗೂ ಬೆಳಗ್ಗೆ ಎಷ್ಟು ಗಂಟೆಗೆ ಎದ್ದೇಳುತ್ತಾರೆ, ಇಷ್ಟೊಂದು ಬ್ಯುಸಿ ವೇಳಾಪಟ್ಟಿಯನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂದು ಸಂಸದರು ಕೇಳಿದ್ದಾರೆ ಇದಕ್ಕೆ ಅವರು ದಿನಚರಿಯ ಬಗ್ಗೆ ವಿವರಿಸಿದ್ದಾರೆ .ತಮ್ಮ ನೆಚ್ಚಿನ ಆಹಾರ ಖಿಚಡಿ ಎಂದು ಹೇಳಿದ ಮೋದಿ ನಾನು ಒಳ್ಳೆಯ ಆಹಾರವನ್ನು ಸೇವಿಸಲು ಬಯಸುತ್ತೇನೆ,ನಾನು ಯಾವಾಗಲೂ PM ಮೋಡ್‌ನಲ್ಲಿರುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಸವಿದ ಸಸ್ಯಾಹಾರಿ ಊಟದಲ್ಲಿ ಅಕ್ಕಿ, ದಾಲ್, ಖಿಚಡಿ, ತಿಲ್ ಕಾ ಲಡ್ಡೂ ಇತ್ತು.ಜೊತೆಯಲಿ ಟಿಡಿಪಿಯ ರಾಮ್ ಮೋಹನ್ ನಾಯ್ಡು, ಬಿಎಸ್‌ಪಿಯ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ನಮ್ಗ್ಯಾಲ್, ಕೇಂದ್ರ ಸಚಿವ ಎಲ್ ಮುರುಗುನ್, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಬಿಜೆಪಿಯ ಮಹಾರಾಷ್ಟ್ರ ಸಂಸದೆ ಹೀನಾ ಗವಿತ್ ಜತೆ ಮೋದಿ ಕ್ಯಾಂಟೀನ್ ನಲ್ಲಿ ಊಟ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular