Sunday, January 25, 2026
Flats for sale
Homeದೇಶನವದೆಹಲಿ : ಸಂವಿಧಾನವನ್ನು ನಿರ್ಮೂಲನ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ : ರಾಹುಲ್ಗಾಂಧಿ .

ನವದೆಹಲಿ : ಸಂವಿಧಾನವನ್ನು ನಿರ್ಮೂಲನ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ : ರಾಹುಲ್ಗಾಂಧಿ .

ನವದೆಹಲಿ : ಜರ್ಮನಿ ಪ್ರವಾಸದಲ್ಲಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾರತದ ಸಂವಿಧಾನವನ್ನು ನಿರ್ಮೂಲನ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬರ್ಲಿನ್‌ನಲ್ಲಿರುವ ಹರ್ಟೀ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ ಹಾಗೂ ಸಿಬಿಐ ಈಗ ಪ್ರತಿಪಕ್ಷಗಳನ್ನು ಬೆದರಿಸುವ ರಾಜಕೀಯ ಸಾಧನಗಳಾಗಿವೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ. ವಾಸ್ತವಿಕವಾಗಿ ಬಿಜೆಪಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೆ ಹೆಚ್ಚಿನ ರಾಜಕೀಯ ಪ್ರಕರಣಗಳು ಆಡಳಿತ ಪಕ್ಷವನ್ನು ಟೀಕಿಸುವವರನ್ನು ಗುರಿಯಾಗಿಸಿಕೊಂಡಿವೆ.

ಕಾAಗ್ರೆಸ್ ಬೆಂಬಲಿಸುವ ಉದ್ಯಮಿಗಳು ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸ್ಥಳೀಯ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸದೇ ಪರಸ್ಪರ ವಿರೋಧವಾಗಿ ಸ್ವತಂತ್ರ ಸ್ಪರ್ಧೆಗೆ ಇಳಿದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಯುದ್ಧತಂತ್ರದ ಸ್ಪರ್ಧೆಗಳು. ಆದರೆ ರಾಷ್ಟಿçÃಯ ಸ್ವಯಂಸೇವಕ ಸಂಘದ ಸಿದ್ಧಾಂತಕ್ಕೆ ವಿರೋಧವಾಗಿಯೇ ಮೈತ್ರಿಕೂಟವು ಒಗ್ಗಟ್ಟಾಗಿದೆ ಎಂದು ಹೇಳಿದರು.

ಬಿಜೆಪಿ ತಿರುಗೇಟು: ಇನ್ನು ರಾಹುಲ್ ಗಾಂಧಿ ಅವರ ಬರ್ಲಿನ್ ಭಾಷಣವನ್ನು ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆ ಮತ್ತು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ಎಕ್ಸ್ನಲ್ಲಿ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ. ದೇಶದ ಪ್ರಗತಿ ವಿರೋಧಿಸುತ್ತದೆ. ಚುನಾವಣಾ ಆಯೋಗದ ವಿರುದ್ಧ ಅವರು ಮಾಡಿದ ಆರೋಪಗಳು ನಿರಾಧಾರ ಎಂಬದು ಈಗ ಸಾಬೀತಾಗಿದೆ ಎಂದು ಟೀಕಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular