Friday, March 13, 2026
Flats for sale
Homeದೇಶನವದೆಹಲಿ : ಸಂಕ್ರಾಂತಿಯ ಮುನ್ನ ಇಂಡಿಯಾ ಮೈತ್ರಿಕೂಟದಲ್ಲಿ ಲೋಕಸಭೆಯ ಸೀಟು ಹಂಚಲು ನಿರ್ಧಾರ.

ನವದೆಹಲಿ : ಸಂಕ್ರಾಂತಿಯ ಮುನ್ನ ಇಂಡಿಯಾ ಮೈತ್ರಿಕೂಟದಲ್ಲಿ ಲೋಕಸಭೆಯ ಸೀಟು ಹಂಚಲು ನಿರ್ಧಾರ.

ನವದೆಹಲಿ : ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಲು ಮುಂದಾಗಿರುವ ವಿರೋಧ ಪಕ್ಷ “ ಇಂಡಿಯಾ ಮೈತ್ರಿಕೂಟ” ಸಂಕ್ರಾಂತಿಗೆ ಮುನ್ನವೇ ಲೋಕಸಭೆಯ ಸೀಟು ಹಂಚಿಕೆ ಅAತಿಮ ಗೊಳಿಸಲು ನಿರ್ಧರಿಸಿದೆ.

ಜನವರಿ 14 ರಂದು ಪ್ರಾರAಭವಾಗಲಿರುವ ರಾಹುಲ್ ಗಾಂಧಿ ಅವರ “ಭಾರತ್ ಜೋಡೋ ನ್ಯಾಯ್ ಯಾತ್ರೆ”ಗೂ ಮುನ್ನ ಸೀಟು ಹಂಚಿಕೆ ಒಪ್ಪಂದಗಳನ್ನು ಅAತಿಮಗೊಳಿಸಲು ಪಕ್ಷ ಮುಂದಾಗಿದೆ ಎAದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಅವರ ಯಾತ್ರೆ ಮಣಿಪುರದಿಂದ ಮುಂಬೈಗೆ ಪಾದಯಾತ್ರೆ ಪ್ರಾರಂಭವಾಗುತ್ತಿದ್ದAತೆ ಪ್ರಚಾರ ಮುಂದುವರಿಸುವ ಆಲೋಚನೆ ಇದೆ.ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ನಿರೀಕ್ಷೆಯಿದೆ.

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಬೇಗ ಆಗಬೇಕು ಎನ್ನುವ ಇಂಡಿಯಾ ಮೈತ್ರಿಕೂಟದ ನಾಯಕರ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್, ಸೀಟು ಹಂಚಿಕೆ ಮಾತುಕತೆಯನ್ನು ಶೀಘ್ರದಲ್ಲಿ ಅಂತಿಮಗೊಳಸಲು ತಂತ್ರ ರೂಪಿಸಿವೆ.

ದೇಶದಾದ್ಯಂತ ಸೀಟು ಹಂಚಿಕೆ ಮತ್ತು ಹೊಂದಾಣಿಕೆಗಾಗಿ ಪಕ್ಷದ ನಾಯಕರ ಜೊತೆ ಮಾತುಕತೆ ಆರಂಭಿಸಲಾಗಿದೆ ಎಂದು ಹಿರಿಯ ನಾಯಕ ಮುಕುಲ್ ವಾಸ್ನಿಕ್ ಅವರು ವಿವಿಧ ವಿರೋಧ ಪಕ್ಷದ ಮುಖ್ಯಸ್ಥರಿಗೆ ತಿಳಿಸಿದ್ದು ಶೀಘ್ರವೇ ಸೀಟು ಹಂಚಿಕೆ ಮಾಡಲು ಮುಂದಾಗಿರುವುದಾಗಿ ಹೇಳಿದ್ದಾರೆ.

ಸೀಟು ಹಂಚಿಕೆ ಸುಸೂತ್ರ: ಸೀಟು ಹಂಚಿಕೆ ವಿಷಯವಾಗಿ ಅಗತ್ಯವಿದ್ದರೆ, ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಲು ಕಾಂಗ್ರೆಸ್ ಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರ ರಾಜ್ಯಗಳಿಗೆ ಹೋಗಿ ಮಾತುಕತೆ ನಡೆಸಿ ಸುಸೂತ್ರವಾಗಿ ಸೀಟು ಹಂಚಿಕೆ ಪರಿಹಾರ ಕಂಡುಕೊಳ್ಳಲು ಚಿಂತನೆ
ನಡೆದಿದೆ.

“ಇಡೀ ಭಾರತದಲ್ಲಿ ಇಂಡಿಯಾ ಕೂಟ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹೋರಾಡುತ್ತದೆ, ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಪಾಠ ಕಲಿಸಬಲ್ಲದು.ಅದು ಇಡೀ ದೇಶಕ್ಕೆ ಗೆಲುವಿನ ಹಾದಿಯನ್ನು ತೋರಿಸಬಲ್ಲದು, ಬೇರೆ ಯಾವುದೇ ಪಕ್ಷವಲ್ಲ. ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಹಾರಾಷ್ಟç, ಮತ್ತು ಶಿವಸೇನೆ ಇಲ್ಲಿ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ ರಾಷ್ಟಿçÃಯ ಪಕ್ಷವಾಗಿದೆ. ಯಾವಾಗಲೂ ಹೇಳುತ್ತಿದ್ದೆವು, ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ ಯಾವಾಗಲೂ 23 ಸ್ಥಾನಗಳಲ್ಲಿ ಹೋರಾಡುತ್ತಿದೆ ಮತ್ತು ಅದು ನಡೆಯಲಿದೆ. ದೃಢವಾಗಿದೆ” ಎಂದು ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಮಹಾರಾಷ್ಟçವು 48 ಸ್ಥಾನಗಳನ್ನು ಹೊಂದಿದೆ ಮತ್ತು ಕೆಲವನ್ನು ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷ ರಾಷ್ಟಿçÃಯವಾದಿ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಬಣ ಹಕ್ಕು ಸಾಧಿಸಲಿದೆ. ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿದ್ದರೂ, 2019 ರ ಚುನಾವಣೆಯಲ್ಲಿ 288 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಗೆದ್ದಿರುವ ಸ್ಥಾನಗಳ ಸಂಖ್ಯೆ ಕೇವಲ 44 ಆಗಿರುವುದರಿಂದ ಅದರ ಮಾತು ಸೀಮಿತವಾಗಿದೆ.

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ನಾಯಕರು ದೆಹಲಿ ಮತ್ತು ಪಂಜಾಬ್‌ನ ೨೧ ಸ್ಥಾನಗಳಲ್ಲಿ ಯಾವುದನ್ನೂ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಸೂಚಿಸಿದ್ದಾರೆ.

ಪಂಜಾಬ್‌ನ 14 ಸ್ಥಾನಗಳಲ್ಲಿ ಎಎಪಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೂ, ಅದು ಗುಂಪುಗಾರಿಕೆ ಮತ್ತು ಪಕ್ಷ-ಹೋರಾಟದಿಂದ ಅವುಗಳನ್ನು ಕಳೆದುಕೊಂಡಿತು. ದೆಹಲಿಯಲ್ಲಿ,ಎಲ್ಲಾ 8 ಸ್ಥಾನಗಳನ್ನು ಬಿಜೆಪಿ ಪಾಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular