ನವದೆಹಲಿ : ಶಿಫ್ಟ್ ಮುಗಿದ ನಂತರವೂ ಸಂಸ್ಥೆಯಿಂದ ತಡರಾತ್ರಿ ವೇಳೆ ಬರುವ ಕರೆಗಳನ್ನು ತಡೆಗಟ್ಟುವ ಉದ್ದೇಶದಿಂದ 2025 ರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆಯನ್ನು ಈಗ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಲೋಕಸಭೆಯಲ್ಲಿ ಮಂಡಿಸಿದ್ದಾರೆ.
ಉದ್ಯೋಗಿಗಳ ಸಂಪರ್ಕ ಕಡಿತಗೊಳಿಸುವ ಹಕ್ಕು ಈಗಾಗಲೇ ಫ್ರಾನ್ಸ್, ಪೋರ್ಚುಗಲ್ ಹಾಗೂ ಆಸ್ಟ್ರೇಲಿಯಾದಂತಹ ಮುಂದುವರಿದ ದೇಶಗಳಲ್ಲಿ ಜಾರಿಯಲ್ಲಿವೆ. ಇದೀಗ ಸುಳೆಯವರು ಈ ಮಸೂದೆಯನ್ನು ಮಂಡಿಸಿರುವುದರಿಂದ ದೇಶದಲ್ಲಿಯೂ ಅಂತಹ ಕಾನೂನು ಜಾರಿಗೆ ಬರುವ ಸಂಭವ ಇದೆ. ಕೆಲಸದ ಸಮಯವನ್ನು ಮಿತಿಗೊಳಿಸಲು, ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪಡೆಯಲು ಮತ್ತು ಸದೃಢವಾದ ಮಾನಸಿಕಆರೋಗ್ಯ ಸುರಕ್ಷತಾ ಕ್ರಮಗಳನ್ನು ಪರಿಚಯಿಸಲು ಈ ಮಸೂದೆ ಪ್ರಯತ್ನಿಸುತ್ತದೆ. ಕಾಂಗ್ರೆಸ್ ಸಂಸದ ಶಶಿತರೂರ್ ಕೂಡ ಮಸೂದೆಗೆ ಬೆಂಬಲ ಘೋಷಿಸಿದ್ದಾರೆ.
ಮಸೂದೆಯಲ್ಲೇನಿದೆ?
ಹೊಸ ಮಸೂದೆಯಂತೆ ಕೆಲಸದ ಸಮಯ ಮುಗಿದ ನಂತರ ಬಂದ ಕರೆಗಳು ಹಾಗೂ ಇಮೇಲ್‌ಗಳನ್ನು ನೌಕರರು ಯಾವುದೇ ಶಿಸ್ತು ಕ್ರಮದ ಭಯವಿಲ್ಲದೆ, ನಿರ್ಲಕ್ಷಿಸುವ ಹಕ್ಕು ಹೊಂದಿದ್ದಾರೆ. ಕೇರಳ ಮೊದಲ ರಾಜ್ಯ ಏತನ್ಮಧ್ಯೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಕಚೇರಿ ಸಮಯದ ನಂತರ ಕೆಲಸಕ್ಕೆ ಸಂಬAಧಿಸಿದ ಇಮೇಲ್‌ಗಳು, ಕರೆಗಳು, ವೀಡಿಯೊ ಸಭೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸುವ ಕಾನೂನುಬದ್ಧ ಹಕ್ಕನ್ನು ನೀಡುವ ಮಸೂದೆ(೨೦೨೫)ಪರಿಚಯಿಸಿದ ಮೊದಲ ರಾಜ್ಯವಾಗಿದೆ.


