ನವದೆಹಲಿ : ವಿಯೆಟ್ನಾಂನಲ್ಲಿ ಕೆಟ್ಟ ಹವಾಮಾನದ ಪರಿಸ್ಥಿತಿಯಿಂದ ಪ್ರವಾಸಿ ದೋಣಿ ಮುಳುಗಿದ ಪರಿಣಾಮ ಕನಿಷ್ಠ 37 ಜನರು ಸಾವನ್ನಪ್ಪಿದ್ದು
ಹಲವು ಮಂದಿ ಕಾಣೆಯಾಗಿರುವ ಘಟನೆ ನಡೆದಿದೆ. ದೇಶದ ಉತ್ತರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಹಾ ಲಾಂಗ್ ಕೊಲ್ಲಿಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಪ್ರಯಾಣಿಕರು ರಾಜಧಾನಿ ಹನೋಯ್‌ನಿಂದ ವಾಪಸ್ ಬರುತ್ತಿದ್ದ ವಿಯೆಟ್ನಾಂ ಕುಟುAಬಗಳಾಗಿವೆ ಎಂದು ವರದಿಯಾಗಿವೆ.
ವಂಡರ್ ಸೀಸ್ ಎಂಬ ಹೆಸರಿನ ಹಡಗು ಹಠಾತ್ ಬಿರುಗಾಳಿಗೆ ಸಿಕ್ಕ ಹಿನ್ನೆಲೆಯಲ್ಲಿ 53 ಜನರಿದ್ದ ಬೋಟ್ ಮುಳುಗಿದ ಪರಿಣಾಮ ಈ ಘಟನೆ ನಡೆದಿದೆ ಎಂದು ವಿಯೆಟ್ನಾಂ ಗಡಿ ಕಾವಲು ಪಡೆ ಮತ್ತು ನೌಕಾಪಡೆಯ ಹೇಳಿಕೆ ತಿಳಿಸಿದೆ. “ಧಾರಾಕಾರ ಮಳೆ, ಗುಡುಗು ಮತ್ತು ಮಿಂಚಿನೊAದಿಗೆ ಕಾಲ್ಬೆರಳುಗಳಷ್ಟು ದೊಡ್ಡದಾದ ಆಲಿಕಲ್ಲುಗಳು” ಬೀಳುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ತಲೆಕೆಳಗಾದ ದೋಣಿಯಲ್ಲಿ 10 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕ, ದೋಣಿ ನೀರಿನಲ್ಲಿ ಮಗುಚಿ ಬೀಳುತ್ತಿದ್ದಂತೆ ನೀರಿನಲ್ಲಿ ಈಜಿದೆ. ಸಹಾಯಕ್ಕಾಗಿ ಕೂಗಿದೆ. ಕೊನೆಗೆ ರಕ್ಷಣಾ ಸಿಬ್ಬಂಧಿ ತಮ್ಮನ್ನು ರಕ್ಷಿಸಿದ್ದಾರೆ ಎಂದು ಹೇಳಿದ್ದಾರೆ ಸುಮಾರು 37 ಮಂದಿ ಸಾವನ್ನಪ್ಪಿದ್ದು ಅದರಲ್ಲಿ ಕನಿಷ್ಠ ಎಂಟು ಶವಗಳನ್ನು ಹೊರ ತಗೆಯಲಾಗಿದೆ. ಇನ್ನಿಳಿದರಿಗಾಗಿ ರಕ್ಷಣಾ ಕಾರ್ಯ ನಡೆದಿದೆ.ಇನ್ನೂ ಕಾಣೆಯಾಗಿರುವ ಹಲವರನ್ನು ಹುಡುಕಲು ರಕ್ಷಣಾ ಪ್ರಯತ್ನಗಳು ರಾತ್ರಿಯವರೆಗೂ ಮುಂದುವರಿಯಲಿವೆ. ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ಮೃತರ ಕುಟುಂಬಗಳಿಗೆ ಸAತಾಪ ಸೂಚಿಸಿದ್ದು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಕ್ವಾಂಗ್ ನಿನ್ಹ್ ಪ್ರಾಂತ್ಯದ ಹಾ ಲಾಂಗ್ ಕೊಲ್ಲಿ ನೂರಾರು ಸಣ್ಣ ದ್ವೀಪಗಳಿಂದ ಕೂಡಿದ್ದು, 20009 ರಿಂದ ಪ್ರತಿ ವರ್ಷ 4 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ.