ನವದೆಹಲಿ : ವಿಮಾನಗಳಲ್ಲಿ ಪವರ್ ಬ್ಯಾಂಕ್ ಮತ್ತು ಲಿಥಿಯಂ ಬ್ಯಾಟರಿ ಚಾಲಿತ ಸಾಧನಗಳನ್ನು ಬಳಸುವುದನ್ನು ಈಗ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿಷೇಧಿಸಿದೆ.
ಲಿಥಿಯಂ ಬ್ಯಾಟರಿಗಳು ಅತಿಯಾಗಿ ಬಿಸಿಯಾಗಿ ಬೆಂಕಿ ಹತ್ತಿಕೊಳ್ಳುವಂತಹ ಹಲವಾರು ಘಟನೆಗಳು ನಡೆದಿರುವ ಹಿನ್ನೆಲೆ ಯಲ್ಲಿ ಡಿಜಿಸಿಎ ಕಳೆದ ನವೆಂಬರ್‌ಲ್ಲಿ ಅಪಾಯಕಾರಿ ಸರಕುಗಳ ಕುರಿತು ಸುತ್ತೋಲೆ ಹೊರಡಿಸಿದೆ. ಅದರಂತೆ ಪವರ್ ಬ್ಯಾಂಕ್ ಮತ್ತು ಬಿಡಿ ಬ್ಯಾಟರಿಗಳನ್ನು ಕೈಚೀಲದಲ್ಲಿ ತರಬಹುದೇ ವಿನ: ಮೊಬೈಲ್ ಅಥವಾ ಅನ್ಯ ವಿದ್ಯುನ್ಮಾನ ಸಾಧನಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಸುವಂತಿಲ್ಲ ಎಂದು ಅದು ಕಟ್ಟಪ್ಪಣೆ ಹೊರಡಿಸಿದೆ.
ಪವರ್ ಬ್ಯಾಂಕುಗಳು, ಪೋರ್ಟಬಲ್ ಚಾರ್ಜರ್‌ಗಳು ಹಾಗೂ ಲಿಥಿಯಂ ಬ್ಯಾಟರಿ ರೀತಿಯ ಸಾಧನಗಳು ವಿಮಾನ ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಬಹುದು. ಆದ್ದರಿಂದ ಅAತಹ ಸಾಧನಗಳಿಂದ ವಿಮಾನಕ್ಕೆ ಅಪಾಯ ಉಂಟಾಗಬ ಹುದೆAದು ಸಚಿವಾಲಯ ವಿವರಿಸಿದೆ. ಇಂಥ ಬ್ಯಾಟರಿಗಳನ್ನು ವಿಮಾನದ ಸ್ಫೋವೇಜ್ ಬಿನ್ ಅಥವಾ ಕ್ಯಾರಿ ಆನ್ ಬ್ಯಾಗ್‌ಗಳಲ್ಲಿ ಇರಿಸಿದ ಪವರ್ ಬ್ಯಾಂಕುಗಳಲ್ಲಿ ಬೆಂಕಿ ಹೊತ್ತಿಕೊಂಡಾಗ ಅದು ವಿಮಾನದ ನಿರ್ವಾಹಕರು ಅಥವಾ ಪ್ರಯಾಣಿಕರ ಗಮನಕ್ಕೆ ಬಾರದಿರಬಹುದು. ಇದರಿಂದ ವಿಮಾನದ ಸುರಕ್ಷತೆಗೆ ತೊಡಕಾಗಬಹುದು ಎಂದು ತಿಳಿಸಿವೆ.
ಜಗತ್ತಿನಾದ್ಯಂತ ವಿಮಾನಗಳಲ್ಲಿ ಪವರ್ ಬ್ಯಾಂಕ್‌ನಿAದ ಅವಘಡ ಸಂಭವಿಸುತ್ತಿರುವುದಕ್ಕೆ ಅದನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗಿದೆ.ಕ್ಯಾರಿ ಆನ್ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್‌ಗೆ ಬೆಂಕಿ ಹೊತ್ತಿದ್ದು ಗಮನಕ್ಕೆ ಬಾರದಿರಬಹುದು ಆದರೆ ವಿಮಾನಗಳಲ್ಲಿ ಪ್ರಯಾಣಿಕರಿಗೆ ಪವರ್ ಬ್ಯಾಂಕ್ ಕುರಿತ ನಿಷೇಧದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಮಾರ್ಗಸೂಚಿ ತಿಳಿಸಿದೆ. ಏರ್‌ಪೋರ್ಟ್ ನಿರ್ವಾಹಕರೂ ಕೂಡ ಪವರ್ ಬ್ಯಾಂಕ್ ನಿಷೇಧ ಕುರಿತು ಜಾಗೃತಿ ಬೋರ್ಡ್ ಹಾಕಬೇಕು ಎಂದು ಡಿಜಿಸಿಎ ಸೂಚಿಸಿದೆ.


