Tuesday, February 4, 2025
Flats for sale
Homeಗ್ಯಾಜೆಟ್ / ಟೆಕ್ನವದೆಹಲಿ : ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್,ಇನ್ನೂ ಮುಂದೆ ವಾಟ್ಸಾಪ್ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು..!

ನವದೆಹಲಿ : ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್,ಇನ್ನೂ ಮುಂದೆ ವಾಟ್ಸಾಪ್ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದು..!

ನವದೆಹಲಿ : ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ ಇದೆ. ಇನ್ಮುಂದೆ ವಾಟ್ಸಾಪ್​ ಯುಪಿಐ (UPI) ಮತ್ತಷ್ಟು ಸರಳವಾಗಲಿದೆ. ಹೌದು, ಎನ್​ಪಿಸಿಐ (NPCI) ಆನ್​ಬೋರ್ಡಿಂಗ್​ ಲಿಮಿಟ್​ ಅನ್ನು ತೆಗೆದು ಹಾಕಿದೆ. ಈ ಮೂಲಕ ಭಾರತದಲ್ಲಿ ತನ್ನ ಎಲ್ಲಾ ಬಳಕೆದಾರರಿಗೆ ಯುಪಿಐ ಸೇವೆಗಳನ್ನು ನೀಡಲು ಪ್ಲಾಟ್‌ಫಾರ್ಮ್‌ಗೆ ಅವಕಾಶ ಮಾಡಿಕೊಟ್ಟಿದೆ. ‘ವಾಟ್ಸಾಪ್ ಪೇ’ (WhatsApp Pay) ಈಗ ಯುಪಿಐ ಸೇವೆಗಳನ್ನು ತನ್ನ ಸಂಪೂರ್ಣ ಬಳಕೆದಾರರಿಗೆ ವಿಸ್ತರಿಸಬಹುದು. ಇದು ದೇಶದಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಎನ್​ಪಿಸಿಐ ಈ ಹಿಂದೆ, ತನ್ನ ಯುಪಿಐ ಬಳಕೆದಾರರ ಸಂಖ್ಯೆ ಹಂತ ಹಂತವಾಗಿ ವಿಸ್ತರಿಸಲು ‘ವಾಟ್ಸಾಪ್ ಪೇ’ಗೆ ಅನುಮತಿ ನೀಡಿತ್ತು. ಇದೀಗ, ವಾಟ್ಸಾಪ್​ ಪೇ ಆನ್‌ಬೋರ್ಡಿಂಗ್ ಮಿತಿಯನ್ನು ಎನ್​ಪಿಸಿಐ ತೆಗೆದುಹಾಕಿದೆ. ಸದ್ಯ, 5 ಕೋಟಿಗೂ ಹೆಚ್ಚು ಭಾರತೀಯ ವಾಟ್ಸಾಪ್​ ಬಳಕೆದಾರರು ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗಲಿದೆ. ಈ ಹಿಂದೆ ವಾಟ್ಸಾಪ್‌ನ ಸೀಮಿತ ಬಳಕೆದಾರರು ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದರು. ಇದೀಗ, ಭಾರತದ ಡಿಜಿಟಲ್ ಪೇ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ.

ನಗದು ರಹಿತ ಪಾವತಿ ಸಮಸ್ಯೆಗೆ ಪರಿಹಾರ ಪ್ರಾರಂಭದಲ್ಲಿ ಈ ಸೌಲಭ್ಯವು ಸೀಮಿತ ಬಳಕೆದಾರರಿಗೆ ಲಭ್ಯವಾಗಿತ್ತು. ಆದರೆ, ಪ್ರಸ್ತುತ ಪ್ರತಿ ವಾಟ್ಸಾಪ್​ ಬಳಕೆದಾರರು ಸುಲಭವಾಗಿ ಯುಪಿಐ ಪಾವತಿಗಳನ್ನು ಸುಲಭವಾಗಿ ಮಾಡಬಹುದು. ಸದ್ಯ ವಾಟ್ಸಾಪ್​ ತನ್ನ 5 ಕೋಟಿಗೂ ಹೆಚ್ಚು ಭಾರತೀಯ ಬಳಕೆದಾರರಿಗೆ ಸಂಪೂರ್ಣ ಯುಪಿಐ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ. ಈ ಹಿಂದೆ ಎನ್‌ಪಿಸಿಐ ವಾಟ್ಸಾಪ್ ಪೇ ಆನ್‌ಬೋರ್ಡಿಂಗ್ ಮಿತಿಯನ್ನು ನಿಷೇಧಿಸಿತ್ತು. ಇದರಿಂದಾಗಿ ಯುಪಿಐ ಸಿಸ್ಟಂನ ಭದ್ರತೆ ಬಲವಾಗಿ ಉಳಿಯುತ್ತದೆ. ನಗದು ರಹಿತ ಪಾವತಿಗಳಲ್ಲಿ ಯಾವುದೇ ಸಮಸ್ಯೆಯನ್ನು ನಿವಾರಿಸುತ್ತದೆ. ಹಂತ ಹಂತವಾಗಿ ವಾಟ್ಸಾಪ್​ ತನ್ನ ಸೇವೆಗಳನ್ನು ಸುಧಾರಿಸಿತು. ಇದೀಗ, ಎನ್‌ಪಿಸಿಐ ಈ ಲಿಮಿಟ್ ತೆಗೆದುಹಾಕಿದೆ. ಈ ಮೂಲಕ ವಾಟ್ಸಾಪ್‌ ಪೇ (WhatsApp Pay) ಸದ್ಯ ತನ್ನ ಎಲ್ಲಾ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವ ಅವಕಾಶವನ್ನು ಪಡೆದಿದೆ.

ವಾಟ್ಸಾಪ್​ ಪೇ ಪ್ರಾರಂಭ ಮೊದಲೇ ಹೇಳಿದಂತೆ ಪ್ರಾರಂಭದಲ್ಲಿ ವಾಟ್ಸಾಪ್​ ಪೇ ಕೆಲವೇ ಬಳಕೆದಾರರನ್ನು ತಲುಪಲು ಅನುಮತಿಸಲಾಗಿತ್ತು. ಈ ವ್ಯವಸ್ಥೆಯ ಭದ್ರತೆ ಮತ್ತು ತಾಂತ್ರಿಕ ಸಾಮರ್ಥ್ಯ ಸರಿಯಾಗಿ ಪರೀಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಳಿಕ, ಎನ್‌ಪಿಸಿಐ ಹಂತ ಹಂತವಾಗಿ ವಾಟ್ಸಾಪ್‌ ಬಳಕೆದಾರರ ಲಿಮಿಟ್‌ ಅನ್ನು ಹೆಚ್ಚಿಸಿತು. ಇದೀಗ, ವಾಟ್ಸಾಪ್‌ನ ಪ್ರತಿಯೊಬ್ಬ ಬಳಕೆದಾರರು ವಾಟ್ಸಾಪ್‌ ಪೇ ಯುಪಿಐನ (WhatsApp Pay UPI) ಸಂಪೂರ್ಣ ಸೌಲಭ್ಯ ಪಡೆಯಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular