ನವದೆಹಲಿ : ರೈಲ್ವೇ ಸುಮಾರು ೭೫ಲಕ್ಷ ಕೃತಕ ಬುದ್ದಿಮತ್ತೆ -ಎಐ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ರೈಲುಗಳಲ್ಲಿ ಅಳವಡಿಸಲಿದೆ ಎಂದು ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ. ಲೊಕೊ ಪೈಲಟ್‌ಗೆ ಎಚ್ಚರಿಕೆ ನೀಡಲು ಕೋಚ್‌ನ ಹೊರತಾಗಿ, ಲೊಕೊಮೊಟಿವ್ ಎಂಜಿನ್‌ನಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುವುದು. ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.ಪದೇ ಪದೇ
ಸಂಭವಿಸುತ್ತಿರುವ ರೈಲು ಅಪಘಾತಗಳ ನಡುವೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ರೈಲ್ವೆ ಹಳಿಗಳ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ. ಭಾರತೀಯ ರೈಲ್ವೇ ಈಗ ಸುಮಾರು ೭೫ ಲಕ್ಷ ಎಐ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ರೈಲುಗಳಲ್ಲಿ ಅಳವಡಿಸಲಿದೆ. ಇದರಿಂದ ಲೊಕೊ ಪೈಲಟ್‌ಗೆ ಎಚ್ಚರಿಕೆ ನೀಡಲು ಕೋಚ್‌ನ ಹೊರತಾಗಿ, ಲೊಕೊಮೊಟಿವ್ಎಂ ಜಿನ್‌ನಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಲೋಕೋಮೋಟಿವೇಗಳಲ್ಲಿಯೂ ಅಳವಡಿಸಲು ಎಐ ಸುಸಜ್ಜಿತ ಸಿಸಿಟಿವಿ ಕ್ಯಾಮೆರಾಗಳ ಶ್ರೇಣಿಯನ್ನು ಅಂತಿಮಗೊಳಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.ಭಾರತೀಯ ರೈಲ್ವೇಯಲ್ಲಿ ಭದ್ರತೆ ಹೆಚ್ಚಿಸಲು ಸುಮಾರು 15,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೋಚ್‌ಗಳು ಮತ್ತು ಇಂಜಿನ್‌ಗಳಲ್ಲಿ 75 ಲಕ್ಷ ಎಐ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಯೋಜಿಸಿದೆ ಈ ಕ್ಯಾಮೆರಾಗಳು ಟ್ರ್ಯಾಕ್ ಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಪತ್ತೆ ಮಾಡುತ್ತದೆ ಮತ್ತು ತುರ್ತು ಬ್ರೇಕ್‌ಗಳನ್ನು ಅನ್ವಯಿಸಲು ಚಾಲಕರನ್ನು ಎಚ್ಚರಿಸುತ್ತದೆ ಎಂದು ತಿಳಿಸಿದ್ದಾರೆ.
ರೈಲ್ವೇ ಸಚಿವರ ಪ್ರಕಾರ, ಭಾರತೀಯ ರೈಲ್ವೇಯು 40,೦೦೦ ಕೋಚ್‌ಗಳು, 14,೦೦೦ ಲೊಕೊಮೊಟಿವ್‌ಗಳು ಮತ್ತು 6,೦೦೦ ಇಎಂಯು ಗಳಲ್ಲಿ ಐಐ ಚಾಲಿತ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಸಜ್ಜುಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.