ನವದೆಹಲಿ ; ರಾಮ ಮಂದಿರ ಮುಟ್ಟಿ ನೀವು ಒಬ್ಬರಾದ್ರು ಉಳಿದ್ರೆ ಕೇಳಿ ಎಂಬ ಮಾತು ಕಳೆದ ಹಲವು ದಿನಗಳಿಂದ ವೈರಲ್ ಆಗಿದೆ. ಅಯೋಧ್ಯೆಯ ರಾಮಮಂದಿರ ಮತ್ತು ಗುಜರಾತ್‌ನ ವಿಶ್ವಪ್ರಸಿದ್ಧ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎನ್ನಲಾದ ಶಂಕಿತ ಉಗ್ರನೊಬ್ಬ ನನ್ನು ಹರ್ಯಾಣ ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರಾ ಚರಣೆಯಲ್ಲಿ ಹರ್ಯಾಣದ ಫರೀದಾ ಬಾದ್‌ನಲ್ಲಿ ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ (19) ಎಂದು ಗುರುತಿಸ ಲಾಗಿದೆ. ಈತ ವಿಶ್ವದ ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್ ನಂಟುಹೊಂದಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಸೂಚನೆಯಂತೆ ದಾಳಿಗೆ ಸಂಚು ರೂಪಿಸಲಾಗಿದ್ದ ಎಂದು ಹೇಳಲಾಗಿದೆ. ಬಂಧನದ ಬೆನ್ನಲ್ಲೇ ರೆಹಮಾನ್ ನೀಡಿದಸುಳಿವಿನ ಮೇರೆಗೆ ಆತನ ಮನೆಯಿಂದ ಎರಡು ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ.
ಈತನು ಈ ರೀತಿ ಸಂಚು ಹೂಡಿದ್ದಾನೆಂದು ಮಾಹಿತಿ ದೊರೆತಿದೆ. ಅಯೋಧ್ಯೆ ರಾಮಮಂದಿರ, ಗುಜರಾತ್ ಸೋಮನಾಥ ದೇಗುಲ ಬಗ್ಗೆ ಈತ ಮಾಹಿತಿ ಸಂಗ್ರಹಿಸಿದ್ದು ಐಸಿಸ್ ನಂಟು ಹಾಗೂ ಪಾಕ್ ಐಎಸ್‌ಐ ಸೂಚನೆ ಮೇರೆಗೆ ಕಾರಾಚರಣೆ ನಡೆಸುತ್ತಿದ್ದನೆಂದು ತಿಳಿದಿದೆ.ಹರ್ಯಾಣದ ಫರೀದಾಬಾದ್‌ನಲ್ಲಿ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಬಂಧಿಸಿದ್ದು ಫೈಜಾಬಾದ್‌ನ ಆತನ ಮನೆಯ ಮೇಲೆ ಪೊಲೀಸ್ ದಾಳಿ ನಡೆಸಿ ಗ್ರೆನೇಡ್ ಸೇರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದಿದ್ದಾರೆ.ವಿಚಾರಣೆ ವೇಳೆ ಆತ ಸಾಕಷ್ಟು ಉಗ್ರ ಸಂಘಟನೆ ಗಳೊಂದಿಗೆ ನಂಟು ಹೊಂದಿರುವ ವಿವರ ಬಿಚ್ಚಟ್ಟಿದ್ದು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದನ್ನು ಪೋಲಿಸರು ತಡೆಹಿಡಿದಿದ್ದಾರೆ.