Saturday, November 23, 2024
Flats for sale
Homeದೇಶನವದೆಹಲಿ : ರಾಮಮಂದಿರ ಪ್ರತಿಷ್ಠಾಪನೆ ಬೆನ್ನಲ್ಲೇ ಭಾರತದ ಮೇಲೆ ದಾಳಿಗೆ ಐಸಿಸ್ ಉಗ್ರರು ಸಂಚು,ಹಿಂದೂಗಳ ಸಾಮೂಹಿಕ...

ನವದೆಹಲಿ : ರಾಮಮಂದಿರ ಪ್ರತಿಷ್ಠಾಪನೆ ಬೆನ್ನಲ್ಲೇ ಭಾರತದ ಮೇಲೆ ದಾಳಿಗೆ ಐಸಿಸ್ ಉಗ್ರರು ಸಂಚು,ಹಿಂದೂಗಳ ಸಾಮೂಹಿಕ ಹತ್ಯೆಗೆ ಬೆದರಿಕೆ.

ನವದೆಹಲಿ : ಐಸಿಸ್ ಉಗ್ರರು ಮತ್ತೊಮ್ಮೆ ಬಾಲಬಿಚ್ಚಿದ್ದು ಭಾರತದ ಮೇಲೆ ಆಕ್ರಮಣ ಮಾಡುತ್ತಾರೆಂದು ಬೆದರಿಕೆ ಹಾಕಿದ್ದಾರೆ. ಅಯೋಧ್ಯೆ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಬೆನ್ನಲ್ಲೇ ಭಾರತದ ಮೇಲೆ ದಾಳಿ ನಡೆಸಿ, ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುವುದು ಎಂದು ಐಸಿಸ್ ಉಗ್ರರು ಬೆದರಿಕೆ ಹಾಕಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ದೇಶದಲ್ಲೂ ಉಗ್ರರಿಗೆ ಮಾಹಿತಿ ನೀಡುವ ದೇಶದ್ರೋಹಿಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ . ಐಸಿಸ್ ಭಯೋತ್ಪಾದಕ ಸಂಘಟನೆಯ ವಾಯ್ಸ್ ಆಫ್ ಖುರಾಸನ್ ಮ್ಯಾಗಜಿನ್‌ನಲ್ಲಿ ಭಾರತದ ಮೇಲೆ ದಾಳಿ ಕುರಿತು ಬೆದರಿಕೆ ಹಾಕಲಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಲಾಗಿದೆ.ವಾಯ್ಸ್ ಆಫ್ ಖುರಾಸನ್ ಮ್ಯಾಗಜಿನ್‌ನ ಇ-ವರ್ಷನ್‌ಅನ್ನು ಸಾಮಾಜಿಕ ಜಾಲತಾಣಗಳು ಹಾಗೂ ಡಾರ್ಕ್ವೆಬ್ ವೇದಿಕೆಗಳ ಮೂಲಕ ಐಸಿಸ್ ಉಗ್ರ ಸಂಘಟನೆ ಹಂಚಿಕೊಂಡಿದೆ . “ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ, ಅಕ್ರಮವಾಗಿ ಮಂದಿರ ನಿರ್ಮಿಸಲಾಗಿದೆ.

2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಿದೆ. ಇದೆಲ್ಲದಕ್ಕೂ ಸೇಡು ತೀರಿಸಿಕೊಳ್ಳಲು ಭಾರತದ ಮೇಲೆ ಮೇಲೆ ದಾಳಿ ಮಾಡಲಾಗುತ್ತದೆ. ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತದೆ” ಎಂದು ಮ್ಯಾಗಜಿನ್ ಮೂಲಕ ಬೆದರಿಕೆ ಹಾಕಲಾಗಿದೆ.

ನಾವು ಭಾರತ ಸರ್ಕಾರಕ್ಕೆ ನೇರವಾಗಿ ಹೇಳುತ್ತಿದ್ದೇವೆ. ನಾವು ಖಡ್ಗಗಳನ್ನು ಹಿಡಿದು ಭಾರತಕ್ಕೆ ಬರುತ್ತೇವೆ. ಖಂಡಿತವಾಗಿಯೂ, ಗೋದ್ರಾ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಕಾಶ್ಮೀರ, ಗುಜರಾತ್, ಮುಜಫ್ಫರ್‌ನಗರದ ಘಟನೆಗಳಿಗೂ ಸೇಡು ತೀರಿಸಿಕೊಳ್ಳುತ್ತೇವೆ. ಪ್ರವಾದಿ ಮೊಹಮ್ಮದ್ ಅವರ ಆಶಯಗಳನ್ನು ಈಡೇರಿಸಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿ ವಿದ್ಯಾರ್ಥಿಯೊಬ್ಬ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿಯಾಗಿ
ಹೇಳಿಕೆ ನೀಡಿದ ಪ್ರಕರಣಕ್ಕೂ ಸೇಡು ತೀರಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಐಸಿಸ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊAದಿರುವ ಹಾಗೂ ದೇಶದ ಹಲವೆಡೆ ದಾಳಿಗೆ ಸಂಚು ರೂಪಿಸಿರುವ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ದಾಳಿ ಮುಂದುವರಿಸಿ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದರು. ಇದರೊAದಿಗೆ ಐಸಿಸ್ ಜತೆ ಸಂಪರ್ಕ ಹೊAದಿರುವ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿವಿಯ ೧೦ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular