ನವದೆಹಲಿ : ಪಾಕಿಸ್ತಾನ – ಭಾರತ ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದು ಆಪರೇಷನ್ ಸಿಂಧೂರ ಸಮರದ ಮಧ್ಯೆ ಪಾಕಿಸ್ತಾನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಸದಲ್ಲಿದೆ. ಜಮ್ಮು ವಿಮಾನ ನಿಲ್ದಾಣದ ಬಳಿ ಪಾಕ್ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಯತ್ನಿಸಿದೆ. ಪಾಕಿಸ್ತಾನದ 8 ಮಿಸೈಲ್‌ಗಳನ್ನ ಭಾರತ ಹೊಡೆದುರುಳಿಸಿದೆ. ಇನ್ನು ಪಾಕಿಸ್ತಾನದ ಫೈಟರ್ ಜಟ್ ಎಫ್16 ಹಾಗೂ AWAC ವಿಮಾನವನ್ನು ಹಾಗೂ ಪಾಕಿಸ್ತಾನದ ಏರ್ ವಾರ್ನಿಂಗ್ ಸಿಸ್ಟಮ್ ಅನ್ನೂ ಭಾರತೀಯ ಸೇನಾಪಡೆ ಉಡೀಸ್ ಮಾಡಿದೆ ಎಂದು ವರದಿಯಾಗಿದೆ.
ಜಮ್ಮು ವಾಯುನೆಲೆ, ಜೈಸಲ್ಮೇರ್, ಪಠಾಣ್‌ಕೋಟ್, ಅಖ್ನೂರ್, ರಾಜೌರಿ,ಪೂಂಚ್, ತಂಗಹಾರ್, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದೆ. ಆದ್ರೆ, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಅಲ್ಲದೇ ಪಾಕಿಸ್ತಾನದ ಫೈಟರ್ ಜೆಟ್ ಎಫ್-16 ಅನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿದೆ.
ಈ ಮದ್ಯೆ 3 ರಾಜ್ಯಗಳಿಗೆ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದು ಪಾಕಿಸ್ತಾನದ ಪ್ರಯತ್ನ ವಿಫಲವಾಗಿದೆ,ಪ್ರಮುಖ ನಗರಗಳಲ್ಲಿ ವಿದ್ಯುತ್ ಸೇವೆಯನ್ನು ಕಡಿತ ಗೊಳಿಸಿದ್ದು ,ಐಪಿಎಲ್ ಮ್ಯಾಚ್ ಅನ್ನೂ ಕೂಡ ನಿಲ್ಲಿಸಲಾಗಿದೆ ಎಂದು ತಿಳಿದಿದೆ. ಹಿಮತ್, ಆರ್‌ಎಸ್ ಪುರ, ಜಮ್ಮುವಿನ 3 ಕಡೆಯಲ್ಲಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನ ಮಾಡಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ದಾಳಿ ಕೂಡ ಮುಂದುವರಿದಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್,ಲಾಹೋರ್ ,ಸಿಯಲ್ ಕೋಟ್ ಮೇಲೆ ಭಾರತ ದಾಳಿ ನಡೆಸಿದ್ದು ಪಾಕಿಸ್ತಾನದ ವಿಮಗಳಿಗೆ ದಿಕ್ಕಿಲದಂತೆ ಮಾಡಿದೆ . ಪಾಕಿಸ್ತಾನದ ಎಲ್ಲ ಡ್ರೋನ್ ಹಾಗೂ ಮಿಸೈಲ್ ಹಾನಿಗೊಳಿಸಿದ್ದು ಭಾರತ ಪಾಕಿಸ್ತಾನಕ್ಕೆ ನುಗ್ಗಿ 9 ಉಗ್ರರ ತಾಣಗಳನ್ನು ಉಡೀಸ್ ಮಾಡಿದೆ . ಭಾರತ ಜೊತೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಪಾಕಿಸ್ತಾನದ ಪೈಲಟ್ ಪ್ಯಾರಾಚೂಟ್ ನಲ್ಲಿ ಬಂದಿಳಿಯುವಾಗ ಸೆರೆ ಹಿಡಿದಿದ್ದಾರೆ.
ಗುಜರಾತ್ ನ ಕಚ್ ಬಳಿಯೂ ಬ್ಲಾಕ್ ಔಟ್ ಆಗಿದ್ದು ಸಂಪೂರ್ಣ ಕತ್ತಲು ತುಂಬಿದೆ. ಜಮ್ಮು ಕಾಶ್ಮೀರದಲ್ಲಿ ಆತಂಕದಿಂದ ಬಾಂಬ್ ಸದ್ದಿಗೆ ಜನ ಮನೆಯಿಂದ ಓಡಿಹೋಗಿದ್ದಾರೆ.ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆಯ ಜೊತೆ ಉಗ್ರರು ಸೇರಿದ್ದು ಸುಯಿಸೈಡ್ ಬಾಂಬರ್ ಗಳು ಭಾರತ ದೊಳಗೆ ನುಗ್ಗಿದ್ದಾರೆಂದು ತಿಳಿದಿದೆ.ಈ ನಡುವೆ ಭಾರತ ಪಾಕಿಸ್ತಾನದ ಉಗ್ರ ಸಯ್ಯದ್ ಹಫೀಜ್ ನ ಕೋಟೆಯನ್ನು ದ್ವoಸ ಗೊಳಿಸಿದ್ದು ಸೈನ್ಯ ಉಗ್ರರಿಗೆ ಪ್ರತ್ಯುತ್ತರ ನೀಡಿದೆ.
ಈ ಬಿಗುವಿನ ವಾತಾವರಣದಲ್ಲಿ ಜಮ್ಮುವಿನಾದ್ಯಂತ ವಾಯು ದಾಳಿ ಸೈರನ್ ಮೊಳಗಿದೆ.ಈ ನಡುವೆ ಕೇಂದ್ರ ರಕ್ಷಣಾ ಸಚಿವ ರಕ್ಷಣಾ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದಿದ್ದು ಜೊತೆಗೆ ನರೇಂದ್ರ ಮೋದಿ ನಿವಾಸಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರವರು ಭೇಟಿನೀಡಿದ್ದಾರೆ.