Wednesday, November 5, 2025
Flats for sale
Homeದೇಶನವದೆಹಲಿ : ಮೋದಿ ಗ್ಯಾರಂಟಿಗೆ ಟಕ್ಕರ್‌ ಹೊಡೆಯಲು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ,ಏನೆಲ್ಲಾ ಇದೆ ಇಲ್ಲಿದೆ ನೋಡಿ!

ನವದೆಹಲಿ : ಮೋದಿ ಗ್ಯಾರಂಟಿಗೆ ಟಕ್ಕರ್‌ ಹೊಡೆಯಲು ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ,ಏನೆಲ್ಲಾ ಇದೆ ಇಲ್ಲಿದೆ ನೋಡಿ!

ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವನ್ನು ಮಣಿಯಲು ಇಷ್ಟು ವರ್ಷಗಳಿಂದ ಆಳಿದ ಕಾಂಗ್ರೆಸ್ ಸರಕಾರ ಇನ್ನಿಲದ ಕಸರತ್ತನ್ನು ಮಾಡುತ್ತಿದೆ.ಇದೀಗ ಇಂಡಿಯಾ ಮೈತ್ರಿಯ ಪ್ರಮುಖ ಪಕ್ಷ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಇದಕ್ಕೆ ನ್ಯಾಯ ಪತ್ರ ಎಂದು ಹೆಸರನ್ನಿಟ್ಟಿದೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ದೊಡ್ಡ ಭರವಸೆಗಳನ್ನು ನೀಡಿದೆ. ವಿವಿಧ ಬಗೆಯ ಗ್ಯಾರಂಟಿಗಳನ್ನು ನೀಡಲಾಗಿದೆ.

1.ದೇಶದಲ್ಲಿ ಎಲ್ಲಾ ರಾಜ್ಯದಲ್ಲೂ ಜಾತಿಜನಗಣತಿ ಮಾಡಲಾಗುವುದ

2.ಮೀಸಲಾತಿಯಲ್ಲಿ ಶೇ.50 ರಷ್ಟು ಮಿತಿ ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿ

3.ಪ್ರಣಾಳಿಕೆಯಲ್ಲಿ ಜಾತಿಗಣತಿ ಮಾಡುವುದಾಗಿ ಗ್ಯಾರಂಟಿ ನೀಡಿದ ಕಾಂಗ್ರೆಸ್​

4.ಯುವ ನ್ಯಾಯ್ ಅಡಿಯಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸೋ ಭರವಸೆ

5.ನಾರಿ ನ್ಯಾಯ್ ಅಡಿಯಲ್ಲಿ, ಪ್ರತಿ ವರ್ಷ ಒಂದು ಲಕ್ಷ ನಗದು ನೆರವು

6.ಎಂಎಸ್​​​ಪಿ ಒಳಗೊಂಡಂತೆ ಕಿಸಾನ್ ನ್ಯಾಯ್ ಜಾರಿಗೊಳಿಸೋ ಭರವಸೆ

7.ಶ್ರಮಿಕ್ ನ್ಯಾಯ್​ಯಡಿ ₹400 ದೈನಂದಿನ ಕೂಲಿ ಖಾತರಿಪಡಿಸುವ ಭರವಸೆ

8.ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳ ಭರ್ತಿ

9.ಖಾಲಿ ಇರುವ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ

10.ಆರೋಗ್ಯ ರಕ್ಷಣೆಗಾಗಿ ರಾಜಸ್ಥಾನ ಮಾದರಿ ₹25 ಲಕ್ಷ ನಗದು ರಹಿತ ವಿಮೆ

11.ಬಡ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ ರೂ. ನೀಡಲು ಮಹಾಲಕ್ಷ್ಮಿ ಯೋಜನೆ

12.ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕ ರದ್ದು

13.ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಗಳಿಗೆ ಬಡ್ಡಿ ಸೇರಿದಂತೆ ಬಾಕಿ ಮೊತ್ತ ವಜಾ

14.ಸಾಲ ಕೊಟ್ಟ ಬ್ಯಾಂಕ್‌ಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು

15.MLA, MP ಪಕ್ಷ ಬಿಟ್ಟರೆ ಸ್ವಯಂಚಾಲಿತ ಅನರ್ಹಗೊಳಿಸುವಂತ ಕಾನೂನು

15.ಇವಿಎಂ ದಕ್ಷತೆ ಮತ್ತು ಬ್ಯಾಲೆಟ್ ಪೇಪರ್‌ನ ಪಾರದರ್ಶಕತೆ ಸಂಯೋಜನೆ

16.ಪಾರದರ್ಶಕತೆ ಸಂಯೋಜಿಸಲು ಚುನಾವಣಾ ಕಾನೂನುಗಳನ್ನು ತಿದ್ದುಪಡಿ

ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ, ಸಚಿನ್ ಪೈಲಟ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular