ನವದೆಹಲಿ : ಮೋದಿ ಮತ್ತೊಮ್ಮೆ ಎಂಬ ಘೋಷ ವಾಕ್ಯದ ಮೂಲಕ ಮುಂಬರುವ ಲೋಕಸಭೆ ಚುನಾವಣೆ ಗೆ 195 ಅಭ್ಯರ್ಥಿಗಳ ಹೆಸರುಗಳೊಂದಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆಮಾಡಿದೆ .
ಬಿಜೆಪಿ ವರಿಷ್ಠರು 195 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದ್ದು ಮೊದಲ ಪಟ್ಟಿಯಲ್ಲಿ 34 ಹಾಲಿ ಸಚಿವರು, ಇಬ್ಬರು ಮಾಜಿ ಸಿಎಂ ಮತ್ತು ಓರ್ವ ಮುಸ್ಲಿಂ ಅಭ್ಯರ್ಥಿಗೂ ಬಿಜೆಪಿ ಟಿಕೆಟ್ ಸಿಕ್ಕಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಾತಿನಂತೆಯೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬಂದಿವೆ. ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಧಿಶಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಅಸ್ಸಾಂ ಮಾಜಿ ಸಿಎಂ ಸರ್ಬಾನಂದ್ ಸೊನೊವಾಲಾ ಅವರು ದಿಬ್ರುಗಢ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಈ ಬಾರಿ 33 ಹಾಲಿ ಸಂಸದರನ್ನು ಹೊಸ ಮುಖಗಳೊಂದಿಗೆ ಬದಲಾಯಿಸಿದೆ. ಪಟ್ಟಿಯಲ್ಲಿ ಬಿಜೆಪಿ ಅಸ್ಸಾಂನ 11 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವರಲ್ಲಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜದೀಪ್ ರಾಯ್ ಅವರು ಗೆದ್ದ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಪರಿಮಲ್ ಸುಕ್ಲಬೈಧ್ಯ ಅವರನ್ನು ಪಕ್ಷವು ಕಣಕ್ಕಿಳಿಸಿದೆ.
ಕೇರಳ ಜಿಲ್ಲೆಯ ಮಲ್ಲಪುರಂ ಲೋಕಸಭಾ ಕ್ಷೇತ್ರದಿಂದ ಅಬ್ದುಲ್ ಸಲಾಮ್ ಎಂಬವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿಯನ್ನ ಘೋಷಿಸಿಲ್ಲ
ಜಾತಿವಾರು ಟಿಕೆಟ್ ಹಂಚಿಕೆ ಹೀಗಿದೆ
ಓಬಿಸಿ ಅಭ್ಯರ್ಥಿಗಳು: 57 – ಹೊಸ ಅಭ್ಯರ್ಥಿಗಳು: 47 – ಕೇಂದ್ರ ಸಚಿವರು: 34 – ಮಹಿಳಾ ಅಭ್ಯರ್ಥಿಗಳು: 28
ಎಸ್ಸಿ ಅಭ್ಯರ್ಥಿಗಳು: 27 – ಎಸ್ಟಿ ಅಭ್ಯರ್ಥಿಗಳು: 18
ಬಿಜೆಪಿ ಟಿಕೆಟ್ ಪಡೆದ ಪ್ರಮುಖರು
ನರೇಂದ್ರ ಮೋದಿ: ವಾರಣಾಸಿ, ಉತ್ತರಪ್ರದೇಶ
ಅಮಿತ್ ಶಾ: ಗಾಂಧಿನಗರ, ಗುಜರಾತ್
ರಾಜನಾಥ ಸಿಂಗ್: ಲಖನೌ, ಉತ್ತರಪ್ರದೇಶ
ನಿತಿನ್ ಗಡ್ಕರಿ: ನಾಗ್ಪುರ, ಮಹಾರಾಷ್ಟ್ರ
ಸ್ಮೃತಿ ಇರಾನಿ: ಅಮೇಥಿ, ಉತ್ತರಪ್ರದೇಶ
ಓಂ ಬಿರ್ಲಾ: ಕೋಟಾ, ರಾಜಸ್ಥಾನ
ಬಾನ್ಸುರಿ ಸ್ವರಾಜ್: ನ್ಯೂ ಡೆಲ್ಲಿ. ದಿ.ಸುಷ್ಮಾ ಸ್ವರಾಜ್ ಪುತ್ರಿ
ಶಿವರಾಜ್ ಸಿಂಗ್ ಚೌಹಾಣ್: ವಿಧಿಶಾ, ಮಧ್ಯಪ್ರದೇಶ
ಜ್ಯೋತಿರಾಧಿತ್ಯ ಸಿಂಧಿಯಾ: ಗುನಾ, ಮಧ್ಯಪ್ರದೇಶ
ಕಿರಣ್ ರಿಜಿಜು: ಅರುಣಾಚಲ ವೆಸ್ಟ್
ಮನ್ಸೂಖ್ ಮಾಂಡವೀಯ: ಪೋರ್ ಬಂದರ್
ರಾಜೀವ್ ಚಂದ್ರಶೇಖರ್: ತಿರುವನಂತಪುರಂ, ಕೇರಳ
ಗಜೇಂದ್ರ ಸಿಂಗ್ ಶೇಖಾವತ್: ಜೋಧಪುರ್, ರಾಜಸ್ಥಾನ
ಹೇಮಾ ಮಾಲಿನಿ: ಮಥುರಾ, ಉತ್ತರಪ್ರದೇಶ
ಲಲ್ಲು ಸಿಂಗ್: ಅಯೋಧ್ಯೆ, ಉತ್ತರಪ್ರದೇಶ
ಸುವೇಂದು ಅಧಿಕಾರಿ: ಕಾಂತಿ, ಪಶ್ಚಿಮ ಬಂಗಾಳ
ಸುರೇಶ್ ಗೋಪಿ: ತ್ರಿಶೂರ್, ಕೇರಳ
ಮನೋಜ್ ತಿವಾರಿ: ದೆಹಲಿ ಈಶಾನ್ಯ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ, ಹೊಸಬರಿಗೆ ಬಿಜೆಪಿ ಮಣೆ ಹಾಕಿದ್ದು ಹಾಲಿ ಸಂಸದರು ಟಿಕೆಟ್ ಘೋಷಣೆಗೂ ಮೊದಲೇ ಕಾರಣ ಕೊಟ್ಟು ಟಿಕೆಟ್ ಬೇಡ ಅಂತಿದ್ದಾರೆ ಎಂದು ತಿಳಿದುಬಂದಿದೆ.


