ನವದೆಹಲಿ : ಭದ್ರತಾ ದೃಷ್ಟಿಯಿಂದ ಟೀಮ್ ಇಂಡಿಯಾ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರೆಳುತ್ತಿಲ್ಲ. ತಟಸ್ಥ ಸ್ಥಳ (ದುಬೈ) ಆಡುವುದಾಗಿ ಬಿಸಿಸಿಐ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಸಿಸಿಐ ಪತ್ರ ಬರೆದು ಹೇಳಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಬದಲಾವಣೆ ಮಾಡಲು ಬೇರೆ ಕಾರಣಗಳು ಇಲ್ಲ. ನಾವು ಈ ಬಗ್ಗೆ ಈಗಾಗಲೇ ಪತ್ರವನ್ನು ಬರೆದಿದ್ದೇವೆ ಮತ್ತು ನಮ್ಮ ತಂಡದ ಎಲ್ಲಾ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಕೇಳಿಕೊAಡಿದ್ದೇವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಳೆದ ವರ್ಷ ಏಷ್ಯಾಕಪ್‌ಗೂ ಮುನ್ನ ಪಾಕ್‌ನಿಂದ ಸಾಕಷ್ಟು ಒತ್ತಡ ಎದುರಿಸಿದ ಹೊರತಾಗಿಯೂ ಪಂದ್ಯ ಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿತ್ತು. ಕಳೆದ ತಿಂಗಳು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪಾಕ್‌ನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಮುಹಮದ್ ಇಷ್ಕ್ ದಾರ್ ಮಾತುಕತೆ ನಡೆಸಿದ್ದಾಗ ಸಾಕಷ್ಟು ಸಕಾರಾತ್ಮಕ ನಿರೀಕ್ಷಗೆಳು ಮೂಡಿದ್ದವು. ಆದರೆ ಉಭಯ ದೇಶಗಳ ನಡುವಿನ ಕ್ರಿಕೆಟ್ ದೂರವೇ ಉಳಿದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ಅನ್ನ ಸಾಕಷ್ಟು ಮನವೊಲಿಸಿತು. ಜತೆಗೆ ಆಯ್ಕೆಯನ್ನು ನೀಡಿತ್ತು. ಇದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 16 ಮಂದಿಸೇರಿ ಇಬ್ಬರು ಸೈನಿಕರನ್ನ ಬಲಿತೆಗೆದುಕೊಂಡಾಗ
ಕೇಂದ್ರ ಸಚಿವ ಜೈಶಂಕರ್ ತಮ್ಮ ನಿಲುವನ್ನು ಬದಲಾಯಿಸಿದರು ಎಂದು ತಿಳಿದುಬಂದಿದೆ