Monday, March 16, 2026
Flats for sale
Homeದೇಶನವದೆಹಲಿ : ಮಹಿಳೆ ತನ್ನ ಗಂಡನ ಆಸ್ತಿಯಲ್ಲ: ಅವಳು ತನ್ನ ಇಚ್ಛೆಯಂತೆ ಬದುಕುವ ಸಂಪೂರ್ಣ ಹಕ್ಕು...

ನವದೆಹಲಿ : ಮಹಿಳೆ ತನ್ನ ಗಂಡನ ಆಸ್ತಿಯಲ್ಲ: ಅವಳು ತನ್ನ ಇಚ್ಛೆಯಂತೆ ಬದುಕುವ ಸಂಪೂರ್ಣ ಹಕ್ಕು ಹೊಂದಿದ್ದಾಳೆ: ದೆಹಲಿ ಹೈಕೋರ್ಟ್..!

ನವದೆಹಲಿ : ದೆಹಲಿ ಹೈಕೋರ್ಟ್ ಇತ್ತೀಚೆಗೆ ಒಂದು ಪ್ರಮುಖ ತೀರ್ಪಿನಲ್ಲಿ, ಯಾವುದೇ ಮಹಿಳೆ ತನ್ನ ಗಂಡನ ಆಸ್ತಿಯಲ್ಲ ಮತ್ತು ಅವಳು ತನ್ನ ಇಚ್ಛೆಯಂತೆ ಬದುಕುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾಳೆ ಎಂದು ಹೇಳಿದೆ.

ಪತ್ನಿಯ ಮೇಲೆ ವ್ಯಭಿಚಾರ (ಅನೈತಿಕ ಸಂಬAಧ) ಆರೋಪ ಹೊರಿಸಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಹೇಳಿಕೆ ನೀಡಿದೆ. ಇದರೊಂದಿಗೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ದೆಹಲಿ ಹೈಕೋರ್ಟ್ನ ಐತಿಹಾಸಿಕ ತೀರ್ಪು ಮಹಿಳೆಯರನ್ನು ಗಂಡನ ಆಸ್ತಿ ಎಂದು ಪರಿಗಣಿಸುವ ಪ್ರಾಚೀನ ಚಿಂತನೆಗೆ ತೀವ್ರ ಹೊಡೆತ ನೀಡಿದೆ. ವಿವಾಹೇತರ ಸಂಬಂಧದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸುವಾಗ, ನ್ಯಾಯಾಲಯವು ಭಾರತೀಯ ಸಮಾಜದ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಲ್ಲದೆ, ಮಹಾಭಾರತದ ದ್ರೌಪದಿ ಪ್ರಸಂಗವನ್ನು ಉಲ್ಲೇಖಿಸಿದೆ.

ಒಬ್ಬ ವ್ಯಕ್ತಿ ತನ್ನ ಹೆಂಡತಿಗೆ ವಿವಾಹೇತರ ಸಂಬಂಧ ಇದೆ ಎಂದು ಆರೋಪಿಸಿ ತನ್ನ ಹೆಂಡತಿಯ ಪ್ರೇಮಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 (ವ್ಯಭಿಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ತನ್ನ ಪತ್ನಿ ಮತ್ತು ಆರೋಪಿ ಲಕ್ನೋದ ಹೋಟೆಲ್‌ನಲ್ಲಿ ಗಂಡಹೆAಡತಿಯಾಗಿ ತಂಗಿದ್ದರು ಮತ್ತು ತನ್ನ ಅನುಮತಿಯಿಲ್ಲದೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಪತಿ ಹೇಳಿಕೊಂಡಿದ್ದಾನೆ.ಈ ಕುರಿತು ಜಗಳವಾದಾಗ, ಹೆಂಡತಿ ನೇರವಾಗಿ ಹೇಳಿದಳು, ನಿಮಗೆ ಏನಾದರೂ ಸಮಸ್ಯೆ ಇದ್ದರೆ ಸಂಬಂಧ ವನ್ನು ಕೊನೆಗೊಳಿಸಿ ಎಂದು ಹೇಳಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

Most Popular