ನವದೆಹಲಿ : ಮಹಾರಾಷ್ಟç ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ ಕೆಲವೊಂದು ಸಂಸ್ಥೆಗಳು ಮಹಾಯುತಿಗೆ ಗೆಲುವಾಗ ಲಿದೆ ಎಂದರೆ, ಇನ್ನು ಕೆಲವು ಸಂಸ್ಥೆಗಳು ಸಮಬಲದ ಹೋರಾಟವಾಗಿದೆ ಎಂದು ಭವಿಷ್ಯ ನುಡಿದಿದೆ.
ಒಂದು ಸಮೀಕ್ಷಾ ಸಂಸ್ಥೆ ಎಂವಿಎ ಗೆಲ್ಲುವುದಾಗಿ ಸ್ಪಷ್ಟವಾಗಿ ಅಂದಾಜಿಸಿದೆ. ಕುತೂಹಲ ಸಂಪೂರ್ಣ ತಣಿಸುವಲ್ಲಿ ಸಮೀಕ್ಷಾ ಸಂಸ್ಥೆಗಳ ಕೈಯಲ್ಲಿ ಸಾಧ್ಯವಾಗಿಲ್ಲ. ಪೋಲ್ ಡೈರಿ, ಪೀಪಲ್ಸ್ ಪಲ್ಸ್, ಮ್ಯಾಟ್ರೈಜ್ , ಜೆವಿಸಿ,ಚಾಣಕ್ಯಗಳು ಮಹಾಯುತಿಗೆ ಬಹುಮತ ಬರಲಿವೆ ಎಂದು ಹೇಳಿವೆ. ಪಿ.ಮಾರ್ಕ್, ಲೋಕಶಾಹಿ-ಮರಾಠಿ ರುದ್ರ ಮತ್ತು ದೈನಿಕ್ ಭಾಸ್ಕರ್ ಸಮೀಕ್ಷೆಯ ಅಂದಾಜು ಸಮಬಲದ ಹೋರಾಟ ನಡೆದಿದ್ದು ಯಾವ ಒಕ್ಕೂಟವಾದರೂ ಅಸ್ತಿತ್ವಕ್ಕೆ ಬರಲು ಅವಕಾಶವಿದೆ ಎಂದು ಧ್ವನಿಸಿದೆ.
ಎಲೆಕ್ಟೊರಲ್ ಎಡ್ಜ್ ಮಾತ್ರ ಎಂವಿಎ ಅಧಿಕಾರಕ್ಕೆ ಬರುವುದು ಖಚಿತ ಎಂದಿದೆ. ಪೀಪಲ್ಸ್ ಪಲ್ಸ್ ಮಹಾಯುತಿಗೆ 175 ರಿಂದ 195 ಸ್ಥಾನ ನೀಡಿದರೆ, ಮ್ಯಾಟ್ರಿಜ್ 150ರಿಂದ 170, ಜೆವಿಸಿ 150 ರಿಂದ 167 ಮತ್ತು ಚಾಣಕ್ಯ 152 ರಿಂದ 160 ಸ್ಥಾನಗಳನ್ನು ನೀಡಿ ಸ್ಪಷ್ಟ ಬಹುಮತ ಬರಲಿದೆ ಎಂದು ಅಂದಾಜಿಸಿದೆ.
ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಮಹಾಯುತಿಗೆ 137 ರಿಂದ 157 ಸ್ಥಾನಗಳು ದೊರೆತರೆ, ಎಂವಿಎಗೆ 126 ರಿಂದ 146 ಸ್ಥಾನಗಳು ದೊರೆಯಲಿವೆ. ಮಹಾಯುತಿ ಕೊಂಚ ಹೆಚ್ಚಿನ ಸ್ಥಾನ ನೀಡಿದ್ದರೂ, ಎಂವಿಎ ಕೂಡ ಬಹುಮತ ಪಡೆಯಬಹುದು ಎಂದು ಹೇಳಿದೆ. ಅದೇ ರೀತಿ ಲೋಕಶಾಹಿ ಮರಾಠಿ ರುದ್ರ, ಪೋಲ್ ಡೈರಿ ಮತ್ತು ದೈನಿಕ್ ಭಾಸ್ಕರ್ ಅಭಿಪ್ರಾಯ ಸಂಗ್ರಹ ಸಾರವಿದೆ. ಅದರ ಪ್ರಕಾರ ತೀವ್ರ ಸೆಣೆಸಾಟವಿದ್ದು, ಎಂವಿಎ ಬಹುಮತ ಪಡೆಯಬಹುದು. ಎಲೆಕ್ಟೊರಲ್ ಎಡ್ಜ್ ಪ್ರಕಾರ ಎಂವಿಎ 150 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದರೆ,
ಮಹಾಯುತಿ 118ಕ್ಕೆ ತೃಪ್ತವಾಗಬೇಕಾಗುತ್ತದೆ.
ಜಾರ್ಖಂಡ್ : ಜೆವಿಸಿ, ಮ್ಯಾಟ್ರಿಜ್ ಮತ್ತು ಪೀಪಲ್ಸ್ ಪಲ್ಸ್ ಜಾರ್ಖಂಡ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಮುನ್ನಡೆಯನ್ನು ಅಂದಾಜಿಸಿದೆ. ಆದರೆ ಆಕ್ಸಿಸ್ ಮೈ ಇಂಡಿಯಾ ಜೆಎಂಎಂಗೆ ಬಹುಮತ ಸಿಗಲಿದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದಲ್ಲಿ ಸೊರೆನ್ ಸರ್ಕಾರವನ್ನು ಕಿತ್ತೊಗೆಯಲು ಭಾರಿ ಪ್ರಯತ್ನ ನಡೆಸಿದ್ದಾರೆ.
ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಡಳಿತಾರೂಢ ಜೆಎಂಎಂ ನೇತೃತ್ವದ ಭಾರತದ ಮೇಲೆ ಕೇಂದ್ರೀಕೃತವಾಗಿದೆ. ಮೂರು ಎಕ್ಸಿಟ್ ಪೋಲ್‌ಗಳು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ವಿಜಯಶಾಲಿಯಾಗಲಿವೆ ಎಂದು ಭವಿಷ್ಯ ನುಡಿದಿದೆ.