Sunday, January 25, 2026
Flats for sale
Homeದೇಶನವದೆಹಲಿ : ಮಮತಾ ಬ್ಯಾನರ್ಜಿ ದೀದಿ ಐಪ್ಯಾಕ್ ಕಂಪನಿಗೆ ಅಸ್ತಿತ್ವವೇ ಇಲ್ಲದ ಸಂಸ್ಥೆಯಿಂದ 13 ಕೋಟಿ...

ನವದೆಹಲಿ : ಮಮತಾ ಬ್ಯಾನರ್ಜಿ ದೀದಿ ಐಪ್ಯಾಕ್ ಕಂಪನಿಗೆ ಅಸ್ತಿತ್ವವೇ ಇಲ್ಲದ ಸಂಸ್ಥೆಯಿಂದ 13 ಕೋಟಿ ಸಾಲ,ಇಕ್ಕಟ್ಟಿಗೆ ಸಿಲುಕಿದ ದೀದಿ.

ನವದೆಹಲಿ : ಮಮತಾ ಬ್ಯಾನರ್ಜಿಗೆ ರಾಜಕೀಯ ಸಲಹೆ ನೀಡುತ್ತಿದ್ದ ಐ-ಪ್ಯಾಕ್ ಸಂಸ್ಥೆಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ತನ್ನ ಹಣಕಾಸು
ಮೂಲವನ್ನು ತನಿಖಾ ಸಂಸ್ಥೆ ಇ.ಡಿಗೆ ನೀಡಲಾಗದೆ ಇಕ್ಕಟ್ಟಿಗೆ ಸಿಲುಕಿದೆ ಎಂದು ವರದಿಯಾಗಿದೆ.

೨೦೨೧ರಲ್ಲಿ ಹರಿಯಾಣದ ರೋಹ್ಟಲ್ ಮೂಲದ ಸಂಸ್ಥೆಯಿAದ ಐ-ಪ್ಯಾಕ್ ೧೩.೫ ಕೋಟಿ ರೂ. ಸಾಲವನ್ನು ಪಡೆದಿತು. ಇದೀಗ ಈ ಸಾಲ ನೀಡಿದ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ತಿಳಿದು ಬಂದಿದೆ. ಹರಿಯಾಣದ ರೋಹ್ಟಕ್ ಮೂಲದ ಸಂಸ್ಥೆ ೨೦೨೧ಕ್ಕೂ ಮುಂಚೆಯೇ ಬಂದ್ ಆಗಿದೆ. ಆದರೂ ಅದರ ಹೆಸರಲ್ಲಿ ಐ-ಪ್ಯಾಕ್‌ಗೆ 13 ಕೋಟಿ ಸಾಲ ಪಾವತಿ ಆಗಿದೆ. ಇದರಿಂದ ಮಮತಾ ಬ್ಯಾನರ್ಜಿ ರಾಜಕೀಯ ಸಲಹಾ ಸಂಸ್ಥೆಯ ಹಣಕಾಸು ಮೂಲ ಹಾಗೂ ಆದಾಯದ ಮೇಲೆ ಭಾರಿ ದೊಡ್ಡ ಪ್ರಶ್ನೆಯೊಂದು ಎದ್ದಿದೆ.

ಬಹಿರಂಗ ಪಡಿಸಿರುವ ತನ್ನ ಹಣಕಾಸು ಮಾಹಿತಿಯಲ್ಲಿ, ಸಾಲ ನೀಡಿರುವ ಸಂಸ್ಥೆಯನ್ನು ರಾಮಸೇತು ಇನ್‌ಫ್ರಾಸ್ಟçಕ್ಚರ್ ಎಂದು ಐ-ಪ್ಯಾಕ್ ಹೇಳಿದೆ. ಆದರೆ ಇ.ಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ರಾಮ ಸೇತು ಇನ್‌ಫ್ರಾಸ್ಟçಕ್ಚರ್ ಎಂಬ ಸಂಸ್ಥೆಯೇ ಅಸ್ತಿತ್ವದಲ್ಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular