ನವದೆಹಲಿ : 2030 ರ ಪ್ರತಿಷ್ಠಿತ ಕಾಮನ್‌ವೆಲ್ತ್ ಆತಿಥ್ಯದ ಹಕ್ಕನ್ನು ಅಧಿಕೃತವಾಗಿ ಭಾರತಕ್ಕೆ ನೀಡಲಾಗಿದೆ. ಬುಧವಾರ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯಲ್ಲಿ ಅಹಮದಾಬಾದ್‌ಗೆ ಆತಿಥ್ಯದ ಹಕ್ಕನ್ನು ನೀಡಲಾಯಿತು.
ಭಾರತ ಅಥ್ಲೀಟ್‌ನ ದಂತಕತೆ ಹಾಗೂ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಆತಿಥ್ಯದ ಹಕ್ಕನ್ನು ಪಡೆದರು. ಇದರೊಂದಿಗೆ ಎರಡು ದಶಕಗಳ ಬಳಿಕ ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ. 2010ರಲ್ಲಿ ರಾಷ್ಟçರಾಜಧಾನಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು. ಕಳೆದ ತಿಂಗಳು ಕಾಮನ್‌ವೆಲ್ತ್ಕ್ರೀ ಡಾಕೂಟದ ಕಾರ್ಯನಿರ್ವಾಹಕರ ಮಂಡಳಿಯ 74 ಸದಸ್ಯರು ಭಾರತಕ್ಕೆ ಕ್ರೀಡಾಕೂಟದ ಆತಿಥ್ಯದ ಹಕ್ಕನ್ನು ನೀಡಬೇಕೆಂದು ಶಿಫಾರಸ್ಸು ಮಾಡಿದ್ದರು ಅಹಮದಾಬಾದ್ ನಗರಕ್ಕೆ 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಹಕ್ಕನ್ನ ಗ್ಲಾಸ್ಗೊದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ನೀಡಲಾಯಿತು.
ಇದರೊಂದಿಗೆ ಭಾರತ ಹೊಸಮೈಲಿಗಲ್ಲು ಸೃಷ್ಟಿಸಿದ್ದು ಜಾಗತಿಕ ಮಟ್ಟದಲ್ಲಿ ಭಾರತ ಕ್ರೀಡೆಯಲ್ಲಿ ಶಕ್ತಿ ಕೇಂದ್ರವಾಗಿದೆ.
ಗ್ಲಾಸ್ಗೊದ ಸಾಮಾನ್ಯ ಸಭೆಯಲ್ಲಿ ಕ್ರೀಡಾಕೂಟದ ಹಕ್ಕನ್ನು ಭಾರತಕ್ಕೆ ನೀಡುತ್ತಿದ್ದಂತೆ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. 20 ಗರ್ಬಾ ನೃತ್ಯಗಾರರು ಮತ್ತು 3೦ ಡೋಲು ಡ್ರಮ್ಮರ್‌ಗಳು ಸಾಮಾನ್ಯ ಸಭೆಗ ಆಗಮಿಸಿ ತಮ ಕಲೆಯನ್ನು ಸಾಮಾನ್ಯ ಸಭೆಯಲ್ಲಿ ಪ್ರದರ್ಶಿಸಿದರು. ಗುಜರಾತ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತಿರುವುದಕ್ಕೆ ಇಡೀ ಭಾರತಕ್ಕೆ ಹೆಮ್ಮಯ ವಿಚಾರವಾಗಿದೆ.
ಆತಿಥ್ಯದ ಹಕ್ಕನ್ನು ಪಡೆದ ನಂತರ, ಕಾಮನ್‌ವೆಲ್ತ್ ಸ್ಪೋರ್ಟ್ ನಮಗೆ ನೀಡಿದ ಭರವಸೆಯಿಂದ ನಮಗೆ ಹೆಮ್ಮೆ ಅನಿಸಿದೆ. ಈ ಆತಿಥ್ಯ ಅಥ್ಲೀಟ್, ಸಮುದಾಯ ಮತ್ತು ಸಂಸ್ಕೃತಿಯನ್ನು ಒಂದಡೆ ಸೇರಿಸಲಿದೆ ಎಂದು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಪಿ.ಟಿ.ಉಷಾ ಸಂತಸ ಹಂಚಿಕೊAಡರು. ಭಾರತದಲ್ಲಿ ನಡೆಯುವ ೨೦೨೩೦ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 15ರಿಂದ 17 ವಿಭಾಗಗಳಲ್ಲಿ ಕ್ರೀಡೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.ವೇಳಾಪಟ್ಟಿ ಮುAದಿನ ವರ್ಷ ಎಂದು ತಿಳಿದುಬಂದಿದೆ.


